ಆಲಿಯಾ ಭಟ್ ಗೆ ತಮ್ಮ ಮಗಳು ಕಲಾವಿದೆಯಾಗುವುದು ಇಷ್ಟವಿಲ್ಲವಂತೆ – ಮತ್ಯಾವ ಕ್ಷೇತ್ರದತ್ತ ನಟಿಯ ಆಸಕ್ತಿ?

ಆಲಿಯಾ ಭಟ್ ಗೆ ತಮ್ಮ ಮಗಳು ಕಲಾವಿದೆಯಾಗುವುದು ಇಷ್ಟವಿಲ್ಲವಂತೆ – ಮತ್ಯಾವ ಕ್ಷೇತ್ರದತ್ತ ನಟಿಯ ಆಸಕ್ತಿ?

ನ್ಯೂಸ್ ಆ್ಯರೋ‌ : ಸಾಮಾನ್ಯವಾಗಿ ಚಿತ್ರ ತಾರೆಯರು ತಮ್ಮ ಮಕ್ಕಳನ್ನು ಕಲಾವಿದರನ್ನಾಗಿಸಲು ಇಷ್ಟಪಡುತ್ತಾರೆ. ಆದರೆ ಬಾಲಿವುಡ್ ನಟಿ ಆಲಿಯಾ ಭಟ್ ಇದಕ್ಕಿಂತ ಭಿನ್ನ. ತಮ್ಮ ಮಗಳು ವಿಜ್ಞಾನಿಯಾಗಬೇಕು ಎನ್ನುವುದು ತನ್ನ ಇಚ್ಛೆ ಎಂದು ಅವರು ಹೇಳಿಕೊಂಡಿದ್ದಾರೆ.

ಆಲಿಯಾ ಹೇಳಿದ್ದೇನು?

ಆಲಿಯಾ ಮತ್ತು ರಣಬೀರ್ ಕಪೂರ್ ಇಬ್ಬರೂ ಬಾಲಿವುಡ್ ನ ಜನಪ್ರಿಯ, ಬೇಡಿಕೆಯ ಕಲಾವಿದರು. ಕಳೆದ ವರ್ಷ ವಿವಾಹಿತರಾದ ಇವರಿಗೆ ರಾಹಾ ಹೆಸರಿನ ಮಗಳಿದ್ದಾಳೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ ಆಲಿಯಾ ಮಗಳನ್ನು ಕಲಾವಿದೆಯಾಗಿ ನೋಡುವುದಕ್ಕಿಂತ ವಿಜ್ಞಾನಿಯಾಗಿ ನೋಡಲು ಇಷ್ಟಪಡುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ರಣಬೀರ್ ಕಪೂರ್ ಮಾತನಾಡಿ, ”ಮಗಳ ಭವಿಷ್ಯದ ಬಗ್ಗೆ ಈಗಲೇ ಆಲಿಯಾ ಚಿಂತಿಸತೊಡಗಿದ್ದಾಳೆ. ಅತಿಯಾಗಿ ಕಾಳಜಿ ವಹಿಸುವುದರಿಂದ ಮಕ್ಕಳು ಭವಿಷ್ಯದಲ್ಲಿ ತೊಂದರೆಗೊಳಗಾಗಬಹುದು. ಆದ್ದರಿಂದ ನಾನು ಮಗಳ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ಆಕೆಯೊಂದಿಗೆ ಯಾವಾಗ ಫುಟ್ಬಾಲ್ ಆಡುತ್ತೇನೆ ಎಂದು ಕಾಯುತ್ತಿದ್ದೇನೆ” ಎಂದು ಹೇಳಿದ್ದಾರೆ.

ಸದ್ಯ ಆಲಿಯಾ ಭಟ್ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕರಣ್ ಜೋಹರ್ ಹಲವು ವರ್ಷಗಳ ಬಳಿಕ ನಿರ್ದೇಶಿಸಿರುವ ಈ ಚಿತ್ರ ಜುಲೈ 28ರಂದು ತೆರೆ ಕಾಣಲಿದೆ. ಇದರಲ್ಲಿ ರಣವೀರ್ ಸಿಂಗ್ ನಾಯಕನಾಗಿ ಅಭಿನಯಿಸಿದ್ದಾರೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *