ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಪ್ರಿಯಕರನ ಜೊತೆ ನಟಿ ತಮನ್ನಾ ಲಿಪ್ ಲಾಕ್ – ವೈರಲ್ ವಿಡಿಯೋ ಇಲ್ಲಿದೆ…

ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಪ್ರಿಯಕರನ ಜೊತೆ ನಟಿ ತಮನ್ನಾ ಲಿಪ್ ಲಾಕ್ – ವೈರಲ್ ವಿಡಿಯೋ ಇಲ್ಲಿದೆ…

ನ್ಯೂಸ್ ಆ್ಯರೋ : ಬಾಲಿವುಡ್ ಬೆಡಗಿ ತಮನ್ನಾ ಲವ್ ಸ್ಟೋರಿ ಸದ್ಯ ವೈರಲ್ ಆಗಿದೆ. ಮಿಲ್ಕಿ ಬ್ಯೂಟಿ ಲವ್, ಡೇಟಿಂಗ್ ಗಾಸಿಪ್ ವಿಚಾರಗಳಿಂದ ತುಂಬಾ ದೂರ ಇದ್ದರು. ಇದುವರೆಗೂ ಯಾವ ಸ್ಟಾರ್ ಕಲಾವಿದರ ಜೊತೆಯೂ ತಮನ್ನಾ ಹೆಸರು ಥಳಕು ಹಾಕಿಕೊಂಡಿರಲಿಲ್ಲ. ಆದೀಗ ಹೊಸ ವರ್ಷದ ವಿಡಿಯೋ ತಮನ್ನಾ ಲವ್ ಸ್ಟೋರಿಯ ಬಗ್ಗೆ ಸುಳಿವು ನೀಡಿದೆ.

ಮಿಲ್ಕಿ ಬ್ಯೂಟಿ ಸಂಭ್ರಮಾಚರಣೆ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಹೊಸ ವರ್ಷ ಆಚರಣೆ ಮೂಲಕ ತಮನ್ನಾ ತನ್ನ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಅಂದಹಾಗೆ ಸೌತ್ ಸ್ಟಾರ್ ತಮನ್ನಾ ಡೇಟಿಂಗ್ ಮಾಡುತ್ತಿರುವ ಮಿರ್ಜಾಪುರ್ ಖ್ಯಾತಿಯ ನಟ ಮತ್ಯಾರು ಅಲ್ಲ ವಿಜಯ್ ವರ್ಮ. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ಒಟ್ಟಿಗೆ ಹೊಸ ವರ್ಷ ಆಚರಿಸಿದ್ದಾರೆ. ಇಬ್ಬರೂ ಗೋವಾದಲ್ಲಿ 2023ರನ್ನು ಸ್ವಾಗತಿಸಿದ್ದಾರೆ.

ಒಂದೆರಡು ವಿಡಿಯೊಗಳಲ್ಲಿ, ಅವರು ಒಟ್ಟಿಗೆ ನೃತ್ಯ ಮಾಡುವುದೂ ಕಾಣಿಸಿಕೊಂಡಿದೆ. ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಅವರು ಗೋವಾದಲ್ಲಿ ಹೊಸ ವರ್ಷವನ್ನು ಆಚರಿಸುತ್ತಿರುವಾಗ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಿರುವುದು ಕಂಡುಬಂದಿದೆ. ನಟಿ ಗುಲಾಬಿ ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣಿಸುತ್ತಿದ್ದರೆ, ವಿಜಯ್ ಬಿಳಿ ಶರ್ಟ್‌ನೊಂದಿಗೆ ಹಸಿರು ಶಾರ್ಟ್ಸ್ ಧರಿಸಿದ್ದರು. ವೈರಲ್‌ ಆದ ವಿಡಿಯೊದಲ್ಲಿ ಇಬ್ಬರೂ ತಬ್ಬಿಕೊಂಡು ಚುಂಬಿಸುತ್ತಿರುವಂತೆ ಕಾಣುತ್ತಿದೆ.

ʻಲವ್‌ ಸ್ಟೋರಿಸ್‌ 2ʼ ಶೂಟಿಂಗ್‌ ವೇಳೆ ತಮನ್ನಾ ಅವರು ವಿಜಯ್‌ ವರ್ಮಾ ಅವರನ್ನು ಭೇಟಿಯಾಗಿದ್ದರು. ಆಲಿಯಾ ಭಟ್‌ ʻಡಾರ್ಲಿಂಗ್ಸ್‌ʼ ಸಿನಿಮಾದಲ್ಲಿ ವಿಜಯ್‌ ಕಾಣಿಸಿಕೊಂಡಿದ್ದರು. ಈ ವರ್ಷ ನಟಿ ತಮನ್ನಾ ನವಾಜುದ್ದೀನ್ ಸಿದ್ದಿಕಿ ಜತೆ ʻಬೋಲೆ ಚೂಡಿಯನ್ʼ ಚಿತ್ರದಲ್ಲಿ ನಟಿಸಲಿದ್ದಾರೆ.

4 ವರ್ಷಗಳ ಹಿಂದೆ ‘ಲಸ್ಟ್ ಸ್ಟೋರಿಸ್’ ಆಂಥಾಲಜಿ ಸಿನಿಮಾ ಹಿಟ್ ಆಗಿತ್ತು. ಇದರ ಮುಂದುವರೆದ ಭಾಗ ಶೂಟಿಂಗ್ ನಡೀತಿದೆ. ತಮನ್ನಾ ಹಾಗೂ ವಿಜಯ್ ವರ್ಮಾ ಈ ವೆಬ್‌ ಸೀರಿಸ್‌ನಲ್ಲಿ ನಟಿಸ್ತಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಮೊದಲಿಗೆ ಇಬ್ಬರ ಭೇಟಿ ಮಾಡಿದ್ದರಂತೆ. ಅದೇ ಪರಿಚಯ ಮುಂದೆ ಸ್ನೇಹಕ್ಕೆ ತಿರುಗಿ ಈಗ ಪ್ರೀತಿ ಆಗಿ ಬದಲಾಗಿದೆ ಎನ್ನಲಾಗ್ತಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *