ಅನೂರ್ಜಿತ ವಿವಾಹದಿಂದ ಜನಿಸಿದ ಮಕ್ಕಳಿಗೂ ಪೋಷಕರ ಪಾಲು – ಮಹತ್ವದ ತೀರ್ಪು ಹೊರಡಿಸಿದ ಸುಪ್ರೀಂಕೋರ್ಟ್‌

ಅನೂರ್ಜಿತ ವಿವಾಹದಿಂದ ಜನಿಸಿದ ಮಕ್ಕಳಿಗೂ ಪೋಷಕರ ಪಾಲು – ಮಹತ್ವದ ತೀರ್ಪು ಹೊರಡಿಸಿದ ಸುಪ್ರೀಂಕೋರ್ಟ್‌

ನ್ಯೂಸ್‌ ಆ್ಯರೋ : ಅನೂರ್ಜಿತ ವಿವಾಹದಿಂದ ಜನಿಸಿದ ಮಕ್ಕಳಿಗೂ ಪೋಷಕರ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕಿದೆ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

ಹಿಂದೂ ಕಾನೂನಿನಲ್ಲಿ ಅನೂರ್ಜಿತ ಸಂಬಂಧದಿಂದ ಜನಿಸಿದ ಮಕ್ಕಳು ಹೆತ್ತವರ ಆಸ್ತಿಯನ್ನು ಪಡೆಯಲು ಅರ್ಹರೇ ಎಂಬ ವಿಷಯಕ್ಕೆ ಸಂಬಂಧಿಸಿದಂತೆ 2011ರ ಅರ್ಜಿಯ ಮೇಲಿನ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಕೈಗೆತ್ತಿಕೊಂಡಿತ್ತು. ರದ್ದುಗೊಳಿಸಲಾದ ಅಥವಾ ರದ್ದುಗೊಳಿಸಬಹುದಾದ ವಿವಾಹ ಸಂಬಂಧದಲ್ಲಿ ಜನಿಸಿದ ಮಕ್ಕಳಿಗೆ ಮಾತ್ರ ​ ತಮ್ಮ ಪಾಲಕರ ಆಸ್ತಿ ಮೇಲೆ ಹಕ್ಕಿದೆ ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಅನೂರ್ಜಿತ ವಿವಾಹದಿಂದ ಜನಿಸಿದ ಮಕ್ಕಳು ಕೂಡ ಪೋಷಕರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು ಎಂದು ಸುಪ್ರೀಂಕೋರ್ಟ್​ ಹೇಳಿದೆ.

ಕಾನೂನು ಸಮ್ಮತ ವಿವಾಹ ಸಂಬಂಧದಲ್ಲಿ ಜನಿಸಿದ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಹಕ್ಕಿದೆಯೇ ಅಥವಾ ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 16(3)ರಲ್ಲಿ ತಮ್ಮ ಪೋಷಕರ ಸ್ವಯಾರ್ಜಿತ ಆಸ್ತಿ ಮೇಲಷ್ಟೇ ಹಕ್ಕಿದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿತ್ತು.

ಮಾನ್ಯವಾದ ಅಥವಾ ಅಮಾನ್ಯವಾದ ಯಾವುದೇ ವಿವಾಹದ ನಂತರ ಜನಿಸಿದ ಮಗು ಮಾತ್ರ ತನ್ನ ಹೆತ್ತವರ ಆಸ್ತಿ ಮೇಲೆ ಹಕ್ಕು ಇರುತ್ತದೆ, ಬೇರೆ ಯಾರಿಗೂ ಇಲ್ಲ ಎಂಬುದು ನಿಬಂಧನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಂತಹ ಮಕ್ಕಳಿಗೆ ಆಸ್ತಿಯಲ್ಲಿ ಯಾವುದೇ ಪಾಲಿಲ್ಲ ಎನ್ನುವ ಉನ್ನತ ನ್ಯಾಯಾಲಯದ ಹಿಂದಿನ ಉಲ್ಲೇಖಗಳನ್ನು ನ್ಯಾಯಪೀಠ ಒಪ್ಪಲಿಲ್ಲ.

ನಮ್ಮನ್ನೂ ಸೇರಿದಂತೆ ಸಮಾಜದಲ್ಲಿ ನ್ಯಾಯಾ ವ್ಯವಸ್ಥೆಯ ಸಾಮಾಜಿಕ ನಿಯಮಗಳು ದಿನಕಳೆದಂತೆ ಬದಲಾಗುತ್ತಿರುವುದರಿಂದ ಹಿಂದೆ ಕಾನೂನು ಬಾಹಿರ ಎನಿಸಿಕೊಂಡಿರುವುದು ಇಂದು ನ್ಯಾಯಸಮ್ಮತವಾಗಬಹುದು. ಅನೂರ್ಜಿತ ವಿವಾಹ ಸಂಬಂಧದಲ್ಲಿ ಮಹಿಳೆ ಮತ್ತು ಪುರುಷ ಗಂಡ ಮತ್ತು ಹೆಂಡತಿಯ ಸ್ಥಾನಮಾನವನ್ನು ಹೊಂದಿರುವುದಿಲ್ಲ. ಶಾಸನದ ಪ್ರಕಾರ ಅನೂರ್ಜಿತ ವಿವಾಹದಲ್ಲಿ ಗಂಡ ಹಾಗೂ ಹೆಂಡತಿಗೆ ಸ್ಥಾನಮಾನವಿದೆ ಎಂದು ಹೇಳಿದೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *