80 ವರ್ಷಗಳ ಭದ್ರತಾ ಸೇವೆ ನೀಡಿದ್ದ ಮಿಗ್ 21 ವಾಯುಪಡೆಗೆ ಗುಡ್ ಬೈ – ಮಿಗ್ ಸ್ಥಾನ ತುಂಬೋದ್ಯಾರು ಗೊತ್ತಾ?

80 ವರ್ಷಗಳ ಭದ್ರತಾ ಸೇವೆ ನೀಡಿದ್ದ ಮಿಗ್ 21 ವಾಯುಪಡೆಗೆ ಗುಡ್ ಬೈ – ಮಿಗ್ ಸ್ಥಾನ ತುಂಬೋದ್ಯಾರು ಗೊತ್ತಾ?

ನ್ಯೂಸ್ ಆ್ಯರೋ : ನೀವು ದೇಶದ ಭದ್ರತೆಯ ವಿಚಾರದಲ್ಲಿ ಆಸಕ್ತಿ ಉಳ್ಳವರಾಗಿದ್ರೆ ಮಿಗ್ ವಿಮಾನದ ಹೆಸರು ಕೇಳಿಯೇ ಇರುತ್ತೀರಿ. ಆದರೆ 1970ರ ದಶಕದಲ್ಲಿ ಎದುರಾಳಿಯ ಎದೆಯನ್ನು ನಡುಗಿಸಿದ್ದ ಭಾರತೀಯ ವಾಯುಪಡೆಯ ಮಿಗ್‌ 21 ಬೈಸನ್ ಯುದ್ಧ ವಿಮಾನಗಳನ್ನು ಮಂಗಳವಾರ ಅಧಿಕೃತವಾಗಿ ಸೇವೆಯಿಂದ ಹಿಂದಕ್ಕೆ ಪಡೆಯಲಾಗಿದೆ‌.

ಇನ್ನು ಮುಂದೆ ಸೇನೆಯಲ್ಲಿ ಮಿಗ್ ವಿಮಾನದ ಸ್ಥಾನವನ್ನು ಎಚ್‌ಎಎಲ್‌ ನಿರ್ಮಿಸಿರುವ ದೇಶೀಯ ಎಲ್‌ಸಿಎ ತೇಜಸ್‌ ಮಾರ್ಕ್‌ 1ಎ ತುಂಬಲಿದೆ. 1960ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ಮಿಗ್‌ 21 ವಿಮಾನಗಳು 1971ರಲ್ಲಿ ನಡೆದ ಯುದ್ಧದ ವೇಳೆ ಪಾಕಿಸ್ತಾನದ ಹಲವು ನಗರಗಳ ಮೇಲೆ ಬಾಂಬ್‌ ದಾಳಿ ಮಾಡಿತ್ತು.

ಹಿಂದಿನ ಸೋವಿಯತ್‌ ಒಕ್ಕೂಟ (Soviet Union) ಮಿಖೋಯೆನ್‌ ಗುರ್ವಿಚ್‌ ಕಂಪನಿ 1959ರಲ್ಲಿ ಮೊದಲ ಬಾರಿ ಮಿಗ್‌ 21 ಬೈಸನ್‌ ವಿಮಾನಗಳನ್ನು ತಯಾರಿಸಿ ವಿಶ್ವದಾದ್ಯಂತ ಖ್ಯಾತಿ ಪಡೆದಿತ್ತು. ಈವರೆಗೆ ಇಂಥ 11,496 ವಿಮಾನಗಳನ್ನು ತಯಾರಿಸಲಾಗಿದ್ದು, ಜಗತ್ತಿನ ವಿವಿಧ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಈ ಪೈಕಿ ಭಾರತದ ನಾಸಿಕ್‌ನಲ್ಲಿ 840 ವಿಮಾನಗಳನ್ನು ತಯಾರಿಸಲಾಗಿತ್ತು. ಪ್ರಸ್ತುತ 50 ವಿಮಾನಗಳು ಭಾರತೀಯ ವಾಯುಪಡೆಯ ಸೇವೆಯಲ್ಲಿದೆ.

ವಿಶ್ವದಲ್ಲಿ 400 ವಿಮಾನಗಳು ಭದ್ರತಾ ಲೋಪ (Security Lapse) ಕಾರಣ ಪತನಗೊಂಡಿದೆ. ಇದನ್ನು ಹೊರತುಪಡಿಸಿ ಈ ವಿಮಾನ ಜಗತ್ತಿನಲ್ಲಿ ಅತ್ಯಂತ ಯಶಸ್ವಿ ಯುದ್ಧ ವಿಮಾನ ಎಂಬ ಕೀರ್ತಿಗಳಿಸಿದೆ. ಇದೀಗ ಈ ವಿಮಾನದ ಆಯಸ್ಸು ಮುಗಿದಿರುವ ಕಾರಣ 2024ರ ಒಳಗೆ ಇವುಗಳನ್ನು ಹಿಂಪಡೆದುಕೊಳ್ಳಲು ವಾಯುಪಡೆ ನಿರ್ಧರಿಸಿದೆ ಎನ್ನಲಾಗಿದೆ.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *