ಕೊನೆಗೂ ಖಲೀಸ್ಥಾನಿ ಉಗ್ರ ಅಮೃತ್ ಪಾಲ್ ಸಿಂಗ್ ಅರೆಸ್ಟ್ – ತಿಂಗಳ ಹುಡುಕಾಟದ ಬಳಿಕ ಪಂಜಾಬ್ ಪೋಲಿಸರ ಆಪರೇಷನ್ ಸಕ್ಸಸ್
- ರಾಷ್ಟ್ರೀಯ ಸುದ್ದಿ
- April 23, 2023
- No Comment
- 133
ನ್ಯೂಸ್ ಆ್ಯರೋ : ಪ್ರತ್ಯೇಕ ರಾಷ್ಟ್ರದ ಗುರಿಯೊಂದಿಗೆ ದೇಶದ್ರೋಹಿ ಕೃತ್ಯ ಎಸಗುತ್ತಿದ್ದಲ್ಲದೇ ತಲೆಮರೆಸಿಕೊಂಡಿದ್ದ ಉಗ್ರ ಅಮೃತ್ ಪಾಲ್ ಸಿಂಗ್ ನನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.
ವಾರಿಸ್ ಪಂಜಾಬ್ ದೆ ಸಂಘಟನೆ ಮುಖ್ಯಸ್ಥನಾಗಿರುವ ಅಮೃತ್ ಪಾಲ್ ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ. ಇದೀಗ ಕೊನೆಗೂ ಪಂಜಾಬ್ ಪೊಲೀಸರು ಖಲಿಸ್ಥಾನಿ ನಾಯಕ ಅಮೃತ್ ಪಾಲ್ ಸಿಂಗ್ ನನ್ನು ಬಂಧಿಸಿದ್ದಾರೆ. ಪಂಜಾಬ್ ನ ಮೋಗಾದಲ್ಲಿ ಅಮೃತ್ ಪಾಲ್ ನನ್ನು ವಶಕ್ಕೆ ಪಡೆಯಲಾಗಿದೆ.
ಮಾರ್ಚ್ 18ರಂದು ಪೊಲೀಸರು ಅಮೃತ್ ಪಾಲ್ ಸಿಂಗ್ ನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಆತ ಜಲಂಧರ್ ಜಿಲ್ಲೆಯಲ್ಲಿ ಪೊಲೀಸರ ಬಲೆಯಿಂದ ತಪ್ಪಿಸಿಕೊಂಡು, ವಾಹನಗಳನ್ನು ಬದಲಿಸಿ ಸಿನಿಮೀಯ ರೂಪದಲ್ಲಿ ಅಮೃತ್ ಪಾಲ್ ಎಸ್ಕೇಪ್ ಆಗಿದ್ದ.
ಅಮೃತ್ ಪಾಲ್ ಸಿಂಗ್ ನ ಪತ್ನಿ ಕಿರಣ್ ದೀಪ್ ಕೌರ್ ಅವರು ಗುರುವಾರ (ಏಪ್ರಿಲ್ 20) ಲಂಡನ್ ಗೆ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಅಮೃತಸರದ ಶ್ರೀ ಗುರು ರಾಮ್ ದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದು ಪ್ರಶ್ನೆ ಮಾಡಿದ್ದರು. ಅಲ್ಲದೇ ಆತ ನೇಪಾಳಕ್ಕೆ ಪರಾರಿಯಾಗಿದ್ದಾನೆ ಎಂದೂ ಹೇಳಲಾಗಿತ್ತು.