ಟ್ರಾಫಿಕ್ ನಿಂದ ಪಾರಾಗಲು ಬೈಕ್ ಏರಿ ಶೂಟಿಂಗ್ ಸ್ಥಳಕ್ಕೆ ತೆರಳಿದ ಅಭಿತಾಭ್, ಅನುಷ್ಕಾ ನಡೆಗೆ ಫ್ಯಾನ್ಸ್ ಫಿದಾ – ಇಬ್ಬರಿಗೂ ಕೇಸ್ ಜಡಿದ ಪೊಲೀಸರು, ಕಾರಣ ಏನು ಗೊತ್ತಾ?
- ಮನರಂಜನೆ
- May 16, 2023
- No Comment
- 138
ನ್ಯೂಸ್ ಆ್ಯರೋ : ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಬಾಲಿವುಡ್ ನ ಬಹು ದೊಡ್ಡ ಸ್ಟಾರ್ಸ್. ಇದೀಗ ಇಬ್ಬರಿಗೆ ಸಂಕಷ್ಟ ಎದುರಾಗಿದೆ. ಹೆಲ್ಮೆಟ್ ಇಲ್ಲದೆ ಇಬ್ಬರು ಪ್ರತ್ಯೇಕ ಪ್ರಕರಣಗಳಲ್ಲಿ ಮುಂಬೈಯಲ್ಲಿ ಬೈಕ್ ನಲ್ಲಿ ಸಂಚರಿಸಿರುವ ವೀಡಿಯೋ ವೈರಲ್ ಆಗಿದ್ದು, ಇಬ್ಬರ ವಿರುದ್ದ ದೂರು ದಾಖಲಾಗಿದೆ.
ಅಮಿತಾಭ್ ಬಚ್ಚನ್ ಹಾಗೂ ಅನುಷ್ಕಾ ಶರ್ಮಾ ಟ್ರಾಫಿಕ್ ಕಿರಿಕಿರಿಯಿಂದ ಬೈಕ್ ಏರಿದ್ದರು. ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಥಳಕ್ಕೆ ಹೋಗಲಾಗದೆ ಪರದಾಡುತ್ತಿದ್ದ ಅಮಿತಾಭ್ ಬೈಕ್ ಏರಿದ್ದರು. ಅನುಷ್ಕಾ ಶರ್ಮಾ ಕೂಡ ಬೈಕ್ ಹತ್ತಿ ಕೆಲಸಕ್ಕೆ ತೆರಳಿದ್ದರು. ಆ ಸಮಯದಲ್ಲಿ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ.
ಅಮಿತಾಭ್ ಬಚ್ಚನ್ ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಥಳಕ್ಕೆ ಹೋಗಲಾರದೆ ಪರದಾಡುತ್ತಿದ್ದರು. ಬಳಿಕ ಅಭಿಮಾನಿಯೊಬ್ಬರ ಬಳಿ ಲಿಫ್ಟ್ ತೆಗೆದುಕೊಂಡಿದ್ದರು. ಈ ಬಗ್ಗೆ ಅವರು ಪೋಸ್ಟ್ ಶೇರ್ ಮಾಡಿ, ‘ ಬೈಕ್ ರೈಡರ್ಗೆ ಧನ್ಯವಾದ. ನಿಮಗೆ ಗೊತ್ತಿಲ್ಲ. ಆದರೆ ನೀವು ನನ್ನನ್ನು ಸರಿಯಾದ ಸಮಯಕ್ಕೆ ಕರೆದುಕೊಂಡು ಹೋಗಿದ್ದೀರಿ. ವಿಪರೀತ ಟ್ರಾಫಿಕ್ ಜಾಮ್ ತಪ್ಪಿಸಿ ಕರ್ಕೊಂಡು ಹೋಗಿದ್ದೀರಿ. ಶಾರ್ಟ್ ಮತ್ತು ಹಳದಿ ಬಣ್ಣದ ಟಿ ಶರ್ಟ್ ಮಾಲಿಕರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದರು. ಇದೀಗ ಮುಂಬೈ ಪೊಲೀಸರು ಅಮಿತಾಭ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಅನುಷ್ಕಾ ಶರ್ಮಾ ತನ್ನ ಬಾಡಿಗಾರ್ಡ್ ಜೊತೆ ಬೈಕ್ನಲ್ಲಿ ಹೊರಟಿದ್ದರು. ರಸ್ತೆ ಬ್ಲಾಕ್ ಆಗಿದೆ ಎನ್ನುವ ಕಾರಣಕ್ಕೆ ಅನುಷ್ಕಾ ಹೆಲ್ಮೆಟ್ ಧರಿಸದೆ ಬೈಕ್ನಲ್ಲಿ ಹೊರಟಿದ್ದರು. ಇದೀಗ ಇವರ ವಿರುದ್ಧವೂ ಪೊಲೀಸರು ದೂರು ದಾಖಲಿಸಿದ್ದಾರೆ.