ನಿಮ್ಮ ವೆಹಿಕಲ್ ಫಾಸ್ಟ್ ಟ್ಯಾಗ್ KYC ಆಗಿದ್ಯಾ…? ಜ.31 ಡೆಡ್ ಲೈನ್ – ಇಲ್ಲಾಂದ್ರೆ ಟ್ಯಾಗ್ ರದ್ದು..! ಲೇಟ್ ಮಾಡ್ಬೇಡಿ..

ನಿಮ್ಮ ವೆಹಿಕಲ್ ಫಾಸ್ಟ್ ಟ್ಯಾಗ್ KYC ಆಗಿದ್ಯಾ…? ಜ.31 ಡೆಡ್ ಲೈನ್ – ಇಲ್ಲಾಂದ್ರೆ ಟ್ಯಾಗ್ ರದ್ದು..! ಲೇಟ್ ಮಾಡ್ಬೇಡಿ..

ನ್ಯೂಸ್ ಆ್ಯರೋ : ನಾವು ವಾಹನಗಳನ್ನು ಹೊಂದಿದ್ದರೆ ಸಂಚರಿಸುವಾಗ ಅಥವಾ ಪ್ರಯಾಣಿಸಲು ಕೆಲವು ಅದರದ್ದೇ ಆದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ವಾಹನ ಸಂಚಾರಕ್ಕೆ ಲೈಸೆನ್ಸ್ ಎಷ್ಟು ಅಗತ್ಯವೋ ಅದೇ ರೀತಿ ಫಾಸ್ಟ್ ಟ್ಯಾಗ್ ಗಳು ಕೂಡಾ ಅಷ್ಟೇ ಅಗತ್ಯವಾಗಿರುತ್ತದೆ. ಒಂದು ವಾಹನಕ್ಕೆ ಒಂದೇ ಫಾಸ್ಟ್‌ ಟ್ಯಾಗ್ ಇರಬೇಕು ಅನ್ನೋದು ಸರ್ಕಾರದ ನಿಯಮ. ಒಂದು ವಾಹನ ಒಂದು ಫಾಸ್ಟ್‌ ಟ್ಯಾಗ್ ಅನ್ನೋ ನೀತಿಯ ಅನ್ವಯ ವಾಹನ ಮಾಲೀಕರು ತಮ್ಮ ವಾಹನದ ಫಾಸ್ಟ್‌ ಟ್ಯಾಗ್‌ ಕೆವೈಸಿ ಪೂರ್ಣಗೊಳಿಸೋದು ಕಡ್ಡಾಯವಾಗಿದೆ. ಒಂದು ವೇಳೆ ಜನವರಿ 31ರ ಒಳಗೆ ವಾಹನ ಸವಾರರು ತಮ್ಮ ಕೆವೈಸಿ ಪೂರ್ಣಗೊಳಿಸದೇ ಇದ್ದರೆ ಫಾಸ್ಟ್‌ ಟ್ಯಾಗ್‌ನಲ್ಲಿ ಎಷ್ಟೇ ಬ್ಯಾಲೆನ್ಸ್‌ ಬಾಕಿ ಉಳಿದಿದ್ದರೂ ಕೂಡಾ ಅದು ರದ್ದತಿ ಆಗಲಿದೆ ಎಂಬ ಶಾಕಿಂಗ್ ಮಾಹಿತಿ ಹೊರಬಿದ್ದಿದೆ.

ವಾಹನಗಳಲ್ಲಿ ಅಳವಡಿಕೆ ಮಾಡಿರುವ ಫಾಸ್ಟ್‌ ಟ್ಯಾಗ್ ಸಂಬಂಧ ಹೊಸ ಅಪ್‌ಡೇಟ್ ಒಂದು ಹೊರ ಬಿದ್ದಿದೆ. ಎಲ್ಲ ರೀತಿಯ ಫಾಸ್ಟ್‌ ಟ್ಯಾಗ್‌ಗಳ ಕೆವೈಸಿ (Know Your Customer – KYC) ಆಗಿರಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಜನವರಿ 31ರ ಒಳಗೆ ಫಾಸ್ಟ್‌ ಟ್ಯಾಗ್‌ಗಳ ಕೆವೈಸಿ ಪೂರ್ಣಗೊಳಿಸಲು ಡೆಡ್‌ ಲೈನ್ ನೀಡಲಾಗಿದೆ.

ಒಂದು ವೇಳೆ ಜನವರಿ 31ರ ಒಳಗೆ ನಿಮ್ಮ ವಾಹನದ ಫಾಸ್ಟ್‌ ಟ್ಯಾಗ್‌ನ ಕೆವೈಸಿ ಪೂರ್ಣಗೊಳಿಸದೇ ಇದ್ದರೆ ಅಂಥಾ ಫಾಸ್ಟ್‌ ಟ್ಯಾಗ್‌ಗಳನ್ನು ರದ್ದು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ನಿಮ್ಮ ವಾಹನದ ಫಾಸ್ಟ್‌ ಟ್ಯಾಗ್‌ನ ಕೆವೈಸಿ ಮಾಡಿಸದೆ ಅದು ಜನವರಿ 31ರ ಬಳಿಕ ರದ್ದಾದರೆ ಟೋಲ್ ಬೂತ್‌ಗಳಲ್ಲಿ ಶುಲ್ಕ ಪಾವತಿ ಮಾಡುವಾಗ ತೊಂದರೆ ಎದುರಾಗಲಿದೆ.

