Bigg Boss : ರೂಪೇಶ್ ಶೆಟ್ಟಿ ಮನೆಯಿಂದ ಮದುವೆ ಪ್ರಪೋಸಲ್‌ – ಸಾನ್ಯಾ ಅಯ್ಯರ್ ಉತ್ತರವೇನು ಗೊತ್ತಾ…!?

Bigg Boss : ರೂಪೇಶ್ ಶೆಟ್ಟಿ ಮನೆಯಿಂದ ಮದುವೆ ಪ್ರಪೋಸಲ್‌ – ಸಾನ್ಯಾ ಅಯ್ಯರ್ ಉತ್ತರವೇನು ಗೊತ್ತಾ…!?

ನ್ಯೂಸ್ ಆ್ಯರೋ‌ : ಬಿಗ್ ಬಾಸ್ ಕನ್ನಡ ಒಟಿಟಿಯಲ್ಲಿ ಸಾನ್ಯ ಐಯ್ಯರ್ ಮತ್ತು ರೂಪೇಶ್ ಶೆಟ್ಟಿ ಜೋಡಿ ಫುಲ್ ಹೈಲೈಟ್ ಆಗಿತ್ತು. ಪ್ರತಿ ಆಟದಲ್ಲೂ ಒಬ್ಬರಿಗೊಬ್ಬರು ಸಾಥ್ ನೀಡ್ತಿದ್ದರು. ಬಿಗ್ ಬಾಸ್ ನ ಮೊದಲ ದಿನದಿಂದ ಫೈನಲ್ ವರೆಗೂ ಜೊತೆಯಾಗಿದ್ದ ಜೋಡಿ ಬಳಿಕ ಟಿವಿ ಶೋದವರೆಗೂ ಮುಂದುವರೆದಿದ್ದರು. ಆತ್ಮೀಯರಾಗಿದ್ದ ಇವರ ನಡುವೆ ಅದೇನೋ ಇದೆ ಎಂದೇ ವೀಕ್ಷಕರು ತೀರ್ಮಾನಿಸಿದ್ದರು. ಸಾನ್ಯಾ ಎಲಿಮಿನೇಟ್ ಆಗಿ ಹೊರಬಂದಾಗ ರೂಪೇಶ್ ಚಿಕ್ಕ ಮಗುವಿನಂತೆ ಅತ್ತುಬಿಟ್ಟಿದ್ದರು.

ಇದೀಗ ಮುಂದೊಂದು ದಿನ ರೂಪೇಶ್ ಶೆಟ್ಟಿ ಅವರ ಮನೆಯವರಿಂದ ಮದುವೆ ಪ್ರಪೋಸಲ್ ಬಂದರೆ ಸಾನ್ಯಾ ಉತ್ತರವೇನಿರಲಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಯೂ ಆಗಿತ್ತು.‌ ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದೇ ಹೇಳಿಕೊಂಡು ಬಂದಿದ್ದ ಈ ಜೋಡಿ ಮಧ್ಯೆ ಮದುವೆ ಆಲೋಚನೆ ಇದೆಯಾ ಎಂಬುದರ ಬಗ್ಗೆ ಸಾನ್ಯಾ ಅವರು ನೇರವಾಗಿ ಉತ್ತರ ನೀಡಿದ್ದಾರೆ.

ಈ ಬಗ್ಗೆ ಖಾಸಗಿ ಚಾನೆಲ್ ನ ಸ್ಟೂಡಿಯೋದಲ್ಲಿ ಮಾತನಾಡಿದ ಸಾನ್ಯ ಅಯ್ಯರ್​, ಮದುವೆಯ ಬಗ್ಗೆ ಈಗ ಯೋಚನೆನೇ ಮಾಡಬಾರದು. ನನ್ನ ಕನಸಿನ ಜರ್ನಿ ಇದೀಗ ಪ್ರಾರಂಭವಾಗುತ್ತಿದೆ. ಇನ್ನೂ 5 ವರ್ಷ ನಾನು ನನ್ನ ಕೆರಿಯರ್‌ನತ್ತ ಗಮನ ಕೊಡಬೇಕು. ಹಾಗಂತ ನಾನು ರೂಪೇಶ್ ಫ್ರೆಂಡ್‌ಶಿಪ್ ಬಿಡ್ತೀನಿ ಅಂತಾ ಅಲ್ಲ. ಹೋಗ್ತಾ ಹೋಗ್ತಾ ಹೇಗೆ ಡೆವಲಪ್ ಆಗುತ್ತೆ ನನಗೆ ಗೊತ್ತಿಲ್ಲ.

ಮದುವೆಯ ಬಗ್ಗೆ ಇವಾಗ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ನಾಯಕಿಯಾಗೋದು ನನ್ನ ಕನಸು. ಅದನ್ನ ನಾನು ಪಕ್ಕಕ್ಕೆ ಇಡೋದಕ್ಕೆ ಆಗಲ್ಲ ಎಂದು ಬಿಗ್ ಬಾಸ್ ಸ್ಪರ್ಧಿಯಾದ ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ ಜೊತೆಗಿನ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಆದರೆ ವೀಕ್ಷಕರು ಮಾತ್ರ ಈ ಉತ್ತರಕ್ಕೆ ಅಷ್ಟು ತೃಪ್ತಿ ಹೊಂದಿದಂತೆ ಕಾಣುತ್ತಿಲ್ಲ..!!

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *