ರೆಡಿಮೆಡ್ ಗುಲಾಬ್ ಜಾಮೂನ್ ಬಾಯಿ ಚಪ್ಪರಿಸಿಕೊಂಡು ತಿನ್ನುವ ಮುನ್ನ ಈ ವೈರಲ್ ವಿಡಿಯೋ ನೋಡಿ – ನಿಮ್ಮ ಜನ್ಮದಲ್ಲಿ ಮತ್ತೆಂದೂ ನೀವು ಗುಲಾಬ್ ಜಾಮೂನ್ ಮುಟ್ಟಲ್ಲ!

ರೆಡಿಮೆಡ್ ಗುಲಾಬ್ ಜಾಮೂನ್ ಬಾಯಿ ಚಪ್ಪರಿಸಿಕೊಂಡು ತಿನ್ನುವ ಮುನ್ನ ಈ ವೈರಲ್ ವಿಡಿಯೋ ನೋಡಿ – ನಿಮ್ಮ ಜನ್ಮದಲ್ಲಿ ಮತ್ತೆಂದೂ ನೀವು ಗುಲಾಬ್ ಜಾಮೂನ್ ಮುಟ್ಟಲ್ಲ!

ನ್ಯೂಸ್ ಆ್ಯರೋ : ಬಹಳ ಮೃದುವಾಗಿರುವ, ಬಾಯಲ್ಲಿಟ್ಟರೆ ಕರಗುವಂತಹ ರುಚಿಯಾದ ಗುಲಾಬ್ ಜಾಮೂನ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮನೆಯಲ್ಲಿ ಸಿಹಿ ತಿನಿಸು ಮಾಡುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ ಎನ್ನುವ ಕಾರಣಕ್ಕೆ ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ರೆಡಿಮೆಡ್ ಗುಲಾಬ್ ಜಾಮೂನ್ ತಂದು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

ಅಂತವರ ಸಾಲಿಗೆ ನೀವು ಕೂಡ ಸೇರುತ್ತೀರಿ ಎಂದಾದರೆ ಇನ್ಮುಂದೆ ಹುಷಾರ್. ಗುಲಾಬ್ ಜಾಮೂನ್ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಯಾಕೆ? ಅನ್ನುವುದು ನಿಮ್ಮ ಪ್ರಶ್ನೆಯಾಗಿದ್ರೆ ಈ ಕೆಳಗಿರುವ ವಿಡಿಯೋ ಮತ್ತು ವರದಿಯನ್ನು ಕಂಪ್ಲೀಟಾಗಿ ಓದಿ.

ಗುಲಾಬ್ ಜಾಮೂನ್‌ನಲ್ಲಿ ಹುಳುಗಳು ಫ್ರೀ!

ರೆಡಿಮೆಡ್ ಗುಲಾಬ್ ಜಾಮೂನನ್ನು ಚಿಕ್ಕವರಿಂದ ಮುದುಕರ ವರೆಗೆ ಎಲ್ಲರೂ‌ ಕೂಡ ಇಷ್ಟ ಪಟ್ಟು ತಿನ್ನುತ್ತಾರೆ‌. ಆದರೆ ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋ ಒಂದು ಗುಲಾಬ್ ಜಾಮೂನ್ ಪ್ರಿಯರನ್ನು ಆತಂಕಕ್ಕೀಡು ಮಾಡಿದೆ‌. ಹೌದು ರೆಡಿಮೆಡ್ ಗುಲಾಬ್ ಜಾಮೂನ್ ತಂದು ತಿನ್ನುವಾಗ ಅದು ಯಾವಾಗ ತಯಾರಾಗಿದೆ?, ಹೇಗೆ ತಯಾರಾಗಿದೆ? ಇದ್ಯಾವುದನ್ನೂ ಕೂಡ ನಾವು ಯೋಚಿಸುವುದೇ ಇಲ್ಲ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರೆಡಿಮೆಡ್ ಗುಲಾಬ್ ಜಾಮೂನ್ ನಲ್ಲಿ ಬಿಳಿ ಬಣ್ಣದ ಹುಳು ಪತ್ತೆಯಾಗಿದ್ದು ದೊಡ್ಡ ಸುದ್ದಿಯಾಗಿದೆ. ಈ ವಿಡಿಯೋ ಸದ್ಯ, ಎಲ್ಲೆಡೆ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?

ಇತ್ತೀಚೆಗಷ್ಟೇ, @tn38_foodie ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರೆಡಿಮೇಡ್ ಗುಲಾಬ್ ಜಾಮೂನು ಬಾಕ್ಸ್ ಒಳಗಡೆ ಬಿಳಿ ಬಣ್ಣದ ಹುಳವೊಂದು ಓಡಾಡುವುದನ್ನು ಕಾಣಬಹುದು. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ರೆಡಿಮೇಡ್ ಗುಲಾಬ್ ಜಾಮೂನ್ ಖರೀದಿಸುತ್ತಾರೆ. ಅದನ್ನು ಓಪನ್ ಮಾಡಿ ನೋಡಿದಾಗ, ಅದರಲ್ಲಿರುವ ಒಂದು ಗುಲಾಬ್ ಜಾಮೂನಿನ ಮೇಲೆ ಬಿಳಿ ಬಣ್ಣದ ಹುಳವೊಂದು ಇರುವುದು ಪತ್ತೆಯಾಗಿದೆ. ಈ ವಿಡಿಯೋ‌ ಕಂಡು ನೆಟ್ಟಿಗರು‌ ಬೆಚ್ಚಿ ಬಿದ್ದಿರುವುದಂತು ನಿಜ.

ರೆಡಿಮೆಡ್ ಆಹಾರ ಪ್ರಿಯರೇ ಎಚ್ಚರ!

ಕೆಲಸ ಕಡಿಮೆ ಎಂದು ಯೋಚಿಸಿ ಮಾರುಕಟ್ಟೆಯಿಂದ ಈ ರೀತಿ ರೆಡಿಮೆಡ್ ಆಹಾರ ತಂದು ಮನೆಯವರಿಗೆಲ್ಲ ಹಂಚಿ ತಿನ್ನುವ ಮುನ್ನ ಎಚ್ಚರ ವಹಿಸುವುದು ಉತ್ತಮ. ನೈರ್ಮಲ್ಯ ಪಾಲಿಸದಿದ್ದರೆ, ಆಹಾರ ತಯಾರಿಸುವ ಘಟಕದ ಸುತ್ತ ಶುಚಿತ್ವ ಕಾಪಾಡದಿದ್ದರೆ ಮಾತ್ರ ಇಂತಹ ಹುಳುಗಳು ಆಹಾರದಲ್ಲಿ ಉತ್ಪತ್ತಿಯಾಗುತ್ತದೆ. ಆದ್ದರಿಂದ ರೆಡಿಮೆಡ್ ಆಹಾರ ಸೇವಿಸುವ ಮುನ್ನ ನೂರು ಬಾರಿ ಯೋಚಿಸಿ ಎಂಬುವುದೇ ನಮ್ಮ ಕಳಕಳಿ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *