Anchor Anushree : 35 ವರ್ಷವಾದ್ರೂ ಈ ಒಂದು ಕಾರಣಕ್ಕೆ ಅನುಶ್ರೀ ಇನ್ನೂ ಮದ್ವೆಯಾಗಿಲ್ಲವಂತೆ..! – ಕಾರಣ ಏನ್ ಗೊತ್ತಾ…? ಅವರೇ ಹೇಳಿದ ಸತ್ಯವಿದು..

Anchor Anushree : 35 ವರ್ಷವಾದ್ರೂ ಈ ಒಂದು ಕಾರಣಕ್ಕೆ ಅನುಶ್ರೀ ಇನ್ನೂ ಮದ್ವೆಯಾಗಿಲ್ಲವಂತೆ..! – ಕಾರಣ ಏನ್ ಗೊತ್ತಾ…? ಅವರೇ ಹೇಳಿದ ಸತ್ಯವಿದು..

ನ್ಯೂಸ್ ಆ್ಯರೋ : ಕಿರುತೆರೆಯ ಸ್ಟಾರ್ ಆ್ಯಂಕರ್ ಅನುಶ್ರೀ ಹೆಸರು ಕೇಳದವರಿಲ್ಲ. ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡುವ ಈ ತುಳುನಾಡಿನ ಬೆಡಗಿಗೆ ಇದೀಗ ಅಂತರಾಷ್ಟ್ರೀಯ ಮಟ್ಟದ ಅಭಿಮಾನಿಗಳೂ ಇದ್ದಾರೆ. ಇವರ ವೈಯಕ್ತಿಕ ಜೀವನದ ಬಗ್ಗೆ ಅನೇಕ ಊಹಾಪೋಹಗಳಿವೆ. ಮದುವೆಯ ವಯಸ್ಸು ಮೀರಿದ್ರೂ ಅನುಶ್ರೀ ಇನ್ನೂ ಯಾಕೆ ಮದ್ವೆಯಾಗಿಲ್ಲ ಅನ್ನೋ ಪ್ರಶ್ನೆ ಎಲ್ಲರದ್ದು. ಇದೀಗ ಈ ಪ್ರಶ್ನೆಗೆ ತೆರೆ ಬೀಳುವ ಉತ್ತರವನ್ನು ಸ್ವತಃ ಅನುಶ್ರಿ ಅವರೇ ನೀಡಿದ್ದಾರೆ.

ಸಿನಿಮಾಗಳ ಪ್ರೀ ರಿಲೀಸ್ ಶೋ, ರಿಯಾಲಿಟಿ ಶೋ ಹೀಗೆ ಅನೇಕ ಜನಪ್ರಿಯ ಕಾರ್ಯಕಮಗಳಲ್ಲಿ ನಿರೂಪಣೆ ಮಾಡುವ ಅನುಶ್ರೀ ಕೆಲವೊಂದು ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. ಇನ್ನು ಇವರು ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯರಲ್ಲಿ ಒಬ್ಬರು.

ಇನ್ನೂ ಮದ್ವೆಯಾಗಿಲ್ಲ ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ನೀಡಿದ ಅನುಶ್ರೀ…!

ಇನ್ನು ಇಷ್ಟೊಂದು ಹೆಸರು ಗಳಿಸಿರುವ ಅನುಶ್ರೀ ಮದುವೆಯಾಗದೆ ಒಬ್ಬಂಟಿ ಜೀವನ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇವರ ವೈಯಕ್ತಿಕ ಜೀವನದ ಬಗ್ಗೆ ಅನೇಕ ವದಂತಿಗಳಿವೆ.

ಅಂದಹಾಗೆ ಏಕಾಂಗಿಯಾಗಿ ಉಳಿಯುವ ನಿರ್ಧಾರದ ಬಗ್ಗೆ ಅನುಶ್ರೀ ಬಳಿ ಕೇಳಿದಾಗ, “ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಜೀವನದಲ್ಲಿ ಅನುಸರಿಸಿಕೊಂಡು ನಡೆಯುವ ಸಂಗಾತಿ ನನಗೆ ಇನ್ನೂ ಸಿಕ್ಕಿಲ್ಲ” ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಅನೇಕ ಸೆಲೆಬ್ರೆಟಿಗಳ ಸಂದರ್ಶನ ಮಾಡುವಾಗಲೂ ಇವರು ಮದುವೆಯ ವಿಚಾರ ಬಂದ್ರೆ ‘ಹೌದು. ಮದ್ವೆಯಾಗುವ ಹುಡುಗ ಅಥವಾ ಹುಡುಗಿ ಗಂಡ- ಹೆಂಡತಿ ಎಂಬ ಭಾವನೆಯಲ್ಲಿ ಮಾತ್ರವಲ್ಲದೆ ಆತ್ಮೀಯ ಸ್ನೇಹಿತರಂತೆ ಭಾಂದವ್ಯದಲ್ಲಿ ಇರಬೇಕು. ದಾಂಪತ್ಯದಲ್ಲಿ ಹೊಂದಾಣಿಕೆ ಬಹಳ ಮುಖ್ಯ’ ಎಂದು ಆಗಾಗ ಹೇಳುತ್ತಿರುತ್ತಾರೆ.

ಅಷ್ಟೇ ಅಲ್ಲದೆ, ಅನುಶ್ರೀಗೆ ಯಾವಾಗಲೂ ಮದುವೆಗಿಂತ ತನ್ನ ವೃತ್ತಿಜೀವನ ಮುಖ್ಯ. ಅವರಿಗೆ ತಮ್ಮ ಜೀವನದಲ್ಲಿ ಇನ್ನಷ್ಟೂ ಸಾಧಿಸಬೇಕೆಂಬ ಹಂಬಲವಿದೆ. ಇದೇ ಕಾರಣದಿಂದ 35 ವರ್ಷ ವಯಸ್ಸಾದರೂ ಮದುವೆಯಾಗದೆ ಉಳಿದಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಆ್ಯಂಕರ್ ಅನುಶ್ರೀ ಯಾರನ್ನು ಮದ್ವೆಯಾಗಬಹುದು ಅನ್ನೋ ಕ್ಯೂರಿಯಾಸಿಟಿ ಜನರದ್ದು. ಅದಕ್ಕೆ ಅವರೇ ಉತ್ತರ ಕೊಡಬೇಕಷ್ಟೆ..!

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *