ಇನ್ಮುಂದೆ ಕೇವಲ 600ರೂ.ಗೆ ಸಿಗುತ್ತೆ ಗ್ಯಾಸ್ ಸಿಲಿಂಡರ್‌ – ಬಿಡುಗಡೆಯಾಯ್ತು ಹೊಸ ಸಬ್ಸಿಡಿ ಪಟ್ಟಿ : ನಿಮ್ಮ ಹೆಸರು ಇದೆಯಾ ಅಂತ ಹೀಗೆ ಚೆಕ್ ಮಾಡಿ…!

ಇನ್ಮುಂದೆ ಕೇವಲ 600ರೂ.ಗೆ ಸಿಗುತ್ತೆ ಗ್ಯಾಸ್ ಸಿಲಿಂಡರ್‌ – ಬಿಡುಗಡೆಯಾಯ್ತು ಹೊಸ ಸಬ್ಸಿಡಿ ಪಟ್ಟಿ : ನಿಮ್ಮ ಹೆಸರು ಇದೆಯಾ ಅಂತ ಹೀಗೆ ಚೆಕ್ ಮಾಡಿ…!

ನ್ಯೂಸ್ ಆ್ಯರೋ : ಕೇಂದ್ರ ಸರ್ಕಾರದಿಂದ ಭಾರತೀಯ ಪ್ರತೀ ನಾಗರಿಕರಿಗೆ ಪ್ರಯೋಜನವಾಗುವ ದೃಷ್ಟಿಯಲ್ಲಿ ಏನಾದರೊಂದು ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇರುತ್ತದೆ. ಅದರಂತೆ ಉಜ್ವಲ ಯೋಜನೆ ಅಡಿಯಲ್ಲಿ ಇಂದು ಲಕ್ಷಾಂತರ ಕುಟುಂಬಗಳು ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದುಕೊಂಡಿದ್ದಾರೆ. ಇಂತಹ ಜನಗಳಿಗೆ ಪ್ರತಿ ವರ್ಷ 12 ಸಿಲಿಂಡರ್ ಖರೀದಿ ಮಾಡಲು ರೂ.200 ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಕೇಂದ್ರದಿಂದ ಮತ್ತೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ನೀಡಲು ನಿರ್ಧಾರವನ್ನು ಮಾಡಲಾಗಿದೆ.

ಸಬ್ಸಿಡಿ ಮೊತ್ತ ಇನ್ನಷ್ಟು ಏರಿಕೆ:

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸಬ್ಸಿಡಿ ಮೊತ್ತವನ್ನು ಇನ್ನಷ್ಟು ಏರಿಕೆ ಮಾಡಿದ್ದಾರೆ. ಅಂದರೆ 200 ರೂ ಇದ್ದ ಸಬ್ಸಿಡಿಯನ್ನು 300 ರೂ ಏರಿಸಲಾಗಿದೆ. ಹಾಗಾಗಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ KYC ಮಾಡಿಸಿ ಸಬ್ಸಿಡಿ ಪಟ್ಟಿಯಲ್ಲಿ ಹೆಸರನ್ನು ಸೇರಿಸಿಕೊಳ್ಳಲು ಸೂಚಿಸಲಾಗಿತ್ತು. ಈಗಾಗಲೇ KYC ಮಾಡಿಸಿರುವ ಗ್ಯಾಸ್ ಸಿಲಿಂಡರ್ ಬಳಕೆದಾರರ ಹೆಸರನ್ನು ಸಬ್ಸಿಡಿ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಈಗಾಗಲೇ ಕೇಂದ್ರ ಸರ್ಕಾರದಿಂದ ಎಲ್ಲಾ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೂ KYC ಮಾಡಿಸಲು ಸೂಚನೆಯನ್ನು ನೀಡಲಾಗಿತ್ತು. ಇದೀಗ KYC ಮಾಡಿಸಿರುವ ಕೆಲವು ಅರ್ಹ ಸಬ್ಸಿಡಿ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹೆಸರು ಇರುವ ಫಲಾನುಭವಿಗಳಿಗೆ ಇನ್ನು ಮುಂದೆ ಕೇವಲ 600 ರೂ ಗಳಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತದೆ. ನೀವು ಕೂಡ ಉಜ್ವಲ ಯೋಜನೆಯ ಗ್ಯಾಸ್ ಬಳಕೆದಾರರಾಗಿದ್ದಲ್ಲಿ ನಿಮ್ಮ ಹೆಸರು ಕೂಡ ಸಬ್ಸಿಡಿ ಫಲಾನುಭವಿಗಳ ಪಟ್ಟಿಯಲ್ಲಿದೆಯೇ ಎಂಬುದನ್ನು ಚೆಕ್‌ ಮಾಡಿಕೊಳ್ಳಬಹುದಾಗಿದೆ.

ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಟ್ಟಿ

ಇದರಲ್ಲಿ ನಿಮ್ಮ ಹೆಸರು ಇದೆಯೇ ಅನ್ನುವುದನ್ನು ಚೆಕ್ ಮಾಡುವುದು ಹೇಗೆ ಎಂಬುದಕ್ಕೆ ಕೆಳಗಿನ ಹಂತಗಳನ್ನು ಅನುಸರಿಸಿ:

  1. ಮೊದಲು ಇಲಾಖೆಯ ಅಧಿಕೃತ ವೆಬ್ಸೈಟ್ಗೆ(official website) https://www.mylpg.in/ ಭೇಟಿ ನೀಡಿ.
  2. ನಂತರ ವೆಬ್ಸೈಟ್ ಓಪನ್ ಆದ ನಂತರ bharat, HP, Indian ಈ ಮೂರು ಆಯ್ಕೆಗಳು ಕಾಣಿಸುತ್ತವೆ, ನೀವು ಯಾವ ಗ್ಯಾಸ್ ಸಿಲಿಂಡರ್ ಅಡಿಯಲ್ಲಿ ಗ್ಯಾಸ್ ಪಡೆದುಕೊಂಡಿದ್ದೀರಿ ಎಂಬುದನ್ನು ನೋಡಿ ಅದನ್ನು ಆಯ್ಕೆ ಮಾಡಿ.
  3. ನಂತರ ನಿಮಗೆ ಹೊಸ ಪುಟ ಓಪನ್ ಆಗುವುದು ಅದರ right side ಕಾಣುವ home ಮೇಲೆ ಕ್ಲಿಕ್ ಮಾಡಿ.
  4. ನಂತರ ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ಉಜ್ವಲ ಬೆನಿಫಿಶಿಯರಿ ಆಯ್ಕೆಇರುತ್ತದೆ ಅದನ್ನು ಆಯ್ಕೆ ಮಾಡಿ ನಂತರ ನಿಮ್ಮ ರಾಜ್ಯ ಜಿಲ್ಲೆ ಆಯ್ಕೆ ಮಾಡಿ ನಿಮ್ಮ ಗ್ಯಾಸ್ ಸಿಲಿಂಡರ್ ಪುಸ್ತಕದ ನಂಬರ್ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
  5. ಕೊನೆಯಲ್ಲಿ ನಿಮಗೆ ಸಬ್ಸಿಡಿ ಯೋಜನೆಗೆ ಅರ್ಹರಾಗಿರುವ ಫಲಾನುಭವಿಗಳ ಪಟ್ಟಿ (Selected list) ಕಾಣಿಸುತ್ತದೆ ಅದರಲ್ಲಿ ಹಲವು ಪುಟಗಳಲ್ಲಿ ಹೆಸರನ್ನು ತೋರಿಸಲಾಗುವುದು .

ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ ಒಂದು ವೇಳೆ ಪಟ್ಟಿಯಲ್ಲಿ ಹೆಸರು ಇದ್ದರೆ ನೀವು ಗ್ಯಾಸ್ ಸಿಲಿಂಡರ್ ಗೆ ರೂ.300 ಗಳ ಸಬ್ಸಿಡಿಯನ್ನು ಪಡೆಯಬಹುದು. ಒಂದು ವೇಳೆ ನೀವು ಇನ್ನೂ ಈ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಅಂದರೆ ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದುಕೊಳ್ಳಲು ಈಗಲೂ ಕೂಡ ಅವಕಾಶವಿದ್ದು, ಆನ್ಲೈನ್ ಮೂಲಕ ಅಥವಾ ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ಕೊಟ್ಟು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅಪ್ಲೈ ಮಾಡಿಕೊಳ್ಳಬೇಕು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *