ಇಸ್ರೇಲ್ ನೆರವಿಗೆ ನಿಂತ ಅಮೆರಿಕ, ವಿಮಾನವಾಹಕ ನೌಕೆಯನ್ನು ರವಾನಿಸಿದ ದೊಡ್ಡಣ್ಣ – ಫೋರ್ಡ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಹೇಗಿದೆ ಗೊತ್ತಾ?

ಇಸ್ರೇಲ್ ನೆರವಿಗೆ ನಿಂತ ಅಮೆರಿಕ, ವಿಮಾನವಾಹಕ ನೌಕೆಯನ್ನು ರವಾನಿಸಿದ ದೊಡ್ಡಣ್ಣ – ಫೋರ್ಡ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಹೇಗಿದೆ ಗೊತ್ತಾ?

ನ್ಯೂಸ್ ಆ್ಯರೋ : ಹಮಾಸ್ ದಾಳಿಯ ನಡುವೆಯೇ ಇಸ್ರೇಲ್‌ಗೆ ಬೆಂಬಲ ನೀಡಲು ಪೂರ್ವ ಮೆಡಿಟರೇನಿಯನ್‌ ಪ್ರದೇಶಕ್ಕೆ ವಿಮಾನವಾಹಕ ನೌಕೆಯನ್ನು ಕಳುಹಿಸಲು ಅಮೆರಿಕ ನಿರ್ಧರಿಸಿದೆ.

ಫೋರ್ಡ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಅನ್ನು ಭಾನುವಾರ ಆ ಸ್ಥಳಕ್ಕೆ ತೆರಳಲು ಪೆಂಟಗನ್ ಆದೇಶಿಸಿದೆ ಎಂದು ಇಬ್ಬರು ಅಮೆರಿಕ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

5 ಸಾವಿರ ನಾವಿಕರು, ಯುದ್ಧವಿಮಾನಗಳು, ಕ್ರೂಸರ್‌ಗಳು ಮತ್ತು ವಿಧ್ವಂಸಕ ನೌಕೆಗಳೊಂದಿಗೆ ಯುಎಸ್‌ಎಸ್ ಜೆರಾಲ್ಡ್ ಆರ್.ಫೋರ್ಡ್ ವಾಹಕವನ್ನು ಕಳುಹಿಸಲಾಗುವುದು. ಇದು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುತ್ತದೆ ಮತ್ತು ಹಮಾಸ್‌ಗೆ ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನು ಪೂರೈಸುವವರ ಮೇಲೆಯೂ ಕಣ್ಣಿಡುತ್ತದೆ. ವರ್ಜೀನಿಯಾ ಮೂಲದ ವಿಮಾನವಾಹಕ ನೌಕೆ ಪ್ರಸ್ತುತ ಮೆಡಿಟರೇನಿಯನ್ ಸಮುದ್ರದಲ್ಲಿದೆ. ನೌಕಾ ಕವಾಯತಿಗಾಗಿ ಈ ಪ್ರದೇಶಕ್ಕೆ ಬಂದಿದೆ.

ಸದ್ಯ ಈ ಗುಂಪಿನಲ್ಲಿ ಯುಎಸ್ ಕ್ರೂಸರ್, ಯುಎಸ್​ಎಸ್​ ನಾರ್ಮಂಡಿ, ವಿಧ್ವಂಸಕವಾದ ಯುಎಸ್​ಎಸ್​ ಥಾಮಸ್ ಹಡ್ನರ್, USS ರಾಂಪೇಜ್, USS ಕಾರ್ನಿ, USS ರೂಸ್‌ವೆಲ್ಟ್ ಜೊತೆಗೆ F-35, F-15, F-16 ಮತ್ತು A-10 ಫೈಟರ್ ಜೆಟ್‌ಗಳು ಸೇರಿವೆ. ಪ್ರದೇಶದಲ್ಲಿ 10 ಯುದ್ಧ ವಿಮಾನ ಸ್ಕ್ವಾಡ್ರನ್‌ಗಳು, ಅಗತ್ಯವಿದ್ದರೆ ಮತ್ತಷ್ಟು ಬಲಪಡಿಸಲು ಯುಎಸ್ ಜಾಗತಿಕ ಸಿದ್ಧ ಪಡೆಗಳನ್ನು ಕಾರ್ಯನಿರ್ವಹಿಸಲಿದೆ ಎಂದು ಸೇನಾ ಮುಖ್ಯಸ್ಥ ಆಸ್ಟಿನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *