ಟಿಕೆಟ್ ಬುಕಿಂಗ್ ನಲ್ಲಿ ದಾಖಲೆ ಬರೆದ ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾ – ಮೊದಲ ದಿನವೇ ಬುಕಿಂಗ್ ಆದ ಟಿಕೆಟ್ ಗಳು ಎಷ್ಟು ಕೋಟಿ ಗೊತ್ತಾ…!?

ಟಿಕೆಟ್ ಬುಕಿಂಗ್ ನಲ್ಲಿ ದಾಖಲೆ ಬರೆದ ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾ – ಮೊದಲ ದಿನವೇ ಬುಕಿಂಗ್ ಆದ ಟಿಕೆಟ್ ಗಳು ಎಷ್ಟು ಕೋಟಿ ಗೊತ್ತಾ…!?

ನ್ಯೂಸ್ ಆ್ಯರೋ : ಸ್ಯಾಂಡಲ್ವುಡ್ನಲ್ಲಿ ಸದ್ಯ ತೆರೆಕಂಡ ಎಲ್ಲಾ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗ್ತಿದೆ. 2022ರ ವರ್ಷವಂತೂ ಚಂದನವನದ ಪಾಲಿನ ಸುವರ್ಣಯುಗ ಎಂದು ಹೇಳಿದರೆ ತಪ್ಪಾಗೋದಿಲ್ಲ. 2023ನೇ ವರ್ಷ ಸ್ಯಾಂಡಲ್ವುಡ್ನ ಪಾಲಿಗೆ ಇದೇ ರೀತಿ ಇರಲಿ ಎಂಬುದು ಸಿನಿಮಾ ರಸಿಕರ ಆಶಯವಾಗಿದೆ. ಈ ಎಲ್ಲದರ ನಡುವೆ ಇದೀಗ ಕರುನಾಡಿನಲ್ಲಿ ಕ್ರಾಂತಿ ಫೀವರ್ ಶುರುವಾಗಿದ್ದು ಬಾಕ್ಸಾಫೀಸನಲ್ಲಿ ಧೂಳೆಬ್ಬಿಸುವ ಎಲ್ಲಾ ಲಕ್ಷಣಗಳು ಗೋಚರವಾಗ್ತಿದೆ. ಇಂದು ಬೆಳಗ್ಗೆಯಿಂದಲೇ ಕ್ರಾಂತಿ ಸಿನಿಮಾಗೆ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದ್ದು ಅನೇಕ ಸಿನಿಮಾ ಮಂದಿರಗಳಲ್ಲಿ ಚಿತ್ರಮಂದಿರ ತುಂಬಿದೆ ಎಂಬ ಬೋರ್ಡ್ ಬೀಳೋದು ಪಕ್ಕಾ ಆಗಿದೆ.

ಜನವರಿ 26ರಂದು ಕ್ರಾಂತಿ ಸಿನಿಮಾ ರಿಲೀಸ್ ಆಗಲಿದ್ದು, ಮೂರು ದಿನ ಮುಂಚಿತವಾಗಿ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದೆ. ಕ್ರಾಂತಿ ಸಿನಿಮಾದ ಟಿಕೆಟ್ಗಳು ಯಾವ ರೀತಿ ಸೋಲ್ಡೌಟ್ ಆಗಿದೆಯೆಂದರೆ ಕೇವಲ ಮೂರು ಗಂಟೆ ಅವಧಿಯಲ್ಲಿ 25 ಸಾವಿರಕ್ಕೂ ಅಧಿಕ ಟಿಕೆಟ್ಗಳು ಬುಕ್ಕಿಂಗ್ ಆಗಿಬಿಟ್ಟಿದೆ. ಸಂಜೆ ವೇಳೆಗೆ 1 ಲಕ್ಷದವರೆಗೂ ಟಿಕೆಟ್‌ ಬುಕ್ಕಿಂಗ್ ಆಗಿದ್ದು, ಕೆಲವೇ ನಿಮಿಷಗಳಲ್ಲಿ ಬಹುತೇಕ ಕಡೆ ಮಾರ್ನಿಂಗ್‌ ಶೋಗಳು ಸಂಪೂರ್ಣ ಬುಕ್ಕಿಂಗ್‌ ಆಗಿವೆ. ಒಟ್ಟಾಗಿ ಮೊದಲ ದಿನವೇ 15 ಗಂಟೆಗಳಲ್ಲಿ 2 ಕೋಟಿ ರೂ.ಗಳಷ್ಟು ಅಡ್ವಾನ್ಸ್‌ ಬುಕ್ಕಿಂಗ್‌ ಆಗಿದೆ. ಬಹುತೇಕ ಎಲ್ಲಾ ಮಾರ್ನಿಂಗ್ ಶೋಗಳು ಫುಲ್ ಆಗಿವೆ.

‘ಕ್ರಾಂತಿ’ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದ್ದು, ಚಿತ್ರತಂಡವಂತೂ ದೊಡ್ಡ ಮಟ್ಟದಲ್ಲಿ ಪ್ರಮೋಷನ್‌ ಕೆಲಸ ಶುರು ಮಾಡಿದೆ. ದರ್ಶನ್‌, ಬಹುತೇಕ ಎಲ್ಲಾ ವಾಹಿನಿಗಳು ಬಹುತೇಕ ಯೂಟ್ಯೂಬ್‌ ಚಾನೆಲ್‌ಗಳಿಗೆ ಇಂಟರ್‌ವ್ಯೂ ಕೊಡುತ್ತಾ ಬಂದಿದ್ದಾರೆ.

ದರ್ಶನ್ ಅಭಿಮಾನಿಗಳು ಅಂದರೆ ಅವರ ಸೆಲೆಬ್ರೇಷನ್ ಬೇರೆ ಲೆವಲ್ನಲ್ಲಿಯೇ ಇರುತ್ತೆ. ಹೀಗಾಗಿ ಈಗಾಗಲೇ ದಚ್ಚು ಫ್ಯಾನ್ಸ್ ಚಿತ್ರಮಂದಿರಗಳ ಎದುರಲ್ಲಿ ಡಿ ಬಾಸ್ ಕಟೌಟ್ ಹಾಕೋಕೆ ತಯಾರಿ ನಡೆಸುತ್ತಿದ್ದಾರೆ. ಸದ್ಯ ಚಿತ್ರರಂಗದ ಎಲ್ಲಾ ಸ್ಟಾರ್ ನಟರು ತಮ್ಮ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಳೆದ ವರ್ಷ ಯಾವುದೇ ಸಿನಿಮಾವನ್ನು ತೆರೆಗೆ ತಾರದ ದರ್ಶನ್ ಈ ವರ್ಷ ಕ್ರಾಂತಿ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ಗೆ ಜೋಡಿಯಾಗಿ ನಟಿ ರಚಿತಾ ರಾಮ್ ನಟಿಸಿದ್ದಾರೆ. ವಿ.ಹರಿಕೃಷ್ಣ ನಿರ್ದೇಶನದ ಈ ಸಿನಿಮಾದಲ್ಲಿ ಸುಮಲತಾ, ಕ್ರೇಜಿಸ್ಟಾರ್ ರವಿಚಂದ್ರನ್, ರವಿಶಂಕರ್ ಸೇರಿದಂತೆ ಪ್ರಮುಖ ತಾರಾಗಣವೇ ಇದೆ.

ಇನ್ನೂ ‘ಕ್ರಾಂತಿ’ ಚಿತ್ರವನ್ನು ಮೀಡಿಯಾ ಹೌಸ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಬಿ. ಸುರೇಶ್‌ ಹಾಗೂ ಶೈಲಜಾ ನಾಗ್‌ ನಿರ್ಮಾಣ ಮಾಡಿದ್ದಾರೆ. ವಿ. ಹರಿಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದು, ಚಿತ್ರದ ಹಾಡುಗಳಿಗೆ ಹರಿಕೃಷ್ಣ ಅವರದ್ದೇ ಸಂಗೀತ ಇದೆ. ಈಗಾಗಲೇ ರಿಲೀಸ್‌ ಆಗಿರುವ ಹಾಡುಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಪುಷ್ಪವತಿ ಹಾಡಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ರೀಲ್ಸ್‌ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಯಶಸ್ಸಿಗೆ ಚಿತ್ರತಂಡ ಮಾತ್ರವಲ್ಲದೆ ದರ್ಶನ್‌ ಅಭಿಮಾನಿಗಳು ಕೂಡಾ ದೊಡ್ಡ ಮಟ್ಟದಲ್ಲಿ ಪ್ರಮೋಷನ್‌ ಮಾಡುತ್ತಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *