ಒನಕೆ ಓಬವ್ವನಂತೆ ಕೆಚ್ಚೆದೆಯಿಂದ ಹೋರಾಡಿದ ಇಸ್ರೇಲ್‌ನ ಮಹಿಳೆ – ದೇಶಕ್ಕೆ ನುಗ್ಗಿದ 25 ಹಮಾಸ್ ಉಗ್ರರನ್ನು ಮಟಾಷ್ ಮಾಡಿದ್ದು ಹೇಗೆ ಗೊತ್ತಾ?

ಒನಕೆ ಓಬವ್ವನಂತೆ ಕೆಚ್ಚೆದೆಯಿಂದ ಹೋರಾಡಿದ ಇಸ್ರೇಲ್‌ನ ಮಹಿಳೆ – ದೇಶಕ್ಕೆ ನುಗ್ಗಿದ 25 ಹಮಾಸ್ ಉಗ್ರರನ್ನು ಮಟಾಷ್ ಮಾಡಿದ್ದು ಹೇಗೆ ಗೊತ್ತಾ?

ನ್ಯೂಸ್ ಆ್ಯರೋ : ಹಮಾಸ್ ಉಗ್ರರ ದಾಳಿಗೆ ಪ್ರತೀಕಾರದ ದಾಳಿ ಮಾಡಿದ ಇಸ್ರೇಲ್ ಗಾಜಾವನ್ನು ವಶಪಡಿಸಿಕೊಂಡು, ಹಮಾಸ್ ಉಗ್ರರನ್ನು ಉಡೀಸ್ ಮಾಡುತ್ತಿದ್ದಾರೆ. ಪ್ರಧಾನಿ ನೆತನ್ಯಾಹು ನೇತೃತ್ವದ ಇಸ್ರೇಲ್‌ನ ರಕ್ಷಣಾ ಪಡೆ ಪ್ಯಾಲೇಸ್ತೀನ್ ಅನ್ನು ಎದುರಿಸಲು ಬದ್ಧವಾಗಿ ನಿಂತಿದೆ. ಇಸ್ರೇಲ್‌ನಲ್ಲಿ ಪ್ರತಿಯೊಬ್ಬರು ಸೇನಾ ತರಬೇತಿಯನ್ನು ಪಡೆಯುವುದು ಕಡ್ಡಾಯ. ಇನ್ನೂ ಪ್ರತಿ ದಾಳಿ ಸಂದರ್ಭದಲ್ಲೂ ಇಲ್ಲಿನ ನಾಗರೀಕರು ತಮ್ಮ ದೇಶದ ರಕ್ಷಣೆಗೆ ಸಜ್ಜಾಗಿರಬೇಕೆಂಬುದು ಇಲ್ಲಿನ ನಿಯಮ. ಇನ್ನೂ ಹಮಾಸ್ ಉಗ್ರರ ವೈಮಾನಿಕ ಹಾಗೂ ಗುಂಡಿನ ದಾಳಿ ವೇಳೆ ಇಸ್ರೇಲ್‌ನ ಮಹಿಳೆಯ ದಿಟ್ಟತನವನ್ನು ಇಡೀ ವಿಶ್ವವೇ ಮೆಚ್ಚಿದೆ.

ಅಕ್ಟೋಬರ್ 7ರಂದು ಹಮಾಸ್ ಉಗ್ರರು ತಾನಿದ್ದ ಗ್ರಾಮದ ಮೂಲಕ ಕೇಕೆ ಹಾಕುತ್ತಾ ಹಾದುಹೋಗುವುದನ್ನು 25 ವರ್ಷದ ಯುವತಿ ನೋಡಿದ್ದೇ ತಡ ನಮ್ಮ ನಾಡಿನ ದುರ್ಗದ ವೀರಮಹಿಳೆ ಒನಕೆ ಓಬವ್ವನಂತೆ ಯುದ್ಧಭೂಮಿಯಲ್ಲಿ ಹೋರಾಡಿ 25 ಭಯೋತ್ಪಾದಕರನ್ನು ಸದೆಬಡಿದಿದ್ದಾಳೆ.

ಇಸ್ರೇಲಿನ ಈ ಧೈರ್ಯಶಾಲಿ 25 ವರ್ಷದ ಯುವತಿ ಇನ್ಬಾರ್ ಲೀಬರ್ಮನ್ ತನ್ನ ಗ್ರಾಮದ ಮೂಲಕ ದೇಶದೊಳಗೆ ನುಗ್ಗುತ್ತಿದ್ದವರನ್ನು ಸದೆಬಡಿಯುವ ಮೂಲಕ ತನ್ನ ಗ್ರಾಮವಾದ ನಿರ್ ಆಮ್ ಕಿಬ್ಬುಟ್ಜ್ ಅನ್ನು ಉಳಿಸಿಕೊಂಡಿದ್ದಾಳೆ.

ಉಗ್ರರ ಕರಿನೆರಳಿನಲ್ಲಿರುವ ಗಾಜಾ ಪಟ್ಟಿಯಿಂದ ಕೇವಲ ಒಂದು ಮೈಲಿ ದೂರದಲ್ಲಿರುವ ನಿರ್ ಆಮ್ ಕಿಬ್ಬುಟ್ಜ್‌ ಮೂಲಕ ಹತ್ತಾರು ಉಗ್ರರ ಪಡೆಯೊಂದು ಇಸ್ರೇಲ್ ಮೇಲೆ ದಾಳಿ ಮಾಡಲು ನುಗ್ಗುತ್ತಿದ್ದರು. ಸರಿಯಾಗಿ ಅದೇ ವೇಳೆಗೆ ಎಚ್ಚೆತ್ತ ಇನ್ಬಾರ್​​ ಲೈಬರ್ಮನ್, ಗ್ರಾಮಸ್ಥರನ್ನು ಬಡಿದೆಬ್ಬಿಸಿದ್ದಾಳೆ. ಅಂದು ಶನಿವಾರ ಬೆಳಗಿನ ಜಾವ ಹಮಾಸ್​ ಉಗ್ರರು ಮನಬನದಂತೆ ರಾಕೆಟ್​​ ದಾಳಿ ಮಾಡುತ್ತಾ ಇಸ್ರೇಲಿನತ್ತ ಧಾವಿಸುತ್ತಿದ್ದರು. ಆ ರಣಕೇಕೆ ಇನ್ಬಾರ್​​ ಲೈಬರ್ಮನ್ ನನ್ನು ಮೊದಲು ಬಡಿದೆಬ್ಬಿಸಿದೆ. ಏನೋ ಯಡವಟ್ಟು ಘಟಿಸುತ್ತಿದೆ ಎಂದು ಎಚ್ಚೆತ್ತ ಆ ಯುವತಿ ಮೊದಲು ತನ್ನ ಊರಿನಲ್ಲಿನ ಶಸ್ತ್ರಾಸ್ತ ಕೊಠಿಗೆ ಹೋಗಿದ್ದಾಳೆ. ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನು ತನ್ನ ಊರಿನ ಯುವಕರಿಗೆ ಹಸ್ತಾಂತರಿಸಿದ್ದಾಳೆ. ನಂತರ ನಡೆದಿದ್ದೇ ಅಲ್ಲಿ ವಿಸ್ಮಯ.

12 ಸದಸ್ಯರ ಯುವ ಭದ್ರತಾ ತಂಡವನ್ನು ರಚಿಸಿಕೊಂಡು ಉಗ್ರರ ಸದೆಬಡಿಯಲು ಮುಂದಾದಳು.
ಕಣ್ಣಿಗೆ ಕಂಡ 25 ಉಗ್ರರ ಪೈಕಿ ಯಾರೊಬ್ಬರೂ ದೇಶದೊಳಕ್ಕೆ ನುಸುಳಬಾರದು. ಅವರನ್ನೆಲ್ಲ ಇಲ್ಲೇ ಚೆಂಡಾಡಿಬಿಡಿ ಎಂದು ಮಿಲಿಟರಿ ಕಮಾಂಡ್​ ಕೊಟ್ಟಳು ಅಷ್ಟೇ. ಅದಾಗ ತಾನೇ ನಿದ್ದೆಯಿಂದ ಎಚ್ಚೆತ್ತ ಯುವಕರ ಪಡೆ ತನ್ನ ನಾಯಕಿಯ ಆದೇಶವನ್ನು ಶಿರಸಾವಹಿಸಿ ಪಾಲಿಸುತ್ತಾ ಹಮಾಸ್​ ಸೈತಾನ್​​ಗಳನ್ನು ಹೊಡೆದುರುಳಿಸ ತೊಡಗಿದರು.

ಅದಾದ ಮೇಲೆ ಹತ್ಯಾಕಾಂಡದ ಸ್ಥಳಕ್ಕೆ ಟ್ರಕ್‌ ಸಮೇತ ಬಂದ ದೇಶದ ಸೈನಿಕ ಪಡೆ, ಅಷ್ಟೂ ಉಗ್ರರ ದೇಹಗಳನ್ನು ಟ್ರಕ್‌ಗೆ ತುಂಬಿಕೊಂಡು ಹೋದರು. ಇಸ್ರೇಲ್ ಭದ್ರತಾ ಪಡೆಗಳು ಘಟನಾ ಸ್ಥಳಕ್ಕೆ ಬರುವವರೆಗೂ ಸುಮಾರು ಮೂರು ಗಂಟೆಗಳ ಕಾಲ ಭೀಕರ ಗುಂಡಿನ ಕಾಳಗ ಆ ಗ್ರಾಮದಲ್ಲಿ ನಡೆದಿತ್ತು.

ಘಟನೆಯ ಬಳಿಕ ಇನ್ಬಾರ್​​ ಲೈಬರ್ಮನ್ ಪತಿ, ಗ್ರಾಮದ ಸಾಂಸ್ಕೃತಿಕ ಸಂಯೋಜಕ ಇಲಿತ್ ಪಾಜ್, ಸ್ಥಳೀಯ ಸುದ್ದಿವಾಹಿನಿ ಇಸ್ರೇಲ್ ಹಯೋಮ್‌ ಜೊತೆ ಮಾತನಾಡುತ್ತಾ ನನ್ನ ಪತ್ನಿ ಸ್ಟ್ಯಾಂಡ್‌ಬೈ ಯುದ್ಧ ಘಟಕದ ಭಾಗವಾಗಿದ್ದಳು, ಅದು ಹೆಚ್ಚಿನ ಸಾವುನೋವುಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿತು ಎಂದು ಹೆಮ್ಮೆ ವ್ಯಕ್ತಪಡಿಸಿದರು.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *