
ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುತ್ತಿದ್ದೀರಾ? – ಹಾಗಾದರೆ ಈ ವಿಷ್ಯ ತಿಳಿದಿರಲಿ..
- ಸರ್ಕಾರಿ ಸೇವೆಗಳು
- August 15, 2023
- No Comment
- 178
ನ್ಯೂಸ್ ಆ್ಯರೋ : ಕೇಂದ್ರ ಸರಕಾರ ಪಾಸ್ ಪೋರ್ಟ್ ಪಡೆಯುವ ನಿಯಮಗಳಲ್ಲಿ ಬದಲಾವಣೆ ತಂದಿದೆ. ಆಗಸ್ಟ್ 5 ರಿಂದ ಅಂತಾರಾಷ್ಟ್ರೀಯ ಪ್ರಯಾಣಗಳಿಗಾಗಿ ಹೊಸ ಪಾಸ್‍ಪೊರ್ಟ್ ಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಪಾಸ್ ಪೋರ್ಟ್ ಸೇವಾ ಕೇಂದ್ರಗಳು ಮತ್ತು ಪೋಸ್ಟ್ ಆಫೀಸ್ ಪಾಸ್‍ಪೋರ್ಟ್ ಸೇವಾ ಕೇಂದ್ರ ಪಿ.ಎಸ್.ಕೆ./ಪಿ.ಒ.ಎಸ್.ಕೆ.ಗಳಲ್ಲಿ ಡಿಜಿಲಾಕರ್ ಗೆ ಅಗತ್ಯವಾದ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕಾಗುತ್ತದೆ.
ಉದ್ದೇಶವೇನು?
ಪಾಸ್‍ಪೋರ್ಟ್ ಪಡೆಯಲು ಅರ್ಜಿದಾರರು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಡಿಜಿಲಾಕರ್ ಪ್ರಕ್ರಿಯೆಗೆ ಶಿಫಾರಸ್ಸು ಮಾಡಿದೆ.
ಅರ್ಜಿದಾರರಿಗೆ ಅನುಕೂಲ
ಅರ್ಜಿದಾರರು ದಾಖಲೆಗಳನ್ನು ಡಿಜಿಲಾಕರ್ ಮೂಲಕ ಅಪ್ ಲೋಡ್ ಮಾಡಿದ್ದರೆ ತಮ್ಮ ಮೂಲ ದಾಖಲೆ ಒಯ್ಯುವ ಅಗತ್ಯವಿರುವುದಿಲ್ಲ. ಅಲ್ಲದೆ ಪಾಸ್ ಪೋರ್ಟ್ ಸೇವಾ ಕೇಂದ್ರ ಮತ್ತು ವಿವಿಧ ಪ್ರದೇಶಗಳಲ್ಲಿರುವ ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರಗಳಲ್ಲಿ ದಾಖಲೆ ಪರಿಶೀಲನೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಪಾಸ್ ಪೋರ್ಟ್ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು
ಆಧಾರ್ ಕಾರ್ಡ್, ಪಡಿತರ ಚೀಟಿ, ಚಾಲನಾ ಪರವಾನಗಿ, ವಿದ್ಯುತ್ ಬಿಲ್, ಆದಾಯ ತೆರಿಗೆ ಮೌಲ್ಯಮಾಪನ, ಶೈಕ್ಷಣಿಕ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಪ್ಯಾನ್ ಕಾರ್ಡ್ ಇತ್ಯಾದಿ.