
ಭಾಗ್ಯಲಕ್ಷ್ಮಿ ಬಾಂಡ್ ಫಲಾನುಭವಿಗಳಿಗೆ ಗುಡ್ ನ್ಯೂಸ್ – ಖಾತೆಗೆ ಜಮೆಯಾಗಲಿದೆ ಯೋಜನೆಯ ಹಣ, ಜಮೆಯಾಗಲಿರುವ ಮೊತ್ತವೆಷ್ಟು ಗೊತ್ತಾ?
- ಸರ್ಕಾರಿ ಸೇವೆಗಳು
- November 4, 2023
- No Comment
- 112
ನ್ಯೂಸ್ ಆ್ಯರೋ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಹತ್ವಾಕಾಂಕ್ಷೆಯ ಭಾಗ್ಯಲಕ್ಷ್ಮೀ ಬಾಂಡ್ ಗೆ ( Bhagyalakshmi scheme ) ಮುಂದಿನ ಮಾರ್ಚ್ ಗೆ 18 ವರ್ಷ ತುಂಬಲಿದೆ. ಈ ಯೋಜನೆಯ ಮೊದಲ ತಂಡದ ಫಲಾನುಭವಿಗಳಿಗೆ ಸಂತಸದ ಸುದ್ದಿ ಎನ್ನುವಂತೆ, ಖಾತೆಗೆ ಹಣ ಜಮೆ ಆಗಲಿದೆ. ಈ ಮೂಲಕ ನಿಮ್ಮ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಯೋಜನೆಯ ಲಾಭ ಅರ್ಹ ಹಾಗೂ ನಿಯಮ ಪಾಲಿಸಿದ ಫಲಾನುಭವಿಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ. ಇದು ಹೆತ್ತವರ ಹಾಗೂ ಫಲಾನುಭವಿಗಳ ಮೊಗದಲ್ಲಿ ನಗೆಯನ್ನು ತರಿಸುವಂತೆ ಮಾಡಿದೆ.
ಅಂದಹಾಗೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಇಬ್ಬರು ಹೆಣ್ಣುಮಕ್ಕಳಿಗೆ 2006-07ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಜಾರಿಗೊಳಿಸಿತ್ತು.
ಎಲ್‌ಐಸಿ ಜೊತೆಗೆ ಒಪ್ಪಂದ ಮಾಡಿಕೊಂಡು, ಹೆಣ್ಣು ಮಗುವಿನ ಹೆಸರಿನಲ್ಲಿ 10,000 ಠೇವಣಿ ಮಾಡಿಸಿ, ಮಗುವಿಗೆ 18 ವರ್ಷ ತುಂಬಿದಾಗ ಮೆಚ್ಯೂರಿಟಿ ಹಣ ನೀಡುವುದ ಒಪ್ಪಂದದ ಕರಾರು ಆಗಿತ್ತು. ಈ ಯೋಜನೆಯನ್ನು 2020ರ ಏಪ್ರಿನಿಂದ ಜೀವ ವಿಮಾ ನಿಗಮದಿಂದ ಅಂಚೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಈಗ ಅದು ಭಾಗ್ಯಲಕ್ಷ್ಮಿ ಸುಕನ್ಯಾ ಯೋಜನೆ ಎಂದಾಗಿದೆ.
2008ರ ಜುಲೈ ಒಳಗೆ ಜನಿಸಿದ ಹೆಣ್ಣು ಮಗುವಿನ ಹೆಸರಿನಲ್ಲಿ 10 ಸಾವಿರ ರೂ.ಅನ್ನು ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ಸರ್ಕಾರ ನಿಶ್ಚಿತ ಠೇವಣಿ ಇಟ್ಟಿದೆ. ಆ ಸಂಸ್ಥೆಯು ಬಡ್ಡಿ ಸಮೇತ 18 ವರ್ಷ ಪೂರ್ಣಗೊಂಡ ಮೊದಲನೇ ಮಗುವಿಗೆ ರೂ.34,751 ಹಾಗೂ 2ನೇ ಮಗುವಿಗೆ ರೂ.40,619 ಜಮಾ ಆಗಲಿದೆ.
2008ರ ಆಗಸ್ಟ್ ನಂತ್ರ ಜನಿಸಿದ ಮಗುವಿನ ಠೇವಣಿ ಮತ್ತ ರೂ.19,300ಗೆ ಹೆಚ್ಚಿಸಲಾಗಿದೆ. ಹೀಗಾಗಿ ಮೊದಲ ಹೆಣ್ಣುಮಗಿವಿಗೆ ರೂ.1,00,052 ಹಾಗೂ 2ನೇ ಮಗುವಿಗೆ ರೂ.18,350 ಠೇವಣಿಯಿಂದ ರೂ.1,00,097 ದೊರೆಯಲಿದೆ.