Gaganyan Mission : ಇಸ್ರೋ ಪರೀಕ್ಷಾರ್ಥ ಪ್ರಯೋಗ ಯಶಸ್ವಿ – ಅಂತರಿಕ್ಷ ಲೋಕದಲ್ಲಿ ಮತ್ತೊಂದು ಸಾಧನೆಯತ್ತ ದಾಪುಗಾಲು

Gaganyan Mission : ಇಸ್ರೋ ಪರೀಕ್ಷಾರ್ಥ ಪ್ರಯೋಗ ಯಶಸ್ವಿ – ಅಂತರಿಕ್ಷ ಲೋಕದಲ್ಲಿ ಮತ್ತೊಂದು ಸಾಧನೆಯತ್ತ ದಾಪುಗಾಲು

ನ್ಯೂಸ್ ಆ್ಯರೋ : ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​​ ಬಾಹ್ಯಾಕಾಶ ಕೇಂದ್ರದಿಂದ, ಇಸ್ರೋದ ಗಗನಯಾನ ಯೋಜನೆಯ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇಸ್ರೋ ಮುಖ್ಯಸ್ಥ ಸೋಮನಾಥ್ ಅವರು ಮಾಹಿತಿ ನೀಡಿದ್ದು, ಟೆಸ್ಟ್ ವೆಹಿಕಲ್ ಲಿಫ್ಟ್ ಆಫ್ ಇಂದು ಯಶಸ್ವಿಯಾಗಿದ್ದು, ನಿರೀಕ್ಷಿತ ಉಡಾವಣೆಯಾಗಿದೆ ಎಂದು ತಿಳಿಸಿದ್ದಾರೆ.

ಆಂಧ್ರದ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ನಭಕ್ಕೆ ಚಿಮ್ಮಿದ ರಾಕೆಟ್‌ 17 ಕಿ.ಮೀ. ಎತ್ತರದಲ್ಲಿ ಗಗನಯಾನ ನೌಕೆಯನ್ನು ಬೇರ್ಪಟ್ಟಿದೆ. ಬಳಿಕ ನೌಕೆ ಪ್ಯಾರಾಚೂಟ್‌ ಸಹಾಯದಿಂದ ಬಂಗಾಳಕೊಲ್ಲಿಯಲ್ಲಿ ಇಳಿದಿದ್ದು, ಅಲ್ಲಿಂದ ಅದನ್ನು ಹಡಗಿನ ಮೂಲಕ ವಶಕ್ಕೆ ಪಡೆಯಲಾಗಿದೆ.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಹವಾಮಾನ ಸಮಸ್ಯೆಯಿಂದಾಗಿ ಪರೀಕ್ಷಾ ಉಡಾವಣೆಯು ಮುಂಜಾನೆಯೇ ತಡವಾಗಿತ್ತು. ಇಂಜಿನ್ ಇಗ್ನಿಷನ್ ಆಗಲಿಲ್ಲ. ಏನು ತಪ್ಪಾಗಿದೆ ಎಂಬುದನ್ನು ನಾವು ಕಂಡುಹಿಡಿಯಬೇಕು. ವಾಹನ ಸುರಕ್ಷಿತವಾಗಿದೆ ಎಂದು ಸೋಮನಾಥ್ ಅವರು ಲೈವ್‌ಸ್ಟ್ರೀಮ್‌ನಲ್ಲಿ ಹೇಳಿದರು.

ಶನಿವಾರ ಬೆಳಗ್ಗೆ ಸತೀಶ್‌ ಧವನ್‌ ಉಡಾವಣಾ ಕೇಂದ್ರದಲ್ಲಿರುವ ಒಂದನೇ ಲಾಂಚ್‌ ಪ್ಯಾಡ್‌ನಿಂದ ಈ ಪರೀಕ್ಷೆಗಾಗಿಯೇ ತಯಾರಿಸಲಾಗಿರುವ ರಾಕೆಟ್‌, ಗಗನಯಾನ ನೌಕೆಯ ಮಾಡೆಲನ್ನು ಹೊತ್ತು ಉಡಾವಣೆಯಾಗಿದೆ. 1 ನಿಮಿಷದ ಬಳಿಕ 11.7 ಕಿ.ಮೀ. ಎತ್ತರಕ್ಕೆ ಸಾಗುವ ರಾಕೆಟ್‌ ನೌಕೆಯಿಂದ ಬೇರ್ಪಟ್ಟಿದೆ. ಒಂದೂವರೆ ನಿಮಿಷಕ್ಕೆ 16 ಕಿ.ಮೀ. ಎತ್ತರಕ್ಕೆ ತಲುಪುವ ಗಗನಯಾನ ಕ್ರ್ಯೂ ಮಾಡ್ಯೂಲ್‌ ಇದಾದ ಬಳಿಕ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಬೂಸ್ಟರ್‌ನಿಂದಲೂ ಬೇರ್ಪಟ್ಟು ಭೂಮಿಯತ್ತ ಬೀಳಲು ಆರಂಭಿಸುತ್ತದೆ.

ಈ ಹಂತದಲ್ಲಿ ಗಗನಯಾನ ನೌಕೆ ಮತ್ತು ಸಿಬ್ಬಂದಿಗಳನ್ನು ರಕ್ಷಿಸಲು ಇರುವ ಉಪಕರಣ ಎರಡೂ ಪ್ರತ್ಯೇಕಗೊಂಡು ಸಮುದ್ರದತ್ತ ಧಾವಿಸಿದೆ. ಹೀಗೆ ರಾಕೆಟ್‌ನಿಂದ ಬೇರ್ಪಟ್ಟ 5 ಸೆಕೆಂಡ್‌ ಬಳಿಕ ನೌಕೆಯಲ್ಲಿರುವ ಪ್ಯಾರಾಚೂಟ್‌ ಬಿಚ್ಚಿಕೊಂಡಿದ್ದು, ನೌಕೆಯ ವೇಗವನ್ನು ನಿಯಂತ್ರಿಸಿ ಭೂಮಿಯತ್ತ ತರಲಿದೆ. 3 ನಿಮಿಷಗಳ ಕಾಲ ಈ ಪ್ಯಾರಾಚೂಟ್‌ನ ಸಹಾಯದಿಂದ ನೌಕೆ ಇಳಿದಿದೆ. ಬಳಿಕ ಮತ್ತೊಂದು ಶಕ್ತಿಶಾಲಿ ಪ್ಯಾರಾಚೂಟ್‌ ತೆರೆದುಕೊಂಡಿದ್ದು, ನೌಕೆ ಸುರಕ್ಷಿತವಾಗಿ ಸಮುದ್ರಕ್ಕೆ ಇಳಿದಿದೆ.

ಈ ಪರೀಕ್ಷೆ ಕೇವಲ 9 ನಿಮಿಷಗಳಲ್ಲಿ ಮುಕ್ತಾಯಗೊಂಡಿದ್ದು, ಉಡ್ಡಯನ ಸ್ಥಳದಿಂದ 10 ಕಿ.ಮೀ ದೂರದ ಬಂಗಾಳಕೊಲ್ಲಿಯಿಂದ ನೌಕೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪರೀಕ್ಷೆಯನ್ನು ನಡೆಸುವುಕ್ಕೆ ಮೊದಲೇ ಇಸ್ರೋ, ನೌಕೆಯನ್ನು ಹಲವು ಬಾರಿ ಪರೀಕ್ಷೆಗೆ ಒಳಪಡಿಸಿದೆ. ಜೊತೆಗೆ ಎಂಜಿನ್‌, ಪ್ಯಾರಾಚೂಟ್‌ ಮತ್ತು ನೌಕೆಯ ವಶ ಎಲ್ಲದರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಕೊನೆಯದಾಗಿ ಈ ಮಾನವ ರಹಿತ ಗಗನಯಾನದ ಪರೀಕ್ಷೆ ನಡೆಸಲಾಗಿದೆ.

ಏನಿದು ಗಗನಯಾನ ಮಿಷನ್?

ಗಗನಯಾನ ಮಿಷನ್ ನ ಪ್ರಾಥಮಿಕ ಗುರಿ ಮಾನವರನ್ನು ಬಾಹ್ಯಾಕಾಶಕ್ಕೆ ಉಡಾಯಿಸುವುದು, ಮೂರು ದಿನಗಳ ಕಾರ್ಯಾಚರಣೆಗಾಗಿ ಅವರನ್ನು 400 ಕಿಲೋಮೀಟರ್ ಎತ್ತರದಲ್ಲಿ ಭೂಮಿಯ ಕೆಳ ಕಕ್ಷೆಯಲ್ಲಿ ಇರಿಸುವುದು, 2025 ರಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳುವುದು.

ಗಗನಯಾನ ಮಿಷನ್ ನ ಸಿಬ್ಬಂದಿಯನ್ನು ಎಲ್ವಿಎಂ 3 ರಾಕೆಟ್ ಬಳಸಿ ಗೊತ್ತುಪಡಿಸಿದ ಕಕ್ಷೆಗೆ ಸಾಗಿಸಲಾಗುವುದು. ಈ ರಾಕೆಟ್ ಘನ, ದ್ರವ ಮತ್ತು ಕ್ರಯೋಜೆನಿಕ್ ಪ್ರೊಪಲ್ಷನ್ ವ್ಯವಸ್ಥೆಗಳು ಸೇರಿದಂತೆ ವಿವಿಧ ಹಂತಗಳನ್ನು ಒಳಗೊಂಡಿದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *