Sharmitha Gowda : ತೆರೆಮೇಲೆ ಅಮ್ಮನಾದ್ರೂ ಸಕತ್ ಹಾಟ್ ಈ ಚೆಲುವೆ – ಬಿಕಿನಿ ಫೋಟೋ ಹಂಚಿಕೊಂಡ ‘ಗೀತಾ’ ಸೀರಿಯಲ್ ನಟಿ

Sharmitha Gowda : ತೆರೆಮೇಲೆ ಅಮ್ಮನಾದ್ರೂ ಸಕತ್ ಹಾಟ್ ಈ ಚೆಲುವೆ – ಬಿಕಿನಿ ಫೋಟೋ ಹಂಚಿಕೊಂಡ ‘ಗೀತಾ’ ಸೀರಿಯಲ್ ನಟಿ

ನ್ಯೂಸ್ ಆ್ಯರೋ‌ : ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗೀತಾ’ ಧಾರಾವಾಹಿಯ ಭಾನುಮತಿ ಪಾತ್ರದ ಮೂಲಕ ಗಮನ ಸೆಳೆದವರು ಶರ್ಮಿತಾ ಗೌಡ. ನೆಗೆಟಿವ್‌ ಪಾತ್ರವಾದರೂ ಈ ಮೂಲಕ ಅವರು ಜನರ ಮನಸ್ಸು ಗೆದ್ದಿದ್ದಾರೆ. ತೆರೆ ಮೇಲೆ ಅವರು ಮಕ್ಕಳ ತಾಯಿ ಪಾತ್ರ ಮಾಡುತ್ತಿದ್ದರೂ ನಿಜ ಜೀವನದಲ್ಲಿ ಅವರು ಸಖತ್ ಗ್ಲ್ಯಾಮರ್ ಆಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋಗಳೇ ಸಾಕ್ಷಿ.

ಬಿಡುವಿನ ವೇಳೆ ಪ್ರವಾಸವನ್ನೇ ಹೆಚ್ಚು ಇಷ್ಟಪಡುವ ಶರ್ಮಿತಾ ವಿದೇಶಗಳಿಗೆ ಆಗಾಗ ತೆರಳುತ್ತಾರೆ. ಇತ್ತೀಚೆಗೆ ವಿಯೆಟ್ನಾಂಗೆ ತೆರಳಿದ್ದ ಅವರು ಅಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಬಿಕಿನಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಶರ್ಮಿತಾ ಗೌಡ ಈ ಫೋಟೋಗಳನ್ನೂ ಹಂಚಿಕೊಂಡಿದ್ದು, ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಶರ್ಮಿತಾ ಗೌಡ ಹೀಗೆ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಸಲ ಹಾಟ್‌ ಅವತಾರದಲ್ಲಿ ಪೋಸ್‌ ನೀಡಿ ಗಮನ ಸೆಳೆದಿದ್ದರು.

ಕೆಲವು ದಿನಗಳ ಹಿಂದೆ ಲಂಕಾ ಪ್ರವಾಸ ಮುಗಿಸಿ, ಅಲ್ಲಿನ ಸುಂದರ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದರು. ಇದೀಗ ಈ ಗ್ಲಾಮರ್ ಅವತಾರ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *