
Air Hostess : ನಗುಮೊಗದ ಸೇವೆಯ ಹಿಂದಿವೆ ಬೆಟ್ಟದಷ್ಟು ನೋವು – ಪ್ರಯಾಣಿಕರ ಅಸಭ್ಯ, ಅಸಹ್ಯ ವರ್ತನೆಗಳ ಬಗ್ಗೆ ಗಗನಸಖಿಯ ಅಂತರಂಗದ ಮಾತು ಏನಿದೆ?
- ಅಂತಾರಾಷ್ಟ್ರೀಯ ಸುದ್ದಿ
- September 14, 2023
- No Comment
- 36
ನ್ಯೂಸ್ ಆ್ಯರೋ : ವಿಮಾನ ಪ್ರಯಾಣ ಸ್ವಚ್ಛ, ಸುಂದರ, ಅತ್ಯಂತ ಆರಾಮದಾಯಕ ಎನ್ನುವ ಭಾವನೆ ಎಲ್ಲರಲ್ಲೂ ಇದೆ. ನಾವು ಕೇವಲ ಸಿಬ್ಬಂದಿಯ ನಗು ಮುಖದ ಸೇವೆಗಳು, ಅವರ ಸ್ವಾಗತದ ರೀತಿ ನೀತಿ ಕಂಡು ಸಂತೃಪ್ತಿಯಾಗುತ್ತೇವೆ. ಆದರೆ ಅವನು ಅನುಭವಿಸುವ ಸಂಕಟಗಳು ಹಲವಾರು. ಪ್ರಯಾಣಿಕರನ್ನು ಸಂತೋಷಪಡಿಸುವ ಅವರ ನಗುವಿನ ಹಿಂದೆ ಸಾಕಷ್ಟು ನೋವಿನ ಅನುಭವಗಳೂ ಅಡಕವಾಗಿರುತ್ತದೆ.
ಮಾಜಿ ಗಗನಸಖಿ ಮರಿಕಾ ಮಿಕುಸೋವಾ ಅವರು ತಮ್ಮ ‘ಡೈರಿ ಆಫ್ ಎ ಫ್ಲೈಟ್ ಅಟೆಂಡೆಂಟ್’ ಪುಸ್ತಕದಲ್ಲಿ ತಮ್ಮ ಹಲವಾರು ಅನುಭವಗಳನ್ನು ಹೇಳಿಕೊಂಡಿದ್ದಾರೆ.
ಅಮೆರಿಕದ ಐಷಾರಾಮಿ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡಿರುವ ಇವರು ತಮಗೆ ಎಂತಹ ಪರಿಸ್ಥಿತಿ ಎದುರಾಗಿದೆ ಎಂಬುದನ್ನು ಬಹಿರಂಗ ಪಡಿಸಿದ್ದು, ವಿಮಾನದಲ್ಲಿ ಹೀಗೂ ಆಗತ್ತದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ. .

ಗಗನಸಖಿಯಾಗಲು ಕೇವಲ ನಗುಮೊಗವಿದ್ದರೆ ಸಾಲದು ಗ್ಲಾಮರಸ್ ಕೂಡ ಆಗಿರಬೇಕು ಎನ್ನುವುದು ಬಹಳ ಚಿಕ್ಕ ವಿಷಯ ಎನ್ನುವ ಮರಿಕಾ, 36,000 ಅಡಿ ಎತ್ತರದಲ್ಲಿ ನೀವು ಎಂದಿಗೂ ಊಹಿಸದ ಸಂಗತಿಗಳು ನಡೆಯುತ್ತವೆ. ಕೆಲವು ಪ್ರಯಾಣಿಕರು ಬಹಳ ಕೆಟ್ಟದಾಗಿ ನಮ್ಮನ್ನು ನಡೆಸಿಕೊಳ್ಳುತ್ತಾರೆ ಎನ್ನುತ್ತಾರೆ.
ನೆಲದ ಮೇಲೆ ಉಗುಳುವುದು, ಸೀಟ್‌ಗಳ ಮೇಲೆ ಮೂತ್ರ ವಿಸರ್ಜನೆ ಮಾಡುವುದು ಮಾಡುತ್ತಾರೆ. ಒಮ್ಮೆ ಶೌಚಾಲಯದ ಗೋಡೆಯ ಮೇಲೆ ಮಲದ ಕುರುಹುಗಳನ್ನೂ ನಾವು ಕಂಡುಕೊಂಡಿದ್ದೇವೆ. ಒಬ್ಬ ಪ್ರಯಾಣಿಕ ನಾನು ಆತನ ಮಗುವಿಗೆ ಬಾಟಲಿಯಲ್ಲಿ ಆಹಾರವನ್ನು ನೀಡಬೇಕು ಎಂದು ಬಯಸಿದನು. ಆದರೆ ಅದು ನನ್ನ ಕರ್ತವ್ಯ ಎಂದು ಭಾವಿಸಿ ನಾನು ಮಾಡಿದ್ದೇನೆ ಎಂದು ಹೇಳಿದ್ದಾರೆ ಮರಿಕಾ
ಕೆಲವರು ನಮ್ಮ ಫೋನ್ ನಂಬರ್ ಕೇಳುತ್ತಾರೆ. ಕೊಡದಿದ್ದರೆ ಅಸಭ್ಯವಾಗಿ ವರ್ತಿಸುತ್ತಾರೆ. ಇಷ್ಟೆಲ್ಲಾ ನಡೆದರೂ ನಾವು ಅವರ ಮೇಲೆ ಕೂಗಾಡಲು ಸಾಧ್ಯವಿಲ್ಲ. ಅಶಿಸ್ತಿನ ಪ್ರಯಾಣಿಕರೊಂದಿಗೂ ಸಭ್ಯವಾಗಿ ವರ್ತಿಸಬೇಕು ಎಂಬುದನ್ನು ನಮಗೆ ಹೇಳಲಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಮಾರಿಕಾಗೆ ಮತ್ತೆ ಆ ಕೆಲಸಕ್ಕೆ ಹೋಗಲು ಇಷ್ಟವಿದೆಯೇ ಎಂದು ಒಬ್ಬರು ಪ್ರಶ್ನೆ ಮಾಡಿದ್ದು, ಇದಕ್ಕೆ ಉತ್ತರಿಸಿರುವ ಅವರು, ಖಂಡಿತವಾಗಿಯೂ ಇದೆ. ಆದರೆ ಇದಕ್ಕೆ ಒಂದು ಷರತ್ತು ಇರುತ್ತದೆ. ಮೊದಲನೆಯದಾಗಿ ವಿಮಾನ ಹಾರುವ ಸಮಯವನ್ನು ಕಡಿಮೆ ಮಾಡಬೇಕು. ಏಕೆಂದರೆ ಕೆಲವೊಮ್ಮೆ ಸರಿಯಾಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ಅನಂತರ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅಶಿಸ್ತಿನ ಪ್ರಯಾಣಿಕರೊಂದಿಗೆ ವ್ಯವಹರಿಸಲು ಸಿಬ್ಬಂದಿಗೆ ಸ್ವಾತಂತ್ರ್ಯ ನೀಡಬೇಕು. ಪ್ರತೀ ಕ್ಷಣವೂ ನಗುತ್ತಿರಬೇಕೆಂದು ಮ್ಯಾನೇಜ್‌ಮೆಂಟ್ ಬಯಸುತ್ತದೆ. ಆದರೆ ಅವು ದೇಹದ ಮೇಲೆ ಪರಿಣಾಮ ಬೀರುತ್ತವೆ. ನಮ್ಮ ಬಗ್ಗೆ ನಾವೇ ಕಾಳಜಿ ವಹಿಸದಿದ್ದರೆ, ಅನಾರೋಗ್ಯಕ್ಕೆ ಒಳಗಾಗಬಹುದು ಎಂದು ಅವರು ಹೇಳಿದ್ದಾರೆ.
ಹಲವಾರು ಬಾರಿ ನಾನು ಇವುಗಳನ್ನೆಲ್ಲ ಎದುರಿಸಿದ್ದೇನೆ. ಕಿವಿಗಳನ್ನು ಮುಚ್ಚಿಕೊಂಡು ಕೆಲಸ ಮಾಡಿದ್ದೇನೆ. ಅತ್ಯಂತ ಭಯಾನಕವೆಂದರೆ ನಿತ್ಯವೂ ಭಯದಿಂದ ಬದುಕಬೇಕಾಗಿತ್ತು. ಇದಕ್ಕೆಲ್ಲ ಮುಕ್ತಿ ಸಿಗಬೇಕು ಎಂದು ಅವರು ತಿಳಿಸಿದ್ದಾರೆ.