‘ನನ್ನ ಜೀವನಕ್ಕೆ ಬಂದಿದಕ್ಕೆ ಥ್ಯಾಂಕ್ಯೂ ಸೋ ಮಚ್’‌- ರಶ್ಮಿಕಾ ಮಂದಣ್ಣ ಹೀಗೆ ಹೇಳಿದ್ದು ಯಾರಿಗೆ..? ಪೋಸ್ಟ್ ವೈರಲ್..!

‘ನನ್ನ ಜೀವನಕ್ಕೆ ಬಂದಿದಕ್ಕೆ ಥ್ಯಾಂಕ್ಯೂ ಸೋ ಮಚ್’‌- ರಶ್ಮಿಕಾ ಮಂದಣ್ಣ ಹೀಗೆ ಹೇಳಿದ್ದು ಯಾರಿಗೆ..? ಪೋಸ್ಟ್ ವೈರಲ್..!

ನ್ಯೂಸ್ ಆ್ಯರೋ : ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ಹೋಗಿ ಬಾಲಿವುಡ್ ಟಾಲಿವುಡ್ ನಲ್ಲಿ ಜನಪ್ರಿಯರಾಗಿ ಇದೀಗ ನ್ಯಾಷನಲ್ ಕ್ರಷ್ ಬಿರುದು ಪಡೆದಿರುವ ಖ್ಯಾತ ನಟಿ. ಇವರ ಮತ್ತು ವಿಜಯ್ ದೇವರಕೊಂಡ ಅವರ ಮಧ್ಯೆ ಏನೋ ಇದೆ. ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ರೂಮರ್ಸ್ ಹಲವು ವರ್ಷಗಳಿಂದ ಹರಿದಾಡ್ತಿದೆ. ಇದೀಗ ರಶ್ಮಿಕಾ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.

ಸಿನಿಮಾಗಳ ಜೊತೆಗೆ ರಶ್ಮಿಕಾ ಮಂದಣ್ಣ ಲವ್ ಲೈಫ್ ವಿಚಾರಕ್ಕೂ ಭಾರೀ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಇಬ್ಬರೂ ಆಗಾಗ ಫಾರಿನ್ ಟ್ರಿಪ್ ಮಾಡ್ತಿದ್ದಾರೆ. ಇಬ್ಬರು ಒಂದೇ ಪ್ಲೇಸ್ ನಲ್ಲಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದೇ ವೇಳೆ ನಟಿ ರಶ್ಮಿಕಾ ಇನ್ ಸ್ಟಾಗ್ರಾಂ ಪೇಜ್ನಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗುತ್ತಿದೆ.

ರಶ್ಮಿಕಾ ಮಂದಣ್ಣ ಹಾಕಿರುವ ಪೋಸ್ಟ್ ನಲ್ಲಿ ಏನಿದೆ..?

‘ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು’ ಎಂದು ರಶ್ಮಿಕಾ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವಿಜಯ್ ದೇವರಕೊಂಡ ಅವರಿಗಾಗಿ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಪೋಸ್ಟ್ ಸಖತ್ ವೈರಲ್​ ಆಗ್ತಿದೆ. ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ಅನಿಮಲ್ ಪ್ರಮೋಷನ್ ವೇಳೆ ಬಾಲಯ್ಯನ ಶೋನಲ್ಲಿ ವಿಜಯ್​ಗೆ ಕಾಲ್​ ಮಾಡಿದ್ದ ವೇಳೆ ಇಬ್ಬರ ನಡುವೆ ಲವ್ ಪಕ್ಕಾ ಎನ್ನುವ ಮಾತು ಕೇಳಿ ಬಂದಿತ್ತು.

ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಟಾಲಿವುಡ್, ಕಾಲಿವುಡ್​, ಬಾಲಿವುಡ್ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ವಿಜಯ್ ಕೂಡ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಸೌತ್ ಸಿನಿಮಾಗಳಲ್ಲಿ ಮಿಂಚಿದ ಬಳಿಕ ಬಾಲಿವುಡ್ನಲ್ಲಿ ಶೈನ್ ಆಗ್ತಿದ್ದಾರೆ. ಇತ್ತೀಚೆಗಷ್ಟೇ ರಶ್ಮಿಕಾ ನಟಿಸಿದ್ದ ಅನಿಮಲ್ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಸೃಷ್ಟಿಸಿತ್ತು.

ಅನಿಮಲ್ ಚಿತ್ರ ವಿಶ್ವದಾದ್ಯಂತ 800 ಕೋಟಿ ರೂಪಾಯಿ ದಾಟಿದೆ. ಭಾರತದಲ್ಲೇ 500 ಕೋಟಿ ಕಲೆಕ್ಷನ್ ಮಾಡಿದ್ದು, ರಶ್ಮಿಕಾ ಅಭಿನಯವನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ನಟಿ ಕೂಡ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *