
ದೇಶದಲ್ಲೇ ಮೊದಲ ಬಾರಿಗೆ ನಂಬರ್ ಲೆಸ್ ಕ್ರೆಡಿಟ್ ಕಾರ್ಡ್ ಪರಿಚಯಿಸಿದ ಆ್ಯಕ್ಸಿಸ್ ಬ್ಯಾಂಕ್ – ಇದರ ಉಪಯೋಗವೇನು? ಬಳಕೆ ಯಾಕೆ?
- ಹಣಕಾಸು
- October 15, 2023
- No Comment
- 98
ನ್ಯೂಸ್ ಆ್ಯರೋ : ಆ್ಯಕ್ಸಿಸ್ ಬ್ಯಾಂಕ್ ನಂಬರ್‌ಲೆಸ್ ಕ್ರೆಡಿಟ್ ಕಾರ್ಡ್ ಅನ್ನು ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ. ಈ ಕಾರ್ಡ್‌ನಲ್ಲಿ ಯಾವುದೇ ಕಾರ್ಡ್ ಸಂಖ್ಯೆ, ಕಾರ್ಡ್ ಮುಕ್ತಾಯ ದಿನಾಂಕ ಹಾಗೂ ಸಿವಿವಿ ಸಂಖ್ಯೆ ಸಹ ಇರುವುದಿಲ್ಲ.
ಫೈಬ್ ಆಕ್ಸಿಸ್ ಬ್ಯಾಂಕ್ ನಂಬರ್‌ಲೆಸ್ ಕ್ರೆಡಿಟ್ ಕಾರ್ಡ್:
ಆಕ್ಸಿಸ್ ಬ್ಯಾಂಕ್ ಮತ್ತು ಫೈಬ್ (ಇದನ್ನು ಈ ಹಿಂದೆ ಅರ್ಲಿ ಸ್ಯಾಲರಿ ಎಂದು ಕರೆಯಲಾಗುತ್ತಿತ್ತು) ಭಾರತದ ಮೊದಲ ನಂಬರ್‌ಲೆಸ್ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಲು ಪಾಲುದಾರಿಕೆ ಮಾಡಿಕೊಂಡಿವೆ. ಈ ಕಾರ್ಡ್ ಬಳಕೆದಾರರಿಗೆ ಇನ್ನಷ್ಟು ಭದ್ರತೆಯನ್ನು ನೀಡಲಿದೆ. ಅದಲ್ಲದೆ ಈ ಕಾರ್ಡ್ ಟೆಕ್ ಬುದ್ಧಿವಂತ ಪೀಳಿಗೆಗೆ ಬಹಳ ಪರಿಣಾಮಕಾರಿಯಾಗಲಿದೆ.
ಅಂದರೆ ಹೆಚ್ಚುವರಿ ಭದ್ರತಾ ಲೇಯರ್‌ನೊಂದಿಗೆ ಬರುವ ಈ ರೀತಿಯ ಮೊದಲ ಕ್ರೆಡಿಟ್ ಕಾರ್ಡ್ ಇದಾಗಿರಲಿದೆ. ಈ ಫೈಬ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಯಾವುದೇ ರೀತಿಯ ಸಂಖ್ಯೆಯನ್ನು ಹೊಂದಿರದ ಕಾರ್ಡ್ ಆಗಿದ್ದು, ಈ ಮೂಲಕ ದೇಶದ ಮೊದಲ ಕಾರ್ಡ್ ಆಗಿಯೂ ಜನಪ್ರಿಯವಾಗಿರಲಿದೆ. ಈ ಮೂಲಕ ಆಕ್ಸಿಸ್ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳ ಸಾಲಿನಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳಲಿದೆ.
ಅಕ್ರಮ ಕಾರ್ಡ್ ಬಳಕೆಯನ್ನು ತಡೆಗಟ್ಟುವಲ್ಲಿ ನೆರವು
ಕಾರ್ಡ್ ಅನ್ನು ಕಳ್ಳತನ ಮಾಡಿ ಬಳಕೆ ಮಾಡಲು ಮುಂದಾದರೆ ಯಾವುದೇ ಕಾರಣಕ್ಕೂ ಆಗುವುದಿಲ್ಲ. ಗ್ರಾಹಕರ ಗುರುತನ್ನು ರಕ್ಷಿಸುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದ್ದು, ಕಾರ್ಡ್‌ನಲ್ಲಿ ಯಾವುದೇ ಸಂಖ್ಯೆಯಿಲ್ಲದ ಕಾರಣ, ಗ್ರಾಹಕರು ಸಂಪೂರ್ಣ ಭದ್ರತೆ ಮತ್ತು ಗೌಪ್ಯತೆಯ ಪ್ರಯೋಜನಗಳನ್ನು ಈ ಮೂಲಕ ಪಡೆದುಕೊಳ್ಳಲಿದ್ದಾರೆ.
ಇನ್ನು ಗ್ರಾಹಕರು ತಮ್ಮ ಫೈಬ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿವರಗಳನ್ನು ಫೈಬ್ ಆಪ್ ಬಳಕೆ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ. ಸ್ವಲ್ಪ ಮಾಹಿತಿಯನ್ನು ಒದಗಿಸುವ ಮೂಲಕ ಅದರ ಮೇಲೆ ಸಂಪೂರ್ಣ ಕಂಟ್ರೋಲ್ ಅನ್ನು ನೀವು ಪಡೆಯಬಹುದು. ಇದರೊಂದಿಗೆ ಈ ಕಾರ್ಡ್ ವ್ಯವಹಾರದಲ್ಲಿ ಏನೆಲ್ಲಾ ಪ್ರಯೋಜನ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
- ಎಲ್ಲಾ ರೀತಿಯ ರೆಸ್ಟೋರೆಂಟ್‌ಗಳಿಂದ ಆನ್‌ಲೈನ್ ಆಹಾರ ವಿತರಣಾ ಆರ್ಡರ್‌ಗಳಲ್ಲಿ ಫ್ಲಾಟ್ 3% ಕ್ಯಾಶ್‌ಬ್ಯಾಕ್ ಲಭ್ಯವಿದೆ ಹಾಗೂ ರೈಡ್ ಹೈಲಿಂಗ್ ಆಪ್‌ಗಳಲ್ಲಿ ಸ್ಥಳೀಯ ಪ್ರಯಾಣದ ಮೇಲೆ ನೀವು 3% ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದರೊಂದಿಗೆ ಆನ್‌ಲೈನ್ ಟಿಕೆಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ 3 ಪ್ರತಿಶತ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.
- ಇದಲ್ಲದೆ ಗ್ರಾಹಕರು ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ವಹಿವಾಟುಗಳಲ್ಲಿ 1 ಶೇಕಡಾ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ, ರುಪೇ ಮೂಲಕ ಯುಪಿಐ ಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಸೌಲಭ್ಯ ಸಹ ಇದ್ದು, ಈ ಕಾರ್ಡ್ ರುಪೇ ಮೂಲಕ ಸಂಯೋಜಿತವಾಗಿದೆ, ಇದು ಗ್ರಾಹಕರು ಈ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಯೊಂದಿಗೆ ಲಿಂಕ್ ಮಾಡಲು ಅನುಮತಿಸುತ್ತದೆ.
- ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಹಿವಾಟುಗಳನ್ನು ಮಾಡುವುದಲ್ಲದೆ, ಈ ಕಾರ್ಡ್ ಅನ್ನು ಎಲ್ಲಾ ಆಫ್‌ಲೈನ್ ಸ್ಟೋರ್‌ಗಳಲ್ಲಿ ಸಹ ಸ್ವೀಕರಿಸಲಾಗುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ಇದು ಟ್ಯಾಪ್ ಮತ್ತು ಪೇ ಫೀಚರ್ ಅನ್ನು ಸಹ ಹೊಂದಿದ್ದು, ಸುಲಭವಾಗಿ ಇದನ್ನು ಬಳಕೆ ಮಾಡಬಹುದಾಗಿದೆ.
ಕಾರ್ಡ್‌ಗಾಗಿ ಹಣ ಪಾವತಿಸಬೇಕಿಲ್ಲ
ಈ ಕಾರ್ಡ್ ಪಡೆದುಕೊಳ್ಳಲು ನೀವು ಯಾವುದೇ ಹಣ ಪಾವತಿ ಮಾಡಬೇಕಿಲ್ಲ. ಜೊತೆಗೆ ಶೂನ್ಯ ವಾರ್ಷಿಕ ಶುಲ್ಕದೊಂದಿಗೆ ಬರುತ್ತದೆ ಮತ್ತು ಈ ಸೌಲಭ್ಯವು ಜೀವಿತಾವಧಿವರೆಗೆ ಲಭ್ಯವಿದೆ. ಈ ಕಾರ್ಡ್‌ನ ಇತರ ಫೀಚರ್ಸ್ ಏನೆಂದರೆ ಇದು ಪ್ರತಿ ವರ್ಷ ನಾಲ್ಕು ದೇಶೀಯ ವಿಮಾನ ನಿಲ್ದಾಣದ ಲಾಂಜ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ₹400 ರಿಂದ ₹5000ಗಳ ನಡುವೆ ಇಂಧನ ಸರ್ಚಾರ್ಜ್ ಮನ್ನಾ ಪ್ರಯೋಜನವನ್ನು ಪಡೆಯಬಹುದು.