ಕರಾವಳಿ ಜಿಲ್ಲೆಗಳ ದೇಗುಲಗಳ ವಾರ್ಷಿಕ ನೇಮೋತ್ಸವದ ವೇಳೆ ಕೋಳಿ ಅಂಕಕ್ಕೆ ಅವಕಾಶ ನೀಡಬೇಕು – KDP ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ ಮನವಿ

ನ್ಯೂಸ್ ಆ್ಯರೋ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನೇಮೋತ್ಸವದ ಸಂದರ್ಭದಲ್ಲಿ ಕೋಳಿ ಅಂಕ ನಡೆಯಬೇಕು ಇದು ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ. ಇನ್ನು ಈ ಸಂಪ್ರದಾಯಕ್ಕೆ ಪೊಲೀಸರು ಅಡ್ಡಿಪಡಿಸಬಾರದು ಎಂದು ಬೆಳ್ಳಿ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದಾರೆ.

ಮಂಗಳೂರಿಗೆ ಭೇಟಿ ನೀಡಿದ್ದ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರಲ್ಲಿ ಕೋಳಿ ಅಂಕ ಮಹತ್ವವನ್ನು ವಿವರಿಸಿ, ಕೋರಿದ ಕಟ್ಟ (ಕೋಳಿ ಅಂಕ) ತುಳುನಾಡಿನ ಸಂಪ್ರದಾಯದಲ್ಲಿ ಒಂದಾಗಿದೆ. ತುಳುನಾಡಿನ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ವಾರ್ಷಿಕ ಜಾತ್ರೆ, ನೇಮ, ಕೋಲ ಆದ ನಂತರ ಕೋಳಿ ಅಂಕ ನಡೆಯುವುದು ಸಂಪ್ರದಾಯ.

ದೈವ ದೇವರ ಕಟ್ಟುಕಟ್ಟಲೆಯ ಪ್ರಕಾರ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕಗಳು ಯಾವುದೇ ಅಡ್ಡಿಯಿಲ್ಲದೆ ನಿರಾತಂಕವಾಗಿ ನಡೆಯಲು ಅನುವು ಮಾಡಿ ಕೊಡುವಂತೆ ಶಾಸಕರಾದ ಹರೀಶ್ ಪೂಂಜರವರು ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ KDP ಸಭೆಯಲ್ಲಿ ಆಗ್ರಹಿಸಿದರು.

ಇನ್ನು ಈ ಶಾಸಕರ ಈ ಮನವಿಗೆ ತುಳುನಾಡಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವಳಿ ಜಿಲ್ಲೆಗಳ ಲಕ್ಷಾಂತರ ಕೋಳಿ ಅಂಕದ ಅಭಿಮಾನಿಗಳು ಶಾಸಕರ ಮಾತಿಗೆ ಬೆಂಬಲ ಸೂಚಿಸಿದ್ದಾರೆ.