
SSLC, PUC ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ – 2712 ಸರ್ಕಾರಿ ನೇಮಕಾತಿಗಳ ವಿವರ ಇಲ್ಲಿದೆ..
- ಉದ್ಯೋಗ ಮಾಹಿತಿ
- November 20, 2023
- No Comment
- 105
ನ್ಯೂಸ್ ಆ್ಯರೋ : ನೀವು SSLC ಅಥವಾ PUC ಪಾಸಾಗಿದ್ದರೆ, ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಾಗಿದ್ದರೆ ನಿಮಗೊಧು ಸಿಹಿ ಸುದ್ದಿ ಇಲ್ಲಿದೆ. 10ನೇ ಮತ್ತು 12ನೇ ತರಗತಿ ಪಾಸಾದವರಿಗೆ ಒ.ಎಸ್.ಎಸ್ಸಿ ನೇಮಕಾತಿಯಡಿ ಅರಣ್ಯ ರಕ್ಷಕ, ಜಾನುವಾರು ಇನ್ಸ್ಪೆಕ್ಟರ್ ಹಾಗೂ ಫಾರೆಸ್ಟರ್ ಹುದ್ದೆಗಳಿಗೆ ನೇಮಕಾತಿ ಆದೇಶವನ್ನು ಸರ್ಕಾರ ಹೊರಡಿಸಿದೆ. ಈ ಭರ್ಜರಿ ಉದ್ಯೋಗಾವಕಾಶದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
2712 ಹುದ್ದೆಗಳ ನೇಮಕಾತಿಗೆ ಆದೇಶ!
ಮಾತಿಗಳ ಪ್ರಕಾರ ಸುಮಾರು 2712 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿದ್ದು, ಅವುಗಳಲ್ಲಿ 1677 ಅರಣ್ಯ ರಕ್ಷಕರ ಹುದ್ದೆಗಳು, 719 ಜಾನುವಾರು ನಿರೀಕ್ಷಕರು, ಮತ್ತು 316 ಪಾರೆಸ್ಟರ್ ಹುದ್ದೆಗಳಿವೆ. ಆಸಕ್ತ ಅಭ್ಯರ್ಥಿಗಳು osssc.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನವೆಂಬರ್ 25ರೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಹತೆ ಮತ್ತು ವಯೋಮಿತಿ?
ಈ ಹುದ್ದೆಗಳಲ್ಲಿ ಅರಣ್ಯ ರಕ್ಷಕ ಹುದ್ದೆಗಳಿಗೆ 10ನೇ ತರಗತಿ ಮತ್ತು ಫಾರೆಸ್ಟರ್ ಹುದ್ದೆಗಳಿಗೆ ವಿಜ್ಞಾನದಲ್ಲಿ 12ನೇ ತರಗತಿ ಪಾಸಾಗಿರಬೇಕು. ಜೊತೆಗೆ 12ನೇ ತರಗತಿ ಪಾಸಾದವರು ಕೆಲವು ವೃತ್ತಿಪರ ಕೋರ್ಸುಗಳೊಂದಿಗೆ ಜಾನಿವಾರು ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಅಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 38ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ.
ವೇತನ ಶ್ರೇಣಿ ಹೀಗಿದೆ?
ಜಾನುವಾರು ನಿರೀಕ್ಷಕರು- ಪೇ ಮ್ಯಾಟ್ರಿಕ್ಸ್ 5ರಂತೆ 21700 ರೂ.ಗಳ ವೇತನ ಶ್ರೇಣಿ
ಫಾರೆಸ್ಟರ್- ಪೇ ಮ್ಯಾಟ್ರಿಕ್ಸ್ 5ರಂತೆ 22500 ರೂ.ಗಳ ವೇತನ ಶ್ರೇಣಿ.
ಅರಣ್ಯ ರಕ್ಷಕರು- ಪೇ ಮ್ಯಾಟ್ರಿಕ್ಸ್ 5ರಂತೆ 19900 ರೂ.ಗಳ ವೇತನ ಶ್ರೇಣಿ. ನಿಗದಿಪಡಿಸಲಾಗಿದೆ.