ಫಾಸ್ಟ್‌ ಟ್ಯಾಗ್ ಕೆವೈಸಿ ಏಕೆ ಮುಖ್ಯ?

ವಾಹನಗಳಲ್ಲಿ ಬಳಕೆಯಾಗುವ ಎಲ್ಲ ಫಾಸ್ಟ್‌ ಟ್ಯಾಗ್‌ಗಳ ಕೆವೈಸಿ ಪೂರ್ಣ ಆಗಿರಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಒಂದೇ ಫಾಸ್ಟ್‌ ಟ್ಯಾಗ್‌ ಅನ್ನು ಹಲವು ವಾಹನಗಳಿಗೆ ಬಳಕೆ ಮಾಡೋದನ್ನು ತಡೆಯಲು ಇದು ಅತ್ಯಗತ್ಯವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳ ಪ್ರಕಾರ ಫಾಸ್ಟ್‌ ಟ್ಯಾಗ್ ಬಳಕೆದಾರರು ತಮ್ಮ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸೋದು ಅತ್ಯಗತ್ಯ. ಜೊತೆಗೆ ಇದು ಕಡ್ಡಾಯ ಕೂಡಾ.

ಒಂದು ವೇಳೆ ಜನವರಿ 31ರ ಒಳಗೆ ಕೆವೈಸಿ ಪೂರ್ಣಗೊಳಿಸದೆ ಇದ್ದರೆ ನಿಮ್ಮ ಫಾಸ್ಟ್‌ ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಹಣ ಇದ್ದರೂ ಕೂಡಾ ಕೆವೈಸಿ ಅಪೂರ್ಣವಾದ ಕಾರಣ ಬ್ಯಾಂಕ್‌ನಿಂದ ಫಾಸ್ಟ್‌ ಟ್ಯಾಗ್ ನಿಷ್ಕ್ರಿಯ ಆಗಲಿದೆ.

ಒಂದು ವಾಹನ – ಒಂದು ಫಾಸ್ಟ್‌ ಟ್ಯಾಗ್ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಇದೇ ನೀತಿಯನ್ನು ಜನರೂ ಕೂಡಾ ಪಾಲನೆ ಮಾಡಬೇಕಿದೆ. ಹೀಗಾಗಿ, ಹಿಂದೆ ತೆಗೆದುಕೊಂಡಿದ್ದ ಎಲ್ಲ ಫಾಸ್ಟ್‌ ಟ್ಯಾಗ್‌ಗಳನ್ನೂ ತ್ಯಜಿಸಬೇಕಿದೆ. ಒಂದು ವೇಳೆ ಹೀಗೆ ಮಾಡದಿದ್ದರೆ ಹಾಗೂ ಫಾಸ್ಟ್‌ ಟ್ಯಾಗ್ ಕೆವೈಸಿ ಮಾಡಿಸದೇ ಇದ್ದರೆ ಫಾಸ್ಟ್‌ ಟ್ಯಾಗ್ ಸ್ಥಗಿತ ಆಗಲಿದೆ. ಈ ಕುರಿತಾದ ಹೆಚ್ಚಿನ ಮಾಹಿತಿ ಪಡೆಯಲು ಸಮೀಪದ ಟೋಲ್ ಪ್ಲಾಜಾಗಳ ಬಳಿ ಹೋಗಬಹುದಾಗಿದೆ. ಅಥವಾ ಆಯಾ ಬ್ಯಾಂಕ್‌ಗಳ ಗ್ರಾಹಕ ಸೇವೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

ಫಾಸ್ಟ್‌ ಟ್ಯಾಗ್ ದುರ್ಬಳಕೆ ಹಾಗೂ ಟೋಲ್ ಬೂತ್‌ಗಳಲ್ಲಿ ವಾಹನಗಳ ಸಮರ್ಪಕ ನಿರ್ವಹಣೆ ಸೇರಿದಂತೆ ಹಲವು ಕಾರಣಗಳಿಂದಾಗಿ ಕೆವೈಸಿ ಮಾಡಿಸೋದು ಅತಿ ಮುಖ್ಯವಾಗಿದ್ದು, ವಾಹನ ಸವಾರರು ಆದಷ್ಟು ಬೇಗ ಸ್ಪಂದಿಸಬೇಕಿದೆ.

ಕೆವೈಸಿ ಆಗಿದೆಯೋ? ಇಲ್ಲವೋ? ಪರಿಶೀಲನೆ ಹೇಗೆ?

ವಾಹನ ಚಾಲಕರು, ಫಾಸ್ಟ್‌ ಟ್ಯಾಗ್ ಗ್ರಾಹಕರು ಸಂಬಂಧಪಟ್ಟ ಬ್ಯಾಂಕ್‌ ಸಂಪರ್ಕಿಸಿ ತಮ್ಮ ಪಾಸ್ಟ್‌ ಟ್ಯಾಗ್‌ನ ಕೆವೈಸಿ ಮಾಡಿಸಬಹುದು. ಇಲ್ಲವಾದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್ ಬೂತ್‌ಗಳಲ್ಲೂ ಈ ಕುರಿತು ಮಾಹಿತಿ ಪಡೆಯಬಹುದಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *