ಸಂಜೆ ಸ್ನ್ಯಾಕ್ಸ್‌ಗೆ ಮಾಡಿ ಎಗ್‌ ಪೆಪ್ಪರ್ ಮಸಾಲ ಬಾಯಿಗೂ ರುಚಿ, ಹೀಗಿದೆ ರೆಸಿಪಿ ಮಾಡುವ ವಿಧಾನ

ಸಂಜೆ ಸ್ನ್ಯಾಕ್ಸ್‌ಗೆ ಮಾಡಿ ಎಗ್‌ ಪೆಪ್ಪರ್ ಮಸಾಲ ಬಾಯಿಗೂ ರುಚಿ, ಹೀಗಿದೆ ರೆಸಿಪಿ ಮಾಡುವ ವಿಧಾನ

ಸುಲಭವಾಗಿ ಕೈಗೆಟಕುವ ಬೆಲೆಗೆ ಸಿಗುವ ಆರೋಗ್ಯಯುತ ಆಹಾರ ಎಂದರೆ ಅದು ಮೊಟ್ಟೆ ಹೇರಳವಾದ ಪ್ರೋಟೀನ್, ಮಿನರಲ್ಸ್ ಮತ್ತು ಜೀವಸತ್ವಗಳನ್ನು ಹೊಂದಿರುವ ಮೊಟ್ಟೆ ತೂಕ ಇಳಿಸಿಕೊಳ್ಳುವವರಿಂದ ಹಿಡಿದು, ಫಿಟ್ ಆಗಿ, ಆರೋಗ್ಯವಾಗಿರಬೇಕು ಎನ್ನುವವರಿಗೂ ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲ ಮೊಟ್ಟೆ ತಿನ್ನುವುದರಿಂದ ಮೆದುಳು ತುಂಬಾ ಆರೋಗ್ಯಕರವಾಗಿರುತ್ತದೆ ಮತ್ತು ಅದರ ಶಕ್ತಿಯನ್ನು ಹೆಚ್ಚಿಸುತ್ತದೆ. ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಮೊಟ್ಟೆಯನ್ನು ಬಳಸಿಕೊಂಡು ರುಚಿಕರವಾದ ಎಗ್ ಪೆಪ್ಪರ್ ಮಸಾಲಾವನ್ನು ಹೇಗೆ ಮಾಡುವುದು ಎಂದು ನಾವಿಂದು ನಿಮಗೆ ಹೇಳಿಕೊಡುತ್ತೇವೆ.

ಎಗ್ ಪೆಪ್ಪರ್ ಮಸಾಲಾ ಮಾಡಲು ಬೇಕಾಗಿರುವ ಸಾಮಾಗ್ರಿಗಳು
ಮೊಟ್ಟೆ – 6 ತುಪ್ಪ – 3 ಟೇಬಲ್ಸ್ಪೂನ್, ಸಾಸಿವೆ – 1 ಚಮಚ, ಜೀರಿಗೆ – 1 ಚಮಚ, ಕತ್ತರಿಸಿದ ಈರುಳ್ಳಿ – 1, ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್, ಕರಿಬೇವಿನ ಎಲೆಗಳು – ಸ್ವಲ್ಪ, ಕತ್ತರಿಸಿದ ಟೊಮೆಟೊ – 2, ಉಪ್ಪು – 1 ಚಮಚ, ಅರಿಶಿನ ಪುಡಿ – 1/2 ಚಮಚ, ಧನಿಯಾ ಪುಡಿ – 1.1/2 ಚಮಚ, ಕಾಳುಮೆಣಸಿನ ಪುಡಿ – 3 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು – ಸ್ವಲ್ಪ.

ಮಾಡುವ ವಿಧಾನ
ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪ ಬಿಸಿಯಾದಾಗ ಸಾಸಿವೆ ಮತ್ತು ಜೀರಿಗೆ ಹಾಕಿ. ಇದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ.

ನಂತರ ಕತ್ತರಿಸಿದ ಟೊಮೆಟೊ ಹಾಕಿ ಹುರಿಯಿರಿ, ಉಪ್ಪು, ಅರಿಶಿನ ಪುಡಿ, ಧನಿಯಾ ಪುಡಿ ಹಾಕಿ 2 ನಿಮಿಷ ಹುರಿಯಿರಿ. ನಂತರ ಕಾಳುಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ ನೀರು ಹಾಕಿ ಕುದಿಸಿ.

ಬಾಣಲೆಯಲ್ಲಿ ಮೊಟ್ಟೆಯನ್ನು ಒಡೆದು ಚೆನ್ನಾಗಿ ಹುರಿಯಿರಿ. ನಂತರ ಹುರಿದ ಮೊಟ್ಟೆಯನ್ನು ಬಾಣಲೆಯಲ್ಲಿ ಸುರಿದು, ಹೆಚ್ಚಿನ ಉರಿಯಲ್ಲಿ ಬೇಯಿಸಿ.

ನಂತರ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ, ಮೊಟ್ಟೆ ಅರ್ಧ ಬೆಂದಾಗ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಕೊನೆಗೆ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿದರೆ ಎಗ್ ಪೆಪ್ಪರ್ ಮಸಾಲಾ ರೆಡಿ ಟೂ ಈಟ್.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *