ವಿಕೇಂಡ್‌ ವಿತ್‌ ರಮೇಶ್‌ ಶೋನಲ್ಲಿ ಅತಿಯಾಗಿ ಇಂಗ್ಲಿಷ್‌ ಬಳಸಿದ ರಮ್ಯಾ: ಕನ್ನಡಿಗರ ಕೋಪಕ್ಕೆ ಗುರಿಯಾದ ಮೋಹಕತಾರೆ, ಕನ್ನಡ ಸಬ್‌ಟೈಟಲ್‌ ಹಾಕ್ರೋ ಎಂದ ಟ್ರೋಲಿಗರು

ವಿಕೇಂಡ್‌ ವಿತ್‌ ರಮೇಶ್‌ ಶೋನಲ್ಲಿ ಅತಿಯಾಗಿ ಇಂಗ್ಲಿಷ್‌ ಬಳಸಿದ ರಮ್ಯಾ: ಕನ್ನಡಿಗರ ಕೋಪಕ್ಕೆ ಗುರಿಯಾದ ಮೋಹಕತಾರೆ, ಕನ್ನಡ ಸಬ್‌ಟೈಟಲ್‌ ಹಾಕ್ರೋ ಎಂದ ಟ್ರೋಲಿಗರು

ನ್ಯೂಸ್‌ ಆ್ಯರೋ : ಕನ್ನಡ ಕಿರುತೆರೆಯ ಬಹುನಿರೀಕ್ಷಿತ ವಿಕೇಂಡ್ ವಿತ್‌ ರಮೇಶ್‌ ಆರಂಭವಾಗಿದೆ. ಈ ಆವೃತ್ತಿಯ ಮೊದಲ ಅತಿಥಿಯಾಗಿ ಮೋಹಕತಾರೆ ರಮ್ಯಾ ಸಾಧಕರ ಕುರ್ಚಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅತಿಯಾಗಿ ಇಂಗ್ಲಿಷ್‌ ಬಳಕೆ ಮಾಡುವ ಮೂಲಕ ದುಪ್ಪಟ್ಟು ನಿರೀಕ್ಷೆಯೊಂದಿಗೆ ಕೂತಿದ್ದ ವೀಕ್ಷಕರಿಗೆ ಕೊಂಚ ಮಟ್ಟಿಗೆ ನಿರಾಸೆ ಮೂಡಿಸಿದ್ದಾರೆ.

ರಮ್ಯಾ ಅವರು ಅತಿಥಿ ಸೀಟ್​ನಲ್ಲಿ ಕುಳಿತು ತಮ್ಮ ಬಾಲ್ಯ, ಸಿನಿಮಾ, ಮೊದಲ ಸಂಪಾದನೆ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ಆದರೆ, ಎಲ್ಲಕ್ಕಿಂತ ಹೆಚ್ಚು ಪ್ರೇಕ್ಷಕರು ಗಮನಿಸಿದ್ದು ರಮ್ಯಾ ಅವರ ಇಂಗ್ಲಿಷ್‌. ಅವರು ಇಂಗ್ಲಿಷ್ ಮಿಶ್ರಿತ ಕನ್ನಡ ಮಾತನಾಡಿರುವುದಕ್ಕೆ ಕನ್ನಡಿಗರ ಕೋಪಗೊಂಡಿದ್ದಾರೆ.

ರಮ್ಯಾ ಸಂಚಿಕೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಇಡೀ ಮನೆ ಮಂದಿ ಕೂತು ಕಾರ್ಯಕ್ರಮ ನೋಡುತ್ತಿದ್ದವರಿಗೆ ಕಿರಿಕಿರಿ ಮಾಡಿದ್ದು ರಮ್ಯಾ ಇಂಗ್ಲಿಷ್‌. ಇಡೀ ಕಾರ್ಯಕ್ರಮದಲ್ಲಿ ಕನ್ನಡ ಬಳಸಿದ್ದು ಕಡಿಮೆ ಅನ್ನೋದು ನೆಟ್ಟಿಗರ ವಾದ. ಇದು ಕನ್ನಡ ಕಾರ್ಯಕ್ರಮದಂತೆ ಇರಲಿಲ್ಲ. ಯಾವುದೋ ಕಂಗ್ಲಿಷ್ ಕಾರ್ಯಕ್ರಮದಂತೆ ಇತ್ತು ಅಂತ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ರಮ್ಯಾ ಕುರಿತು ಬಹಳಷ್ಟು ಟ್ರೋಲ್​ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರು ಶೋನಲ್ಲಿ ಹೆಚ್ಚು ಇಂಗ್ಲಿಷ್ ಮಾತನಾಡಿದ್ದನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಅದರಲ್ಲಿ ಒಂದರಲ್ಲಿ ‘ನನ್ನಜ್ಜಿಗೆ ರಮ್ಯಾ ಅವರ ಪರಿಚಯ ಇದೆ. ಆದರೆ ಅವರಿಗೆ ಇಂಗ್ಲಿಷ್ ಗೊತ್ತಿಲ್ಲ. ಹಾಗಾಗಿ ಅವರು ಟಿವಿ ಆಫ್ ಮಾಡಿ ಹೋಗಿ ಮಲಗಿದ್ರು’ ಎಂದಿದ್ದಾರೆ ನೆಟ್ಟಿಗರು.

‘ಈ ಸೀಸನ್​ನಲ್ಲಿ ವೀಕೆಂಡ್ ವಿತ್ ರಮೇಶ್ ಯಾಕೆ ಇಂಗ್ಲಿಷ್ ವರ್ಷನ್ ಮಾಡಿದ್ದಾರೆ? ಕನ್ನಡ ಸಬ್​ಟೈಟಲ್ ಆದ್ರೂ ಹಾಕ್ರೋ ಕೆಳಗೆ, ಕನ್ನಡ ಮಾಯ’ ಎಂದಿದ್ದಾರೆ ಇನ್ನೊಬ್ಬರು. ಒಬ್ಬರು ‘ಕನ್ನಡಕ್ಕಿಂತ ಯಾರು ದೊಡ್ಡವರಿಲ್ಲ, ಇಂಗ್ಲಿಷ್ ಊಟದ ಜೊತೆ ಉಪ್ಪಿನಕಾಯಿ ತರ ಇರ್ಲಿ. ಆದ್ರೆ ಅದೇ ಊಟ ಆಗೋದು ಬೇಡ’ ಅಂತ ಹೇಳಿ ಉಪೇಂದ್ರ ಕನ್ನಡದ ಬಗ್ಗೆ ಮಾತಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇನ್ನೊಬ್ಬರು ‘ತುಂಬಾ ಚೆನ್ನಾಗಿರುತ್ತೆ ನೋಡಕ್ಕೆ ಅಂತ ಕುಳಿತೆ ರಮ್ಯಾ ಎಪಿಸೋಡ್‌ನ. ಆದರೆ, ಬರೀ ತಸ್ಸು ಪುಸ್ಸು ಇಂಗ್ಲಿಷ್ ಕೇಳಿ ಕೇಳಿ ಸಾಕಾಗ್ತಿದೆ .. ಏನ್ ಕರ್ಮ ಬಂತಪ್ಪ..’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಜೊತೆನೇ ನ್ಯಾಷನಲ್ ಕ್ರಶ್ ರಶ್ಮಿಕಾರನ್ನೂ ಎಳೆದು ತಂದಿದ್ದಾರೆ. ಟ್ರೋಲಿಗರೊಬ್ಬರು ‘ರಮ್ಯಾ ತತ್ಸಮ.. ರಶ್ಮಿಕಾ ಮಂದಣ್ಣ ತದ್ಬವ. ಹೆಚ್ಚಿನ ಮಾಹಿತಿಗಾಗಿ ವೀಕೆಂಡ್ ವಿತ್ ಇಂಗ್ಲಿಷ್ ನೋಡಿ’ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಮತ್ತೊಬ್ಬರು ಇದು ವೀಕೆಂಡ್ ವಿತ್ ರಮೇಶ್ ಹಾ? ಅಥವಾ ವೀಕೆಂಡ್ ವಿತ್ ಇಂಗ್ಲಿಷ್ ಹಾ? ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಮೇಲೆ ಪ್ರೀತಿ ಅಭಿಮಾನ ಜಾಸ್ತಿ ಇದೆ. ಆದರೆ, ನೀವು ಕನ್ನಡ ಜಾಸ್ತಿ ಬಳಸದೆ ಇದ್ದದ್ದು ಖಂಡಿತ ತಪ್ಪು ಎಂದಿದ್ದಾರೆ ನೆಟ್ಟಿಗರು.

‘ಲೇ ಗುಂಡ್‌ಕಲ್ಲು, ಈ ಎಪಿಸೋಡ್‌ನ ಕನ್ನಡದಲ್ಲಿ ರಿಲೀಡ್‌ ಮಾಡಪ್ಪ’, ‘ಅಲ್ಲ ಹುಣಸೂರಪ್ಪ ಈ ಶೋನ ನಮ್‌ ಕನ್ನಡಾಗು ಮಾಡ್ರಿ’ ಎಂದು ಚಾನೆಲ್‌ನ ಮುಖ್ಯಸ್ಥರನ್ನೂ ಟ್ರೋಲ್‌ ಮಾಡಲಾಗಿದೆ.

ವೀಕೆಂಡ್ ವಿಥ್ ರಮೇಶ್ ಎಂದು ಪೂಜಾ ಗಾಂಧಿ ಅವರು ಪೋಸ್ಟ್ ಮಾಡಿದ ಕನ್ನಡ ಬರಹದ ಫೋಟೋ ಪೋಸ್ಟ್ ಮಾಡಿ ನೆಟ್ಟಿಗರು ರಮ್ಯಾ ಅವರನ್ನು ಟ್ರೋಲ್ ಮಾಡಿದ್ದಾರೆ. ರಮ್ಯಾ ಅವರನ್ನು ವೀಕೆಂಡ್ ವಿತ್ ರಮೇಶ್​ನಲ್ಲಿ ನೋಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಕನ್ನಡದಲ್ಲಿ ಪತ್ರಬರೆದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ನಟಿ ಪೂಜಾ ಗಾಂಧಿ ಅವರನ್ನು ನೆಟ್ಟಿಗರು ಹೊಗಳುತ್ತಿದ್ದಾರೆ.

ರಮ್ಯಾ ಪರಿಚಯ ನೋಡೋದಾದರೆ ಆರ್.ಟಿ. ನಾರಾಯಣ್ ಮತ್ತು ರಂಜಿತಾ ದಂಪತಿಗಳ ಪುತ್ರಿಯಾಗಿ 29 ನವೆಂಬರ್ 1982ರಲ್ಲಿ ಜನಿಸಿದರು. ಊಟಿಯ ಬೋರ್ಡಿಂಗ್ ಸ್ಕೂಲ್​ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ರಮ್ಯಾ, ಚೆನ್ನೈನಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಬಾಲಿವುಡ್‌ ಜಾಕಿ ಶ್ರಾಫ್‌ ರಮ್ಯಾ ಅವರ ಫೇವರಿಟ್ ಹೀರೋ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದ ರಮ್ಯಾ ಗೆಳತಿಯರು, ನಟಿಯ ಶಾಲಾ ದಿನಗಳ ಬಗ್ಗೆ ಮಾತಾಡಿದ್ರು. ತಮ್ಮ ಹಳೆಯ ಫೋಟೋಗಳನ್ನು ನೋಡಿ ರಮ್ಯಾ ಕೂಡ ತುಂಬಾ ಖುಷಿ ಪಟ್ಟಿದ್ದಾರೆ. ಬಾಲ್ಯದಲ್ಲಿ ಸ್ಫೋರ್ಟ್ಸ್​ನಲ್ಲಿ ಮುಂದಿದ್ದ ರಮ್ಯಾಗೆ ಬ್ಯಾಸ್ಕೆಟ್ ಬಾಲ್ ಅಂದ್ರೆ ತುಂಬಾ ಇಷ್ಟ. ತಮ್ಮ ಸಿನಿಮಾ ಜರ್ನಿ, ರಾಜಕೀಯ ಪಯಣದ ಬಗ್ಗೆಯೂ ಮುಕ್ತವಾಗಿ ಮಾಡನಾಡಿದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *