ನ್ಯೂ ಇಯರ್ ಪಾರ್ಟಿಯಲ್ಲಿ ಜಾನ್ವಿ ಕಪೂರ್ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು? – ವೈರಲ್ ಆದ ಫೋಟೋ ಈ ಮಟ್ಟಿಗೆ ಸುದ್ದಿಯಾಗಿದ್ದೇಕೆ?

ನ್ಯೂ ಇಯರ್ ಪಾರ್ಟಿಯಲ್ಲಿ ಜಾನ್ವಿ ಕಪೂರ್ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು? – ವೈರಲ್ ಆದ ಫೋಟೋ ಈ ಮಟ್ಟಿಗೆ ಸುದ್ದಿಯಾಗಿದ್ದೇಕೆ?

ನ್ಯೂಸ್ ಆ್ಯರೋ‌ : ಜಾನ್ವಿ ಕಪೂರ್ ಅವರು ಇತ್ತೀಚೆಗೆ ಬಾಲಿವುಡ್ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಒಳ್ಳೆಯ ಆಫರ್ಗಳು ಸಿಗುತ್ತಿವೆ. ಹೀಗಾಗಿ, ಜಾನ್ವಿ ಹಾಯಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ವಿದೇಶಗಳಿಗೆ ಟ್ರಿಪ್ ತೆರಳೋದು, ಫ್ರೆಂಡ್ಸ್ ಜತೆ ಸಮಯ ಕಳೆಯುವುದಕ್ಕೆ ಅವರು ಎಂದಿಗೂ ರಾಜಿ ಮಾಡಿಕೊಂಡವರಲ್ಲ. ವರ್ಷಕ್ಕೆ ಹಲವು ಬಾರಿ ಅವರು ವೆಕೇಶನ್ ತೆರಳುತ್ತಾರೆ. ವೀಕೆಂಡ್ನಲ್ಲಿ ಮೋಜು-ಮಸ್ತಿ ಮಾಡುತ್ತಾರೆ. ಇತ್ತೀಚೆಗಷ್ಟೇ ನಡೆದ ನ್ಯೂಯಿಯರ್ ಪಾರ್ಟಿಯಲ್ಲಿಯೂ ಜಾನ್ವಿ ಪಾಲ್ಗೊಂಡಿದ್ದು, ಈ ಪಾರ್ಟಿಯಲ್ಲಿ ಅವರ ಕಸಿನ್ ಶಯಾನಾ ಕಪೂರ್ ಹಾಗೂ ಗೆಳೆಯರು ಭಾಗಿಯಾಗಿದ್ದು, ಮತ್ತೋರ್ವ ವಿಶೇಷ ವ್ಯಕ್ತಿಯ ಫೋಟೋ ನೆಟ್ಟಿಗರ ಗಮನ ಸೆಳೆದಿದೆ.

ಈ ಫೋಟೋ ಈಗ ಸಖತ್ ವೈರಲ್ ಆಗುತ್ತಿದ್ದು, ಈ ಫೋಟೋಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿದೆ. ಅಲ್ಲದೇ ಜಾನ್ವಿ ಜತೆ ಕಾಣಿಸಿಕೊಂಡ ವ್ಯಕ್ತಿ ಯಾರು ಎನ್ನುವ ಪ್ರಶ್ನೆಯೂ ಮೂಡಿದೆ.

ಗೆಳೆಯರ ಜತೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಜಾನ್ವಿ ಸೆರೆಹಿಡಿದಿದ್ದು, ಈ ಫೋಟೋಗಳನ್ನು ಜಾನ್ವಿ ಕಪೂರ್ ಅವರು ಶೇರ್ ಮಾಡಿಕೊಂಡಿದ್ದಾರೆ. ಜಾನ್ವಿ ಸುತ್ತಲೂ ಫ್ರೆಂಡ್ಸ್ ಇದ್ಧು, ಈ ಫೋಟೋದಲ್ಲಿ ಒರ್ಹಾನ್ ಅವತ್ರಮಣಿ ಅವರು ಹೈಲೈಟ್ ಆಗಿದ್ದಾರೆ. ಅಷ್ಟಕ್ಕೂ ಓರ್ಹಾನ್ ಅವತ್ರಮಣಿ ಯಾರು? ಇಲ್ಲಿದೆ ಉತ್ತರ..

ಒರ್ಹಾನ್ ಅವತ್ರಮಣಿ ಒಬ್ಬ ಸಾಮಾಜಿಕ ಕಾರ್ಯಕರ್ತ ಎಂದು ಹೇಳಲಾಗುತ್ತದೆ ಮತ್ತು ಅವರು ಇನ್ ಸ್ಟಾಗ್ರಾಮ್ ನಲ್ಲಿ ಹಲವಾರು ಬಾಲಿವುಡ್ ತಾರೆಗಳೊಂದಿಗೆ ಸ್ನೇಹಿತರಾಗಿದ್ದಾರೆ ಮತ್ತು ಫಾಲೋ ಮಾಡುತ್ತಿದ್ದಾರೆ.

ಅಲ್ಲದೇ ಒರ್ಹಾನ್ ಅವರು ಜಾನ್ವಿ ಕಪೂರ್ ಅವರ ಕ್ಲೋಸ್ ಫ್ರೆಂಡ್. ಅನೇಕ ಕಡೆಗಳಲ್ಲಿ ಜಾನ್ವಿ ಹಾಗೂ ಒರ್ಹಾನ್ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಬಾಲಿವುಡ್ ಮಂದಿ ಹೇಳುತ್ತಾರೆ. ಕಳೆದ ತಿಂಗಳ ಹಿಂದೆ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಊಟಿಗೆ ತೆರಳಿದ್ದರು. ಈ ವೇಳೆ ಒರ್ಹಾನ್ ಕೂಡ ಇದ್ದರು.

ಇನ್ನೂ ಒರ್ಹಾನ್ ಅವರು ಈ ಹಿಂದೆ ಅಜಯ್ ದೇವಗನ್ ಮಗಳು ನೈಸಾ ದೇವಗನ್ ಜತೆ ಸುತ್ತಾಟ ನಡೆಸಿದ್ದರು. ಓರ್ಹಾನ್ ಅವತ್ರಮಣಿ ಸಾರಾ ಅಲಿ ಖಾನ್ ಮತ್ತು ಆಕೆಯ ಸಹೋದರ ಇಬ್ರಾಹಿಂ ಖಾನ್ ಅವರೊಂದಿಗೆ ಉತ್ತಮ ಸ್ನೇಹಿತರಾಗಿದ್ದಾರೆ. ಅವರು 2020 ರಲ್ಲಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಕ್ರಿಸ್ಮಸ್ ಡಿನ್ನರ್‌ನಲ್ಲಿ ಕಾಣಿಸಿಕೊಂಡಿದ್ದರು.

ಅಷ್ಟೇ ಅಲ್ಲದೆ 2016 ರಲ್ಲಿ ಸಾರಾ ಅಲಿ ಖಾನ್ ಅವರ ಗ್ರಾಜ್ಯುಯೇಷನ್‌ ದಿನದಂದು ನಟಿಯೊಂದಿಗೆ ಕಾಣಿಸಿಕೊಂಡಿದ್ದು, ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೂ ಭೇಟಿ ನೀಡಿದರು. ಇಷ್ಟೇ ಅಲ್ಲ ಈತ ಬಿ ಟೌನ್ ನ ಹಲವರು ಸ್ಟಾರ್ ಕಿಡ್ ಗಳ ಆತ್ಮೀಯನಾಗಿದ್ದು, ಹಲವಾರು ಬಾರಿ ಓರ್ಹಾನ್ ಅವತ್ರಮಣಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಮತ್ತು ಸಂಜಯ್ ಕಪೂರ್ ಅವರ ಪುತ್ರಿ ಶನಯಾ ಕಪೂರ್ ಅವರೊಂದಿಗೆ ಸಹ ಕಾಣಿಸಿಕೊಂಡಿದ್ದಾರೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *