ದೇಶದ ಹೆಸರು ಇಂಡಿಯಾದ ಬದಲು ಭಾರತ ಎಂದು ಮರುನಾಮಕರಣ – ಮುಂದಿನ ಸೆ.18ರ ಅಧಿವೇಶನದಲ್ಲೇ ನಿರ್ಣಯಿಸಲು ಮೋದಿ ಮಾಸ್ಟರ್ ಪ್ಲ್ಯಾನ್..!!

ದೇಶದ ಹೆಸರು ಇಂಡಿಯಾದ ಬದಲು ಭಾರತ ಎಂದು ಮರುನಾಮಕರಣ – ಮುಂದಿನ ಸೆ.18ರ ಅಧಿವೇಶನದಲ್ಲೇ ನಿರ್ಣಯಿಸಲು ಮೋದಿ ಮಾಸ್ಟರ್ ಪ್ಲ್ಯಾನ್..!!

ನ್ಯೂಸ್ ಆ್ಯರೋ : ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ಸೆಪ್ಟೆಂಬರ್ 18-22 ರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರು ಇಂಡಿಯಾ (India) ಎಂಬುದನ್ನು ಭಾರತ್ (Bharat) ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಮಂಡಿಸುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಚೇರಿಯಿಂದ ಬಂದ G20 ಶೃಂಗಸಭೆ 2023 ರ ಭೋಜನಕೂಟ ಆಹ್ವಾನ ಪತ್ರಿಕೆಯಲ್ಲಿ ‘ಭಾರತದ ರಾಷ್ಟ್ರಪತಿ’ ಎಂದು ಬರೆಯಲಾಗಿದೆ. ಸಾಮಾನ್ಯವಾಗಿ ದ್ರೌಪದಿ ಮುರ್ಮು, ಪ್ರೆಸಿಡೆಂಟ್ ಆಫ್ ಇಂಡಿಯಾ ಎಂದು ಬರೆಯಲಾಗುತ್ತಿತ್ತು. ಆದರೆ ಇಲ್ಲಿ ಇಂಡಿಯಾ ಬದಲು ಭಾರತ್ ಎಂದು ಬರೆದಿರುವುದು ಕೇಂದ್ರ ಸರ್ಕಾರದ ಮುಂದಿನ ನಡೆ ಬಗ್ಗೆ ಸುಳಿವು ನೀಡಿದೆ.

ಸೆಪ್ಟೆಂಬರ್ 18 ರಿಂದ 22 ರವರೆಗೆ ಐದು ದಿನಗಳ ವಿಶೇಷ ಸಂಸತ್ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ಹೊಸ ಸಂಸತ್ ಭವನದಲ್ಲಿ ನಿರ್ಣಯವನ್ನು ಪ್ರಧಾನಿ ಮಂಡಿಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವಿಶೇಷ ಸಂಸತ್ ಅಧಿವೇಶನದಲ್ಲಿ ಪ್ರಶ್ನೋತ್ತರ ಸಮಯ, ಶೂನ್ಯ ಸಮಯ ಮತ್ತು ಖಾಸಗಿ ಸದಸ್ಯರ ವ್ಯವಹಾರ ಇರುವುದಿಲ್ಲ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ನಡೆಯುವ ಅಧಿವೇಶನಗಳಿಗೆ ಇದನ್ನು ನಿರ್ವಹಿಸಲಾಗುತ್ತದೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ರಚಿಸಿಕೊಂಡಿರುವ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂದು ಹೆಸರಿಟ್ಟಿರುವುದರಿಂದ ದೇಶದ ಹೆಸರನ್ನು ಭಾರತ್ ಎಂದು ಮರು ನಾಮಕರಣ ಮಾಡಲು ಪ್ರಧಾನಿ ಮೋದಿ ಮುಂದಾಗಿದ್ದಾರೆ.

ಅಲ್ಲದೆ, ಈ ಬಗ್ಗೆ ಬಿಜೆಪಿಯ ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ಯಾದವ್ ಮಾತನಾಡಿ, ದೇಶದ ಹೆಸರನ್ನು ಭಾರತ ಎಂದು ಬದಲಾಯಿಸಬೇಕು. ‘ಇಂಡಿಯಾ’ ಎಂಬ ಪದವನ್ನು ಬ್ರಿಟಿಷರು ಬಳಸಿದ್ದರು ಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗಷ್ಟೇ ವಿರೋಧ ಪಕ್ಷ ತನ್ನ ಮೈತ್ರಿಕೂಟಕ್ಕೆ I.N.D.I.A. ಮರುನಾಮಕರಣ ಮಾಡಿಕೊಂಡಿದ್ದಾರೆ. ಇದು ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಎನ್‌ಡಿಎಯನ್ನು ಎದುರಿಸಲು ಯೋಜಿಸಿರುವ ಸುಮಾರು 28 ಪಕ್ಷಗಳನ್ನು ಒಳಗೊಂಡಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಕೂಡಾ ಈ ಬದಲಾವಣೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ‘ಇಂಡಿಯಾ’ ಬದಲಿಗೆ ‘ಭಾರತ್’ ಎಂಬ ಪದವನ್ನು ಬಳಸಬೇಕೆಂದು ಭಾಗವತ್ ನಾಗರಿಕರನ್ನು ಒತ್ತಾಯಿಸಿದ್ದು, ದೇಶವನ್ನು ಶತಮಾನಗಳಿಂದ ಭಾರತ ಎಂದು ಕರೆಯಲಾಗುತ್ತದೆ ಎಂದು ಒತ್ತಿ ಹೇಳಿದರು.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *