ಬಾಕ್ಸ್‌ ಆಫೀಸಿನಲ್ಲಿ 300 ಕೋಟಿ ಬಾಚಿ ಮುನ್ನುಗ್ಗುತ್ತಿರುವ ‘ಗದರ್ 2’ – ಕೆಜಿಎಫ್ 2, ಪಠಾಣ್ ಚಿತ್ರದ ದಾಖಲೆ ಎರಡೇ ವಾರಕ್ಕೆ ಉಡೀಸ್

ಬಾಕ್ಸ್‌ ಆಫೀಸಿನಲ್ಲಿ 300 ಕೋಟಿ ಬಾಚಿ ಮುನ್ನುಗ್ಗುತ್ತಿರುವ ‘ಗದರ್ 2’ – ಕೆಜಿಎಫ್ 2, ಪಠಾಣ್ ಚಿತ್ರದ ದಾಖಲೆ ಎರಡೇ ವಾರಕ್ಕೆ ಉಡೀಸ್

ನ್ಯೂಸ್‌ನ ಆ್ಯರೋ : ಆಗಸ್ಟ್‌ 11ರಂದು ಬಿಡುಗಡೆಯಾಗಿದ್ದನಟ ಸನ್ನಿ ಡಿಯೋಲ್ ಅಭಿನಯದ ಗದರ್ 2 ಸಿನಿಮಾ 300 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಈ ಮೂಲಕ ನಟ ರಾಕಿ ಬಾಯ್ ಯಶ್ ನಟನೆಯ ಕೆಜಿಎಫ್ 2 ಹಾಗೂ ಶಾರುಖ್‌ ಖಾನ್ ನಟನೆಯ ಪಠಾಣ್ ಚಿತ್ರದ ದಾಖಲೆಯನ್ನು ಉಡೀಸ್ ಮಾಡಿ ಸಖತ್ ಕಮಾಯಿ ಮಾಡುತ್ತಿದೆ.

ಸಿನಿಮಾ ಬಿಡುಗಡೆಯಾಗಿ ಎರಡನೇ ವಾರದಲ್ಲಿ ಇಷ್ಟೊಂದು ಕಲೆಕ್ಷನ್ ಮಾಡಿ ಹೊಸ ಇತಿಹಾಸ ಸೃಷಿಸಿದೆ. ಈ ಮೊದಲು ರಿಲೀಸ್ ಆಗಿ ದಾಖಲೆ ನಿರ್ಮಿಸಿದ ಸಿನಿಮಾಗಳು ಎರಡು ವಾರದಲ್ಲಿ ದಿ ಕಾಶ್ಮೀರ್ ಫೈಲ್ಸ್(19 ಕೋಟಿ ರೂಪಾಯಿ), ದಂಗಲ್ (18 ಕೋಟಿ ರೂಪಾಯಿ), ಪಿಕೆ (15 ಕೋಟಿ ರೂಪಾಯಿ), ಕೆಜಿಎಫ್ 2 (11.25) ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದನ್ನು ಗದರ್ 2 ಹಿಂದಿಕ್ಕಿದೆ.

ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಸನ್ನಿ ಡಿಯೋಲ್ ಅವರಿಗೆ ಇಷ್ಟು ದೊಡ್ಡ ಮಟ್ಟದ ಯಶಸ್ಸು ಇದೇ ಮೊದಲು. ಈ ಸಿನಿಮಾದ ಸಕ್ಸಸ್‌ನಿಂದ ಸನ್ನಿ ಡಿಯೋಲ್‌ ಅವರಿಗೆ ಅನೇಕ ಅವಕಾಶಗಳು ಅರಸಿ ಬರುತ್ತಿದೆ.

ಅನಿಲ್ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದ ಗದರ್ 2 ಚಿತ್ರಕ್ಕೆ ಕಮಲ್ ಮುಕುಟ್ ಹಾಗೂ ಅನಿಲ್ ಶರ್ಮಾ ಅವರು ಬಂಡವಾಳ ಹೂಡಿದ್ದಾರೆ. 80 ಕೋಟಿ ವೆಚ್ಚದಲ್ಲಿ ಬಿಡುಗಡೆಯಾದ ಈ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಸಿನಿ ಮಂದಿಯೂ ಸನ್ನಿ ಡಿಯೋಲ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *