ಇನ್ಮುಂದೆ ರೇಡಿಯೋದಲ್ಲಿ ಈ ಹಾಡುಗಳಿಗೆ ಇಲ್ಲ ಅನುಮತಿ: ಕೇಂದ್ರ ಸರ್ಕಾರದಿಂದ ಖಡಕ್ ಎಚ್ಚರಿಕೆ

ಇನ್ಮುಂದೆ ರೇಡಿಯೋದಲ್ಲಿ ಈ ಹಾಡುಗಳಿಗೆ ಇಲ್ಲ ಅನುಮತಿ: ಕೇಂದ್ರ ಸರ್ಕಾರದಿಂದ ಖಡಕ್ ಎಚ್ಚರಿಕೆ

ನ್ಯೂಸ್ ಆ್ಯರೋ: ರೇಡಿಯೋಗಳಲ್ಲಿ ಮದ್ಯ, ಮಾದಕ ವಸ್ತು, ಬಂದೂಕುಗಳ ಬಗೆಗಿರುವ ಹಾಡುಗಳನ್ನು ಪ್ರಸಾರ ಮಾಡದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಖಡಕ್ ಎಚ್ಚರಿಕೆಯನ್ನು ನೀಡಿದೆ. ಒಂದು ವೇಳೆ ಪ್ರಸಾರ ಮಾಡಿದ್ದಲ್ಲಿ ರೇಡಿಯೋ ಪರವಾನಿಗೆ ರದ್ದು ಗೊಳಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ರೇಡಿಯೋಗಳಲ್ಲಿ ಮದ್ಯ, ಮಾದಕ ವಸ್ತು ಹಾಗೂ ಬಂದೂಕುಗಳ ಬಗೆಗಿನ ಹಾಡುಗಳನ್ನು ಪ್ರಸಾರ ಮಾಡುವುದರಿಂದ ಮಕ್ಕಳಲ್ಲಿ ಗ್ಯಾಂಗ್‌ಸ್ಟಾರ್‌, ಅಪರಾಧ ಮನೋಭಾವವನ್ನು ಉಂಟು ಮಾಡಿಸುತ್ತದೆ ಎಂದು ಇಲಾಖೆಯು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಸಂಬಂಧ ಹರಿಯಾಣ ಹಾಗೂ ಪಂಜಾಬ್ ಹೈಕೋರ್ಟ್‌ ಆತಂಕ ವ್ಯಕ್ತಪಡಿಸಿತ್ತು.

ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಇಲಾಖೆಯು ರೇಡಿಯೋ ಚಾನೆಲ್‌ಗಳಿಗೆ ಆದೇಶ ಪತ್ರವನ್ನು ನೀಡಿದೆ. ಅದರಲ್ಲಿ ”ಮಾಹಿತಿ ಮತ್ತು ಪ್ರಸಾರ ಇಲಾಖೆಯ ಗಮನಕ್ಕೆ ಬಂದಿರುವಂತೆ ರೇಡಿಯೋ ಚಾನೆಲ್‌ಗಳಲ್ಲಿ ಮದ್ಯ, ಮಾದಕ ವಸ್ತು, ಬಂದೂಕು, ಭೂಗತ ಜಗತ್ತಿನ ವೈಭವೀಕರಣದ ಬಗೆಗಿನ ಹಾಡುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಘನವೆತ್ತ ಪಂಜಾಬ್ ಹಾಗೂ ಹರಿಯಾಣಾ ಹೈಕೋರ್ಟ್‌ಗಳು ಗಮನಿಸಿರುವಂತೆ ಈ ರೀತಿಯ ಹಾಡುಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಹಾಗೂ ಭೂಗತ ಲೋಕದ ಸಂಸ್ಕೃತಿಯನ್ನು ಹೆಚ್ಚು ಮಾಡಬಹುದು” ಎಂದು ವಿವರಿಸಿದ್ದಾರೆ.

ನಿಯಮ ಉಲ್ಲಂಘಿಸಿದರೆ ಪರವಾನಿಗೆ ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ:

ಎಲ್ಲ ರೇಡಿಯೋ ಚಾನೆಲ್‌ಗಳು ಕಾರ್ಯಕ್ರಮ ಹಾಗೂ ಜಾಹೀರಾತು ವಿಷಯದಲ್ಲಿ ಆಲ್ ಇಂಡಿಯಾ ರೇಡಿಯೋ ಮಾದರಿಯನ್ನು ಅನುಸರಿಸಬೇಕು ಎಂದು ಕೇಂದ್ರವು ಹೇಳಿದ್ದು, ಒಂದೊಮ್ಮೆ ಈ ರೀತಿಯ ಹಾಡುಗಳು ಮತ್ತೆ ಪ್ರಸಾರವಾದರೆ ಅವು ಎಐಆರ್‌ನ ನಿಯಮಾವಳಿಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಕೇಂದ್ರವು ಎಚ್ಚರಿಸಿದೆ.

ನಿಯಮಗಳು ಮತ್ತು ಷರತ್ತುಗಳನ್ನು ಅಥವಾ ಎಫ್ಎಮ್ ರೇಡಿಯೊ ನೀತಿಯ ಯಾವುದೇ ಇತರ ನಿಬಂಧನೆಗಳನ್ನು ಉಲ್ಲಂಘಿಸಿದರೆ, ಪರವಾನಗಿ ರದ್ದುಗೊಳಿಸಲಾಗುವುದು ಮತ್ತು ಪ್ರಸಾರವನ್ನು ಶಾಶ್ವತವಾಗಿ ನಿಷೇಧಿಸುವ ಹಕ್ಕನ್ನು ಸಹ ಬಳಸಬೇಕಾಗಬಹುದು ಎಂಬ ಕಠಿಣ ಎಚ್ಚರಿಕೆಯನ್ನು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆ ರೇಡಿಯೋ ಚಾನೆಲ್‌ಗಳಿಗೆ ನೀಡಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *