ಮತ್ತೊಬ್ಬ ಟ್ರಾವೆಲ್ಲರ್ ಯೂಟ್ಯೂಬರ್ ವಿರುದ್ಧ Dr.Bro ಆಕ್ರೋಶ: ಯಾರನ್ನೂ ನಂಬಗಿಲ್ಲ ಎಂದು ಗಗನ್ ಬೇಸರ

ಮತ್ತೊಬ್ಬ ಟ್ರಾವೆಲ್ಲರ್ ಯೂಟ್ಯೂಬರ್ ವಿರುದ್ಧ Dr.Bro ಆಕ್ರೋಶ: ಯಾರನ್ನೂ ನಂಬಗಿಲ್ಲ ಎಂದು ಗಗನ್ ಬೇಸರ

ನ್ಯೂಸ್ ಆ್ಯರೋ : ‘ನಮಸ್ಕಾರ ದೇವ್ರೋ’ ಎನ್ನುತ್ತಾ ಇಡೀ ವಿಶ್ವವನ್ನೇ ಯೂಟ್ಯೂಬ್ ಚಾನೇಲ್‌ ಮೂಲಕ ಕನ್ನಡಿಗರಿಗೆ ತೋರಿಸುತ್ತಿರುವ ಗಗನ್ ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ತುಂಬಾನೇ ಪರಿಚಯದ ಮುಖ.

ಸಿಂಪಲ್ ಕನ್ನಡ ಮಾತು, ಸಹಜ ಗುಣ, ಜನರ ತೋರಿಕೆ ಇಲ್ಲದ ಎಕ್ಸ್‌ಪ್ರೆಶನ್‌, ಪಾಲಿಶ್ಡ್ ಅಲ್ಲದ ಭಾಷೆ ಎಲ್ಲವೂ ಕೇಳೋಕೆ ಸಖತ್ ಮಜಾವಾಗಿದ್ದು, ಬೇರೆ ಚಾನೇಲ್‌ಗಿಂತ ಡಾ ಬ್ರೋ ಯೂಟ್ಯೂಬ್ ಚಾನೇಲ್ ತುಂಬಾನೇ ವಿಭಿನ್ನವಾಗಿದೆ.

ಆದರೆ ಈ ಯುವಕನಿಗೆ ಮತ್ತೊಬ್ಬ ಯೂಟ್ಯೂಬರ್‌ ಮೋಸ ಮಾಡಿರುವ ಬಗ್ಗೆ ಸ್ವತ: ಗಗನ್‌ ಅವರು ತಮ್ಮ ಚಾನೇಲ್‌ನಲ್ಲಿ ಹೇಳಿಕೊಂಡಿದ್ದಾರೆ.

“ಹೆಲ್ಪ್ ಮಾಡಿದವರಿಗೆ ಬೆನ್ನ ಹಿಂದೆ ಚೂರಿ ಹಾಕುವ ಜನರಿರುತ್ತಾರೆ” ಅಂತ ಕೇಳಿದ್ದೆ. ಈಗ ಸ್ವತಃ ನಂಗೆ ಅನುಭವ ಆಗಿದೆ. ವ್ಲಾಗರ್ Lohith kannada Traveller ಅವರು ಅಫಘಾನಿಸ್ತಾನದಲ್ಲಿ ವಿಡಿಯೊ ಮಾಡಲು ಯತ್ನಿಸಿ ತಾಲಿಬಾನ್‌ನಿಂದ ಹೆದರಿ ದುಬೈಗೆ ಓಡಿ ಬಂದಿದ್ದರು. ಈ ವಿಷಯ ನನಗೆ ತಿಳಿದ ತಕ್ಷಣ, ಅವರನ್ನು ನಾನೇ ಸಂಪರ್ಕಿಸಿ ಧೈರ್ಯ ತುಂಬಿದೆ. ನಂತರ “ನಿಮ್ಮ ವಿಡಿಯೋದಲ್ಲಿ ಬಂದು ನನ್ನ ಜನರಿಗೆ ನಿಮಗೆ ಸಪೋರ್ಟ್ ಮಾಡಲು ಹೇಳ್ತೇನೆ ಅಂದೆ. ನನ್ನ ಚಾನೆಲ್‌ನಲ್ಲಿ ನಾನು ಎಂದಿಗೂ ಸಬ್ಸ್‌ಕೈಬ್‌ ಮಾಡಿ ಲೈಕ್ ಮಾಡಿ, ಶೇರ್ ಮಾಡಿ ಅಂತ ಹೇಳಲಿಲ್ಲ. ಆದ್ರೆ ಲೋಹಿತ್‌ ವಿಡಿಯೋದಲ್ಲಿ ಹೇಳಿದೆ. ನಂತರ ನಿಮ್ಮಲ್ಲೇ ಸಾಕಷ್ಟು ಜನ ಅವರಿಗೆ ಸಪೋರ್ಟ್ ಕೂಡಾ ಮಾಡಿದೀರಿ . ಅದು ನನಗೆ ತುಂಬ ಖುಷಿ ನೀಡಿತು.

ನಾನು ಆಫ್ಘಾನಿಸ್ತಾನದ ನಂತರ ಕೀನ್ಯಾಗೆ ಹೋಗಲು ಸಿದ್ದವಾಗಿದ್ದೆ. ಆದರೆ ಅಲ್ಲಿ ಆಗಲೇ ಫ್ರೈಯಿಂಗ್‌ ಪಾಸ್‌ಪೋರ್ಟ್‌ನವರು ಇದ್ದರು. ಅವರಿದ್ದಾಗ ನಾನು ಅಲ್ಲಿಗೆ ಹೋಗಿ ನನ್ನ ಚಾನೆಲ್‌ಗೆ ವಿಡಿಯೋ ಮಾಡುವುದು ಧರ್ಮ ಅಲ್ಲ ಅನ್ನಿಸಿತು. ಹೀಗಾಗಿ ಕೀನ್ಯಾಗೆ ಹೋಗಲಿಲ್ಲ. ಬದಲಿಗೆ ತಾಂಜಾನಿಯಾಗೆ ಬಂದೆ. ನಂತರ ಲೋಹಿತ್‌, ಇಥಿಯೋಪಿಯಾಗೆ ಹೋದ್ರು. ನಿಮಗೆ ಗೊತ್ತು- ನನ್ನ ವಿಡಿಯೋ ಲೇಟ್ ಬರುತ್ತೆ. ಯಾಕಂದ್ರೆ ನನ್ನ ರಿಸರ್ಚ್, ವಿಡಿಯೋ ಶೂಟ್ ಹಾಗೂ ಎಡಿಟ್‌ಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತೆ. ಇದರ ಮಧ್ಯೆ ಲೋಹಿತ್‌ ನಂಗೆ ಮೆಸೇಜ್ ಮಾಡಿದರು. “ತಾಂಜಾನಿಯಾದ ಹಾಡ್ಜಬಿ ಟ್ರೈಬ್ ಬಗೆ ವಿಡಿಯೋ ಮಾಡ್ತೀರಾ?” ಅಂತ ವಿಚಾರಿಸಿದರು. ನಾನು ಆಲ್ ರೆಡಿ ಹಾಡ್ಜಬಿ ಟ್ರೈಬ್ ಬಗ್ಗೆ ರಿಸರ್ಚ್‌ನಲ್ಲಿ ತೊಡಗಿದ್ದೇನೆ ಹಾಗೂ ಭಾನುವಾರ ವಿಡಿಯೋ ಮಾಡುವುದಾಗಿ ತಿಳಿಸಿದ್ದೆ. ನನ್ನ ವಿಡಿಯೋದಲ್ಲಿ ಸಾಕಷ್ಟು ಜನ ಇರ್ತಾರೆ, ಸಾಕಷ್ಟು ಕ್ಯಾಮೆರಾ ಶಾಟ್‌ಗಳು ಇರುತ್ತವೆ. ಹೀಗಾಗಿ ಎಡಿಟ್ ಮಾಡಲು ಸಾಕಷ್ಟು ಸಮಯ ಹಿಡಿಯುತ್ತೆ ಅನ್ನೋದು ತಿಳಿದಿದ್ದ ಲೋಹಿತ್‌ ತಾನಿದ್ದ ಭಾರತದಿಂದ ಬೇಗ ತಾಂಜಾನಿಯಾಗೆ ಬಂದ. ನಾನು ಇರುವ ಊರಿಗೇ ಬಂದು ನಾನು ಆಲ್ ರೆಡಿ ಎಡಿಟ್ ಮಾಡುತ್ತಿದ್ದ ಹಡ್ಜಬಿ ಟ್ರೈಬ್‌ಗಳ ಬಗ್ಗೆಯೇ ತರಾತುರಿಯಲ್ಲಿ ವಿಡಿಯೋ ಮಾಡಿ ಮರು ದಿನ ಅದಾಗಲೇ ಅಪ್‌ಲೋಡ್‌ ಮಾಡಿಬಿಟ್ಟರು!

ಇದರಲ್ಲೇನು ತಪ್ಪಿದೆ ಅಂತ ಕೆಲವರಿಗೆ ಅನ್ನಿಸಬಹುದು. ಎಲ್ಲಾ ವಿಷಯ ತಿಳಿದಿದ್ದು ಅವಸರವಾಗಿ ತಾಂಜಾನಿಯಾ ಹಾಡ್ಜಬಿಗೆ ಬಂದು ಅಂದೇ ವಿಡಿಯೋ ಮಾಡಿ ಅಪ್ಲೋಡ್ ಮಾಡೋದು ಸರೀನಾ..? ಈಗಾಗಲೇ 1 ವಾರದಿಂದ ಆ ಒಂದೇ ವಿಡಿಯ ಗಾಗಿ ಕೆಲಸ ಮಾಡುತ್ತಿದ್ದ ನನ್ನ ಕತೆ ಏನಾಗಬೇಡ..? ಮಾನವೀಯತೆ ಇರುವ ಯಾವುದೇ ವ್ಯಕ್ತಿ ಇಂಥ ಕೆಲಸ ಮಾಡುವುದಿಲ್ಲ. ಆಲ್ ಮೋಸ್ಟ್ ಎಲ್ಲಾ ನ್ಯೂಸ್ ಚಾನೆಲ್ ನವರೂ ಇಂಟರ್‌ವ್ಯೂಗೆ ಕರೆದಿದ್ದರು , ಕನಿಷ್ಠ 100 ಜನ ಯೂಟ್ಯೂಬರ್ಸ್ ಕೊಲಾಬ್ರೆಷನ್‌ಗೆ ಕರೆದಿದ್ದರು. ಎಲ್ಲಾ ಬಿಟ್ಟು ಲೋಹಿತ್‌ ಕುಮಾರ್‌ ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದೆ. ಆದರೆ ನನಗೆ ಅವರು ಕೊಟ್ಟ ಬಹುಮಾನವಿದು. ‌

ಧನ್ಯವಾದ, ಲೋಹಿತ್‌. ದೇವರು ನಿಮಗೆ ಆಯುಷ್ಯ, ಆರೋಗ್ಯ, ಐಶ್ವರ್ಯ ಎಲ್ಲಾ ಕೊಟ್ಟು ಕಾಪಾಡಲಿ. ಇನ್ನು ಮುಂದೆಯಾದರೂ ಸಹಾಯ ಮಾಡಿದವರಿಗೆ ಎಂದಿಗೂ ನಂಬಿಕೆದ್ರೋಹ ಮಾಡಬೇಡಿ ಪ್ಲೀಸ್ ಎಂದು ಗಗನ್‌ ತಮ್ಮ ಯೂಟ್ಯೂಬ್‌ ಕಮ್ಯುನಿಟಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಲೋಹಿತ್‌, ಹಾಡ್ಜಬಿ ಜನರೊಂದಿಗೆ ರೆಕಾರ್ಡ್‌ ಮಾಡಿದ ಸ್ಕ್ರೀನ್‌ ಶಾಟ್‌ ಕೂಡಾ ಹಾಕಿದ್ದಾರೆ. ಇದಕ್ಕೆ ಕಮೆಂಟ್‌ ಮಾಡಿರುವ ಜನರು, ಇಂತ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ಹೇಳುತ್ತಿದ್ದಾರೆ.

ಗಗನ್‌ ಮೂಲತಃ ಬೆಂಗಳೂರಿನವರು. ಸದ್ಯಕ್ಕೆ ಅವರಿಗೆ ಯೂಟ್ಯೂಬ್‌ನಲ್ಲಿ 1 ಮಿಲಿಯನ್‌ ಚಂದಾದಾರರಿದ್ದಾರೆ. ವಿಡಿಯೋಗಳಿಗೆ ಮಿಲಿಯನ್‌ಗಟ್ಟಲೆ ವ್ಯೂವ್ಸ್‌ ಬರುತ್ತಿದೆ ಇಷ್ಟೆಲ್ಲಾ ಖ್ಯಾತಿ ಗಳಿಸಿರುವ ಗಗನ್‌ ಅಪ್ಪ-ಅಮ್ಮನ ಬಳಿ ದುಡ್ಡು ಕೇಳದೆ, ತಮ್ಮ ಯೂಟ್ಯೂಬ್‌ನಿಂದ ಬರುವ ಹಣವನ್ನೇ ದೇಶ ಸುತ್ತಲು ಬಳಸಿಕೊಳ್ಳುತ್ತಿದ್ದಾರಂತೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *