Mangalore : ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ – ರಿಕ್ಷಾ ಚಾಲಕ ಅರೆಸ್ಟ್

ನ್ಯೂಸ್ ಆ್ಯರೋ : ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಆಟೋ ಚಾಲಕನನ್ನು ಮಂಗಳೂರಿನ ಉಳ್ಳಾಲ ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೊಹಮ್ಮದ್ ರಝೀನ್ (25) ತಂದೆ, ದಿ. ಖಾದರ್ ವಾಸ. ಮಲಾರ್ ಅನ್ವರ್ ಜುಮ್ಮಾ ಮಸೀದಿ ಹಾಗೂ ಬದ್ರಿಯಾ ಬಜಾರ್ ಬಳಿ, ಅನಜೂರು ಗ್ರಾಮ, ಜನಾಪುರ ಅಂಚೆ, ಮೂಡಿಗೆರೆ ತಾಲೂಕು ಚಿಕ್ಕಮಗಳೂರು ಜಿಲ್ಲೆ ಎಂದು ಗುರುತಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ನಿವಾಸಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

17 ವರ್ಷ ವಯಸ್ಸಿನ ಬಾಲಕಿ ಹಾಗೂ ಪರಿಶಿಷ್ಟ, ಜಾತಿ (ಎಸ್.ಸಿ) ಯವರಾಗಿದ್ದು, ಈಕೆ ಅಪ್ರಾಪ್ತ ಹಾಗೂ ಪರಿಶಿಷ್ಟ ಜಾತಿಯವರೆಂದು ತಿಳಿದೂ ಮುಸ್ಲಿಂ ಧರ್ಮದವನಾದ ಆರೋಪಿ ಮಹಮ್ಮದ್ ರಝೀನ್ ಎಂಬಾತನು ಪ್ರೀತಿಸುವುದಾಗಿ ಹೇಳಿ ನಂಬಿಸಿದ್ದ.

ಸುಮಾರು 4 ತಿಂಗಳ ಹಿಂದೆ ಅಪ್ರಾಪ್ತ ಬಾಲಕಿಯನ್ನು ಮೂಡುಗೆರೆ ತಾಲೂಕಿನ ಆಣಜೂರಿನ ಗ್ರಾಮದಿಂದ ಮಂಗಳೂರಿನ ಪಂಪ್ ವೆಲ್ ಗೆ ಬಸ್ಸಿನಲ್ಲಿ ಬರಮಾಡಿಸಿಕೊಂಡು ಬಳಿಕ ಆತನ ರಿಕ್ಷಾದಲ್ಲಿ ಕುಂಪಲದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ನಿನ್ನನ್ನು ಮದುವೆಯಾಗುತ್ತೇನೆಂದು ಹೇಳಿ ಒತ್ತಾಯಪೂರ್ವಕವಾಗಿ ನೊಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ.

ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಯ ಬಂಧನ ಕಾರ್ಯಾಚರಣೆಯನ್ನು ಮಂಗಳೂರು ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ಧನ್ಯ.ಎನ್.ನಾಯಕ, ಮಂ.ದ. ಉ.ವಿಭಾಗ ರವರ ನೇತೃತ್ವದಲ್ಲಿ ನಡೆಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀಬಾಲಕೃಷ್ಣ, ಹೆಚ್.ಕೆ. ಪೊಲೀಸ್ ಉಪ-ನಿರೀಕ್ಷಕರಾದ ಶೀತಲ್ ಅಲಗೂರ, ಸಂತೋಷ ಕುಮಾರ್.ಡಿ, ಹೆಡ್‌ಕಾನ್‌ಸ್ಟೇಬಲ್‌ಗಳಾದ ನಂದೀಶ್ ಕುಮಾರ್, ರಂಜಿತ್‌ಕುಮಾರ್, ಉದಯಕುಮಾರ್, ಮಂಜುನಾಥ, ಮಹಿಳಾ ಹೆಡ್‌ಕಾನ್‌ಸ್ಟೇಬಲ್‌ ಶ್ರೀಲತಾ, ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಮಂಜುನಾಥ, ಅಕ್ಷರ್, ನವೀನ್, ಮನೋಜ್, ಮಹಿಳಾ ಸಿಬ್ಬಂದಿ ಶಾಝಿಮ್‌ ಫಾತಿಮ, ಲಕ್ಷ್ಮೀ ರವರು ಭಾಗವಹಿಸಿದ್ದಾರೆ.


Comments

Leave a Reply

Your email address will not be published. Required fields are marked *