ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ – ಇಂಡಿಯಾ ಟುಡೆ- ಸಿ ವೋಟರ್ ಸಮೀಕ್ಷಾ ವರದಿ ಬಹಿರಂಗ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ – ಇಂಡಿಯಾ ಟುಡೆ- ಸಿ ವೋಟರ್ ಸಮೀಕ್ಷಾ ವರದಿ ಬಹಿರಂಗ

ಹೊಸದಿಲ್ಲಿ : ಲೋಕಸಭೆ ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿ ಇರುವಂತೆ ರಾಜಕೀಯ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಕಳೆದ 9 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಇಂಡಿಯಾ ಟುಡೆ- ಸಿ ವೋಟರ್ ನಡೆಸಿದ ಸಮೀಕ್ಷೆಯ ವರದಿ ಹೊರಬಿದ್ದಿದೆ.

ಸಮೀಕ್ಷೆ ಪ್ರಕಾರ, ಮೋದಿ ಅವರ ಉತ್ತರಾಧಿಕಾರ ಸ್ಥಾನಕ್ಕೆ ಸಮರ್ಪಕ ವ್ಯಕ್ತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎನ್ನುವುದು ಬಹುಪಾಲು ಜನರ ಅಭಿಪ್ರಾಯವಾಗಿದೆ. ಶೇ 29ರಷ್ಟು ಜನರು ಅಮಿತ್ ಶಾ ಪರ ಒಲವು ತೋರಿಸಿದ್ದಾರೆ. ಇನ್ನು ಶೇ 26ರಷ್ಟು ಮಂದಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪರ ಬ್ಯಾಟ್ ಬೀಸಿದ್ದಾರೆ. ಶೇ 15ರಷ್ಟು ಜನರು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಹೆಸರನ್ನು ಸೂಚಿಸಿದ್ದಾರೆ.

ಜನರ ಒಲವು ಯಾರ ನಾಯಕತ್ವಕ್ಕಿದೆ?

ಶೇ 52ರಷ್ಟು ಮಂದಿ ಪ್ರಧಾನಿ ನರೇಂದ್ರ ಮೋದಿ ಅವರೇ ಅಧಿಕಾರ ನಡೆಸಲು ಸೂಕ್ತ ನಾಯಕ ಎಂದು ಹೆಸರನ್ನು ಸೂಚಿಸಿದ್ದಾರೆ. ಶೇ 63ರಷ್ಟು ಮಂದಿ ಮೋದಿ ಆಡಳಿತದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಈ ಪ್ರಮಾಣ ಶೇ 9ರಷ್ಟು ಕುಸಿತ ಕಂಡಿದೆ. ಜನವರಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಮೋದಿ ಆಡಳಿತ ತೃಪ್ತಿಕರ ಎಂದು ಶೇ 72ರಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದರು.

ಶೇ 13ರಷ್ಟು ಜನರು ಮೋದಿ ಆಡಳಿತ ಸಾಮಾನ್ಯ ಎಂದಿದ್ದರೆ, ಶೇ 22ರಷ್ಟು ಜನರು ಕಳಪೆ ಎಂದು ಹೇಳಿದ್ದಾರೆ. ಇನ್ನು ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಸೂಕ್ತ ಅಭ್ಯರ್ಥಿ ಎಂದು ಶೇ 16ರಷ್ಟು ಜನರು ತಿಳಿಸಿದ್ದಾರೆ.

ಬಿಜೆಪಿಯ ಯಾವ ನಿಲುವಿಗೆ ಜನರ ಒಲವು?

ಶೇ 44ರಷ್ಟು ಮಂದಿ ನರೇಂದ್ರ ಮೋದಿ ಅವರ ಕಾರಣಕ್ಕೆ ಬಿಜೆಪಿಗೆ ಮತ ಹಾಕುವುದಾಗಿ, ಶೇ 22ರಷ್ಟು ಜನರು ಅಭಿವೃದ್ಧಿಯ ಕಾರಣ ನೀಡಿದ್ದರೆ, ಶೇ 14ರಷ್ಟು ಮಂದಿಗೆ ಹಿಂದುತ್ವಕ್ಕೆ ಬಿಜೆಪಿಗೆ ಮತ ಚಲಾಯಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 24ರಷ್ಟು ಮಂದಿ ಪ್ರಸ್ತುತ ಬೆಲೆ ಏರಿಕೆ ಮಹತ್ವದ ಸಮಸ್ಯೆಯಾಗಿದೆ, ಅದಲ್ಲದೆ ಶೇ 8 ರಷ್ಟು ಮಂದಿ ಬಡತನ ಹೆಚ್ಚು ಸೃಷ್ಟಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿಗೆ ಹೆಚ್ಚಿದ ಒಲವು

ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಸಾಧನೆ ಅದ್ಭುತವಾಗಿದೆ ಎಂದು ಶೇ 34ರಷ್ಟು ಮಂದಿ ಹೇಳಿದ್ದಾರೆ. ಶೇ.18ರಷ್ಟು ಜನರಿಗೆ ಪ್ರದರ್ಶನ ಉತ್ತಮವಾಗಿದೆ ಎನಿಸಿದೆ. ಶೇ 15ರಷ್ಟು ಮಂದಿ ಸಾಮಾನ್ಯ ಎಂದರೆ, ಇನ್ನು ಶೇ 27ರಷ್ಟು ಜನರು ಕಳಪೆ ಎಂದಿದ್ದಾರೆ. ಭಾರತ್ ಜೋಡೋ ಯಾತ್ರೆ ಬಳಿಕ ರಾಹುಲ್ ಗಾಂಧಿ ಕುರಿತಾದ ಅಭಿಪ್ರಾಯ ಸುಧಾರಣೆಯಾಗಿದೆ ಎಂದು ಶೇ 44ರಷ್ಟು ಮಂದಿ ಹೇಳಿದ್ದಾರೆ. ಶೇ 33ರಷ್ಟು ಜನರು ತಮ್ಮ ಅಭಿಪ್ರಾಯ ಬದಲಾಗಿಲ್ಲ ಎಂದಿದ್ದಾರೆ. ಶೇ 13ರಷ್ಟು ಮಂದಿ, ಇನ್ನೂ ಕೆಟ್ಟದ್ದಾಗಿದೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ಇದೆಯೇ ಎಂಬ ಪ್ರಶ್ನೆಗೆ ಶೇ 33ರಷ್ಟು ಮಂದಿ ಹೌದು ಎಂದಿದ್ದಾರೆ. ಆದರೆ ಶೇ 54ರಷ್ಟು ಜನರು, ಬಿಜೆಪಿಯನ್ನು ಮಣಿಸುವ ತಾಕತ್ತು ವಿಪಕ್ಷಗಳಿಗೆ ಇಲ್ಲ ಪ್ರತಿಕ್ರಿಯಿಸಿದ್ದಾರೆ.

ಗಾಂಧಿ ಇಲ್ಲದ ಕಾಂಗ್ರೆಸ್ ಉತ್ತಮ ಎಂದಾ ಮತದಾರರು

ಗಾಂಧಿ ಕುಟುಂಬದ ಹಸ್ತಕ್ಷೇಪಗಳಿಲ್ಲದೆ ಇದ್ದರೆ ಕಾಂಗ್ರೆಸ್ ಉತ್ತಮವಾಗಿ ಬೆಳೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಶೇ 49ರಷ್ಟು ಜನರು ಹೌದು ಎಂದಿದ್ದಾರೆ. ಶೇ 34ರಷ್ಟು ಜನರಿಗೆ ಗಾಂಧಿ ಕುಟುಂಬವು ಕಾಂಗ್ರೆಸ್‌ಗೆ ಅತ್ಯಗತ್ಯ ಎನಿಸಿದೆ.

ಆದರೆ ಕಾಂಗ್ರೆಸ್ ಪುನಶ್ಚೇತನದ ನೇತೃತ್ವ ವಹಿಸಲು ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ ಎಂದು ಶೇ 32ರಷ್ಟು ಜನರು ಹೇಳಿದ್ದಾರೆ. ಅವರ ನಂತರ ಸಚಿನ್ ಪೈಲಟ್ ಪರ ಶೇ 12ರಷ್ಟು ಮಂದಿ ತಮ್ಮ ಮತ ಹಾಕಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪರ ಹೆಚ್ಚಿನ ಒಲವು ತೋರಿಲ್ಲ.
ವಿರೋಧ ಪಕ್ಷವಾಗಿ ಕಾಂಗ್ರೆಸ್ ಸಾಧನೆ ಉತ್ತಮವಾಗಿದೆ ಎಂದು ಶೇ 43ರಷ್ಟು ಜನರು ಹೇಳಿದ್ದಾರೆ. ಶೇ 17ರಷ್ಟು ಮಂದಿಗೆ ಸಾಮಾನ್ಯ ಪ್ರದರ್ಶನ ಎನಿಸಿದ್ದರೆ, ಶೇ 34ರಷ್ಟು ಮಂದಿ ಕಳಪೆ ಎಂದು ಟೀಕಿಸಿದ್ದಾರೆ.

ಮೋದಿ ಸರ್ಕಾರದ ದೊಡ್ಡ ವೈಫಲ್ಯಗಳು

ಬೆಲೆ ಏರಿಕೆಯು ನರೇಂದ್ರ ಮೋದಿ ಸರ್ಕಾರದ ಅತ್ಯಂತ ದೊಡ್ಡ ವೈಫಲ್ಯ ಎಂದು ಶೇ 25ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ನಿರುದ್ಯೋಗ ಹೆಚ್ಚಾಗಿದೆ ಎಂದು ಶೇ 17ರಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಶೇ.12ರಷ್ಟು ಜನರು ಆರ್ಥಿಕ ಬೆಳವಣಿಗೆ ಹಿನ್ನಡೆಯಾಗಿದೆ ಎಂದಿದ್ದಾರೆ.

ಶೇ 59ರಷ್ಟು ಜನರು ಮೋದಿ ನೇತೃತ್ವದ ಎನ್‌ಡಿಎ ಆಡಳಿತ ತೃಪ್ತಿಕರವಾಗಿದೆ ಎಂದಿದ್ದಾರೆ. ಶೇ 19ರಷ್ಟು ಮಂದಿ ಸರ್ಕಾರದ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸರ್ಕಾರದ ಅತಿ ದೊಡ್ಡ ಸಾಧನೆಗಳಲ್ಲಿ ಕೋವಿಡ್ ನಿರ್ವಹಣೆ (ಶೇ 21) ಮೊದಲ ಸ್ಥಾನದಲ್ಲಿದೆ. ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಶೇ 13 ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಶೇ 12ರಷ್ಟು ಜನರು ಸ370ನೇ ವಿಧಿ ರದ್ದತಿಯನ್ನು ಶ್ಲಾಘಿಸಿದ್ದಾರೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *