ಉಪ್ಪಿನಂಗಡಿ : ಏಳು ಮಕ್ಕಳ ತಾಯಿಯಾದರೂ ವೃದ್ದಾಪ್ಯದಲ್ಲಿ ಒಬ್ಬಂಟಿ – ಅನಾಥವಾಗಿದ್ದ ತಾಯಿಗೆ ಮಗನ ಪ್ರೀತಿ ತೋರಿದ ಪೋಲಿಸ್ ಅಧಿಕಾರಿ : ತಾಯಿ ಸತ್ತರೂ ಬಾರದ ಪಾಪಿ ಮಕ್ಕಳು..!!

ಉಪ್ಪಿನಂಗಡಿ : ಏಳು ಮಕ್ಕಳ ತಾಯಿಯಾದರೂ ವೃದ್ದಾಪ್ಯದಲ್ಲಿ ಒಬ್ಬಂಟಿ – ಅನಾಥವಾಗಿದ್ದ ತಾಯಿಗೆ ಮಗನ ಪ್ರೀತಿ ತೋರಿದ ಪೋಲಿಸ್ ಅಧಿಕಾರಿ : ತಾಯಿ ಸತ್ತರೂ ಬಾರದ ಪಾಪಿ ಮಕ್ಕಳು..!!

ನ್ಯೂಸ್ ಆ್ಯರೋ : ಯಾರದೋ ಏಳು ಮಕ್ಕಳ ತಾಯಿಗೆ ಮಗನ ಪ್ರೀತಿ ತೋರಿ ಆಕೆಯ ಕೊನೆಗಾಲದಲ್ಲಿ ಮಗನ ಕರ್ತವ್ಯದ ನೆರವು ನೀಡಿದ ಪೋಲಿಸ್ ಅಧಿಕಾರಿಯೊಬ್ಬರ ಮತ್ತು ಮಕ್ಕಳಿದ್ದರೂ ಕೊನೆಕಾಲದಲ್ಲಿ ಒಬ್ಬಂಟಿಯಾಗಿ ಮೃತಪಟ್ಟ ಹಿರಿ ಜೀವದ ಮನಮಿಡಿಯುವ ಕಥೆ ಇದು..

ಉಪ್ಪಿನಂಗಡಿ ಪೇಟೆಯ ಹೊರಭಾಗದಲ್ಲಿ ವಾಸವಿದ್ದ ಲಕ್ಷ್ಮೀ ಹೆಗ್ಡೆ ಏಳು ಮಕ್ಕಳನ್ನು ಹೊತ್ತು ಹೆತ್ತು ಸಾಕಿದ ಮಹಾತಾಯಿ. ಆದರೆ ವೃದ್ದಾಪ್ಯದಲ್ಲಿ ಯಾರಿಗೂ ಬೇಡವಾಗಿ ಅಸಹಾಯಕತೆಗೆ ಸಿಲುಕಿದ ಆಕೆ ಕೊನೆಗೆ ನ್ಯಾಯ ಅರಸಿ ಮೊರೆ ಹೋಗಿದ್ದು ಆಗಿನ ಉಪ್ಪಿನಂಗಡಿಯ ಪೋಲಿಸ್ ಠಾಣೆಯ ಠಾಣಾಧಿಕಾರಿ ನಂದಕುಮಾರ್ ಅವರ ಬಳಿಗೆ..!!

ಮಹಾತಾಯಿಯ ಕಣ್ಣೀರ ಕಥೆಯನ್ನು ಕೇಳಿದ ನಂದಕುಮಾರ್ ಅವರು ತಮ್ಮ ಮುತುವರ್ಜಿಯಿಂದ ಆಕೆಯನ್ನು ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಸೇರಿಸಿದ್ದರಲ್ಲದೇ ಆಗಾಗ ಆಶ್ರಮಕ್ಕೆ ಭೇಟಿ ಕೊಟ್ಟು ಆ ತಾಯಿಯ ಯೋಗಕ್ಷೇಮ ವಿಚಾರಿಸುತ್ತಿದ್ದರು. ಆದರೆ ಆಶ್ರಮದಲ್ಲಿ ಆರಾಮಾಗಿಯೇ ಇದ್ದ ಲಕ್ಷ್ಮೀ ಹೆಗ್ಡೆ ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಈ ವೇಳೆ ಆಶ್ರಮಕ್ಕೆ ಸೇರಿದಾಗ ನೀಡಲಾದ ಸಂಬಂಧಿಕರ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದ ಆಶ್ರಮದವರು, ನಿಧನ ಸುದ್ದಿಯನ್ನು ತಿಳಿಸಿ, ಶವದ ಅಂತ್ಯವಿಧಿ ನೆರವೇರಿಸಲು ಬನ್ನಿ, ಶವವನ್ನು ತೆಗೆದುಕೊಂಡು ಹೋಗುವಂತೆ ಕೋರಿದ್ದಾರೆ. ಆದರೆ ಆ ಮನವಿಗೆ ಸ್ಪಂದನೆ ದೊರೆಯದೇ ಇದ್ದಾಗ ಅವರ ಬಗ್ಗೆ ಕಾಳಜಿ ವಹಿಸಿದ್ದ ಪೊಲೀಸ್ ಅಧಿಕಾರಿ ನಂದಕುಮಾರ್‌ ಅವರನ್ನು ಸಂಪರ್ಕಿಸಲಾಗಿದೆ‌.

ಆದರೆ ಪ್ರಕರಣವೊಂದರ ಸಂಬಂಧ ದೂರದೂರಿನಲ್ಲಿ ಕೋರ್ಟ್ ಕಾರ್ಯ ನಿಮಿತ್ತ ತೆರಳಿದ್ದ ನಂದಕುಮಾರ್ ಅವರಿಗೂ ಸಕಾಲದಲ್ಲಿ ಆಗಮಿಸಲು ಅಸಾಧ್ಯವಾಗಿತ್ತು. ಈ ಮಧ್ಯೆ ಆಶ್ರಮದ ಕ್ರಮದಂತೆ ಮೃತರ ಅಂತ್ಯವಿಧಿಯನ್ನು ಅಲ್ಲಿಯೇ ನೆರವೇರಿಸಲಾಗಿದೆ.

ಇದರೊಂದಿಗೆ ಏಳು ಮಕ್ಕಳನ್ನು ಹೆತ್ತರೂ ಅನಾಥವಾಗಿ ಲಕ್ಷ್ಮೀ ಹೆಗ್ಡೆ ಇಹಲೋಕ ತ್ಯಜಿಸಿದರೆ ಅತ್ತ ತಾಯಿಗೆ ಮಗನ ಸ್ಥಾನ ತುಂಬಿ ಆ ವೃದ್ಧ ಜೀವದಲ್ಲೂ ತಾಯಿ ಪ್ರೀತಿ ಕಂಡ ದಕ್ಷ ಪೋಲಿಸ್ ಅಧಿಕಾರಿ ನಂದಕುಮಾರ್ ಸದ್ಯ ಅನಾಥರಾದ ನೋವಲ್ಲಿ ಮರುಗಿದ್ದು ಮಾತ್ರ ಯಾರಿಗೂ ಅರ್ಥವಾಗದ ವಾಸ್ತವ ಸತ್ಯ..!

ಪೋಲಿಸರೆಂದರೆ ಬರೇ ದರ್ಪ ತೋರುವವರು, ವಸೂಲಿ ಮಾಡುವವರು, ಯಾರದ್ದೋ ಮಾತು ಕೇಳುವವರು ಇಲ್ಲವೇ ಜನಪ್ರತಿನಿಧಿಗಳ ಮಾತಿಗೆ ತಲೆಬಾಗುವವರು ಎಂಬ ಆರೋಪಗಳಿರುವ ನಡುವೆ ನಂದಕುಮಾರ್ ರೀತಿಯ ದಕ್ಷ, ನಿಷ್ಠಾವಂತ, ಸಜ್ಜನಿ ಪೋಲಿಸ್ ಅಧಿಕಾರಿಗಳೂ ಜನಸಾಮಾನ್ಯರ ಪರವಾಗಿಯೂ ಇದ್ದಾರೆ ಎಂಬುದಕ್ಕೆ ಈ ಪ್ರಕರಣ ಒಂದು ನಿದರ್ಶನವಾಗಿದೆ‌.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *