ಸಾಯೋಕೂ ಮೊದಲೇ ಡೆತ್ ನೋಟ್ ಬರೆದಿಟ್ಟಿದ್ದಾರೆ ನಟಿ ಪಾಯಲ್ ಘೋಷ್ – ಈಕೆ ಸತ್ತರೆ ಕಾರಣ ಯಾರಂತೆ ಗೊತ್ತಾ?

ಸಾಯೋಕೂ ಮೊದಲೇ ಡೆತ್ ನೋಟ್ ಬರೆದಿಟ್ಟಿದ್ದಾರೆ ನಟಿ ಪಾಯಲ್ ಘೋಷ್ – ಈಕೆ ಸತ್ತರೆ ಕಾರಣ ಯಾರಂತೆ ಗೊತ್ತಾ?

ನ್ಯೂಸ್ ಆ್ಯರೋ : ಬೆಕ್ಕಿನ ಕಣ್ಣಿನ ಸುಂದರಿ, ಬಾಲಿವುಡ್ ಬೆಡಗಿ ಪಾಯಲ್ ಘೋಷ್ ಅವರಿಗೆ ಅದೆನಾಗಿದೆಯೋ ಗೊತ್ತಿಲ್ಲ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದ ನಟಿ, ಇದೀಗ ಏಕಾಏಕಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ಡೆತ್ ನೋಟ್ ಬರೆದ ಪಾಯಲ್ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಡೆತ್ ನೋಟ್ ಕಂಡಿರುವ ನೆಟ್ಟಿಗರೆಲ್ಲ ಆತಂಕದಿಂದ ಹೌಹಾರಿದ್ದಾರೆ.

ಪಾಯಲ್ ಡೆತ್ ನೋಟ್ ನಲ್ಲಿ ಬರೆದಿರೋದೇನು?

ಸದ್ಯ, ಎಲ್ಲರನ್ನೂ ಬೆಚ್ಚಿ ಬೀಳಿಸಿರುವ ನಟಿ, ‘ನಾನು ಪಾಯಲ್ ಘೋಷ್. ನಾನು ಒಂದು ವೇಳೆ ಹೃದಯಾಘಾತ ಇಲ್ಲವೇ ಆತ್ಮಹತ್ಯೆಯಿಂದ ಸಾವಿಗೀಡಾದರೆ ಅದಕ್ಕೆ ಕಾರಣವಾದವರು…’ ಎಂದಷ್ಟೇ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಈ ಪತ್ರವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಲ್ಲೂ ಕೂಡ ಯಾರ ಹೆಸರನ್ನೂ ಅಥವಾ ನಿಖರ ಕಾರಣವನ್ನೂ ಉಲ್ಲೇಖಿಸಿಲ್ಲ.

ಡೆತ್ ನೋಟ್ ಸೋಶಿಯಲ್ ಮಿಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಬೆಚ್ಚಿಬಿದ್ದ ನೆಟ್ಟಿಗರೆಲ್ಲ ಕಮೆಂಟಿನ ಸುರಿಮಳೆ ಸುರಿಸಿದ್ದಾರೆ. ಆದರೆ ಅರೆ-ಬರೆ ಬರೆದ ಡೆತ್ ನೋಟ್ ಬಗ್ಗೆಯಾಗಲಿ, ನೆಟ್ಟಿಗರ ಪ್ರಶ್ನೆಗಾಗಲಿ ಪಾಯಲ್ ಉತ್ತರಿಸಿಲ್ಲ‌.

30ರ ಹರೆಯದ ಬಾಲಿವುಡ್ ನಟಿ ಪಾಯಲ್ ಘೋಷ್ ಕೇವಲ ಹಿಂದಿಯಲ್ಲಷ್ಟೇ ಅಲ್ಲದೆ ಇಂಗ್ಲಿಷ್‌, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದ ನಟಿ, ಕೆಲ ದಿನಗಳ ಹಿಂದಷ್ಟೇ ಮಾನಸಿಕತೆಯ ಬಗ್ಗೆ ಮಾತನಾಡಿದ್ದರು. ವರ್ಷದ ಹಿಂದಷ್ಟೇ ಪಾಯಲ್ ಮೇಲೆ ಯಾರೋ ದುಷ್ಕರ್ಮಿಗಳು ದಾಳಿ ಮಾಡಿ, ಆ್ಯಸಿಡ್ ಎರೆಚಲು ಪ್ರಯತ್ನಿಸಿದ್ದರಂತೆ. ಇದೀಗ ಡೆತ್ ನೋಟ್ ಬರೆದಿರುವುದು ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ನೆಟ್ಟಿಗರ ಆತಂಕದ ಸಾವಿರ ಪ್ರಶ್ನೆಗಳಿಗೆಲ್ಲ ನಟಿಯೇ ಉತ್ತರಿಸಬೇಕಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *