ನನಗೆ ಶಾರುಖ್ ಖಾನ್ ಮಗುವಿಗೆ ತಾಯಿಯಾಗೋಕೆ ಇಷ್ಟ – ರಾಖಿ ಸಾವಂತ್ ಹೇಳಿಕೆಗೆ ನಿಬ್ಬೆರಗಾದ ಬಾಲಿವುಡ್..!!

ನ್ಯೂಸ್ ಆ್ಯರೋ : ಬಾಲಿವುಡ್ ನ ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ರಾಖಿ ಸಾವಂತ್ ವೈಯಕ್ತಿಕ ಬದುಕಿನ ವಿವಾದಗಳನ್ನು ನೀವು ನೋಡಿರ್ತೀರಿ. ಒಂದಲ್ಲ ಒಂದು ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುವುದೇ ಇವರ ಕೆಲಸ. ಇದೀಗ ಈ ನಟಿ ಶಾಕಿಂಗ್ ಹೇಳಿಕೆ ನೀಡುವುದರ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಮೆಕ್ಕಾ ಮದೀನಾಕ್ಕೆ ತೆರಳಿ, ನಾನೀಗ ಫಾತೀಮಾ ಆಗಿ ಬದಲಾಗಿದ್ದೇನೆ ಎಂದು ಹೇಳಿಕೊಂಡು ದೊಡ್ಡ ಸದ್ದು ಮಾಡಿದ್ದರು. ಇದೀಗ ಮಕ್ಕಳನ್ನು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್‌ನಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳು ಮಾಡಿಕೊಳ್ಳುವುದು ಸಾಮಾನ್ಯ ಎನಿಸಿದೆ. ಬಿಟೌನ್‌ ಹಲವು ಸ್ಟಾರ್‌ ದಂಪತಿ ಇದೇ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಸಾಕಷ್ಟು ಉದಾಹರಣೆಗಳಿವೆ. ಇದೀಗ ಇದೇ ಬಾಡಿಗೆ ತಾಯ್ತನದ ಬಗ್ಗೆಯೇ ಕಾಂಟ್ರವರ್ಸಿ ಕ್ವೀನ್‌ ರಾಖಿ ಸಾವಂತ್‌ ಮಾತನಾಡಿದ್ದಾರೆ.

ನನಗೂ ಮಕ್ಕಳೆಂದರೆ ಇಷ್ಟ, ನಾನೂ ಮಕ್ಕಳು ಮಾಡಿಕೊಳ್ಳಬೇಕಿದೆ ಎಂದಿದ್ದಾರೆ. ಅದಕ್ಕೆ ಶಾರುಖ್‌ ಖಾನ್‌ ಬೇಕಂತೆ..! ರಾಖಿ ಸಾವಂತ್‌ ಮಕ್ಕಳು ಬೇಕೆಂದು ಬಯಸಿದ್ದಾರೆ. ಬಾಡಿಗೆ ತಾಯ್ತನದ ಮೂಲಕವೇ ಮಕ್ಕಳನ್ನು ಮಾಡಿಕೊಳ್ಳುತ್ತಾರಂತೆ. ಆದರೆ, ಅದಕ್ಕೆ ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಖಾನ್‌ ಅವರ ವೀರ್ಯ ಬೇಕು ಎಂದು ರಾಖಿ ಹೊಸ ಬೇಡಿಕೆ ಇಟ್ಟಿದ್ದಾಳೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ರಾಖಿ, ನೇರವಾಗಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾಳೆ.

ಶಾರುಖ್ ಖಾನ್ ವೀರ್ಯ ಬೇಕು..!

ಬಾಲಿವುಡ್‌ನ ಫಿಲ್ಮಿಗ್ಯಾನ್‌ನ ಪಾಡ್‌ಕಾಸ್ಟ್‌ ರಾಖಿ ಅವರ ಸಂದರ್ಶನ ಮಾಡಿದೆ. ಈ ವೇಳೆ ನೀವೇಕೆ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಬಹುದು? ಬಾಲಿವುಡ್‌ ಅಥವಾ ಹಾಲಿವುಡ್‌ ಯಾವುದೇ ನಟನ ವೀರ್ಯವನ್ನು ನೀವು ದಾನದ ರೂಪದಲ್ಲಿ ಪಡೆದು ಮಗುವನ್ನು ಪಡೆಯಬಹುದಲ್ಲವೇ? ನೀವು ನಿಮ್ಮ ಮಗುವಿನ ತಂದೆಯಾಗ ಬಯಸುವ ಬಾಲಿವುಡ್‌ ಸ್ಟಾರ್‌ ಯಾರನ್ನು ಸೂಚಿಸುತ್ತೀರಿ? ಎಂದೂ ಪ್ರಶ್ನೆ ಕೇಳಲಾಗಿದೆ. ಆಗ ರಾಖಿ ಶಾರುಖ್‌ ಖಾನ್‌ ಹೆಸರನ್ನು ಹೇಳಿದ್ದಾರೆ.

ರಾಖಿಯ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಶಾರುಖ್ ಖಾನ್ ನನಗೆ ಅವರ ವೀರ್ಯವನ್ನು ನೀಡಿದರೆ, ನಾನು ಬಾಡಿಗೆ ತಾಯ್ತನಕ್ಕೆ ಅಣಿಯಾಗಬಲ್ಲೆ. ಅವರೇ ಏಕೆ ಎಂದರೆ ಅವರ ಮಕ್ಕಳು ಎಷ್ಟೊಂದು ಕ್ಯೂಟ್‌ ಆಗಿವೆ. ಹಾಗಾಗಿ ನನಗೂ ಅವರ ವೀರ್ಯ ಸಿಕ್ಕರೆ ಒಳ್ಳೆಯದು ಎಂದಿದ್ದಾರೆ. ನಟಿಯ ಈ ಹೇಳಿಕೆಗೆ ಬಗೆಬಗೆ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್ ಇದೀಗ ಮತ್ತೊಂದು ಶಾಕಿಂಗ್ ಹೇಳಿಕೆ ನೀಡುವುದರ ಮೂಲಕ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.