
ಬಾಲ್ಯ ಸ್ನೇಹಿತನ ಕಂಪೆನಿಯಲ್ಲಿ ವಿರಾಟ್ ಕೊಹ್ಲಿದ್ದೂ ಇದೆ ಪಾರ್ಟ್ನರ್ ಶಿಪ್..! – ಯಾರದು ಗೆಳೆಯ..? ಎಷ್ಟು ದೊಡ್ಡ ಕಂಪನಿ ಗೊತ್ತಾ?
- ವಾಣಿಜ್ಯ ಸುದ್ದಿ
- November 11, 2023
- No Comment
- 108
ನ್ಯೂಸ್ ಆ್ಯರೋ : ಭಾರತದಲ್ಲಿ ಮಾಜಿ ಕ್ಯಾಪ್ಟನ್ ಆದ್ರೂ ಈಗಲೂ ಲಕ್ಷ ಮಂದಿ ಅಭಿಮಾನಿಗಳನ್ನು ಸಂಪಾದಿಸುತ್ತಿರುವ ವಿರಾಟ್ ಕೊಹ್ಲಿ ದ.ಆಫ್ರಿಕಾ ವಿರುದ್ಧ 49ನೇ ಏಕದಿನ ಶತಕ ದಾಖಲಿಸುವ ಮೂಲಕ ಕ್ರಿಕೆಟ್ ಕಿಂಗ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಬ್ರೇಕ್ ಮಾಡಿ ಟ್ರೆಂಡ್ ಸೃಷ್ಟಿಸಿದ್ದಾರೆ.
ಕೊಹ್ಲಿ ಕೇವಲ ಕ್ರಿಕೆಟಿಗ ಮಾತ್ರವಲ್ಲ…!
ವಿರಾಟ್ ಕೊಹ್ಲಿ ಸ್ನೇಹಿತರಾದ ವಾರ್ತಿಕ್ ತಿಹಾರ ಅವರು ಸಹಾಯ ಮಾಡುವುದರ ಮೂಲಕ 1050ಕೋ.ರೂ ಹೆಚ್ಚಿನ ನಿವ್ವಳ ಮೌಲ್ಯದ ಆಸ್ತಿ ಸಂಪಾದಿಸುವುದರಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಕೊಹ್ಲಿ ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲ ಒಬ್ಬ ಯಶಸ್ವಿ ಉದ್ಯಮಿಯೂ ಹೌದು.
ವಾರ್ತಿಕ್ ತಿಹಾರಾ ಯಾರು..?
ವಾರ್ತಿಕ್ ತಿಹಾರಾ ಅವರು ವಿರಾಟ್ ಕೊಹ್ಲಿ ಅವರ ಬಾಲ್ಯ ಸ್ನೇಹಿತರಾಗಿದ್ದು ಅನೇಕ ಕಾರ್ಯ ಚಟುವಟಿಕೆಗಳಲ್ಲಿ ಒಟ್ಟಾಗಿ ಸೇರುತ್ತಾರೆ. ಸುಮಾರು ಎರಡು ದಶಕಗಳಿಂದ ಇವರಿಬ್ಬರು ಆಪ್ತರಾಗಿದ್ದಾರೆ. ವಿರಾಟ್ ಕೊಹ್ಲಿಯಂತೆ ವಾರ್ತಿಕ್ ಕೂಡಾ ಕ್ರಿಕೆಟ್ ಆಟಗಾರನಾಗಿದ್ದು ಇಬ್ಬರು ಕೂಡಾ ಅಂಡರ್- 17ನಲ್ಲಿ ದಿಲ್ಲಿಯ ಪರ ಆಟವಾಡಿದ್ದರು.
ಈ ಒಡನಾಟವು ಇಬ್ಬರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಮಾಡುತ್ತ ಹೋಯಿತು. ಭವಿಷ್ಯದಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರೆ ವಾರ್ತಿಕ್ ಉದ್ಯಮ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದರು.
ಅದರ ಪರಿಣಾಮವೇ ಟ್ರೂ ಪ್ಯಾಲೇಟ್ ಹಾಸ್ಪಿಟಾಲಿಟಿ ಎಂಬ ಅವರ ಸ್ವಂತ ಕಂಪೆನಿ.
ಇವರ ಕಂಪೆನಿಯಲ್ಲಿ ವಿರಾಟ್ ಕೊಹ್ಲಿ ಕೂಡಾ ಸಹ ಮಾಲೀಕರಾಗಿದ್ದಾರೆ. ಕೊಹ್ಲಿ ಅವರ 18ನಂಬರ್ ಜರ್ಸಿ ನಂತರ ಈ ಬ್ರಾಂಡ್ ಜನಪ್ರಿಯತೆ ಪಡೆದುಕೊಂಡಿದೆ. ಕಾಲಕ್ರಮೇಣ ಒನ್18 ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿದ್ದು ಈಗ ದಿಲ್ಲಿ, ಪುಣೆ ಹಾಗೂ ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಹೊಂದಿದೆ. ವರದಿಗಳ ಪ್ರಕಾರ ಒನ್ 18 ಈಗ ಸುಮಾರು 110ಕೋಟಿ ರೂ. ಆಸ್ತಿ ಮೌಲ್ಯವನ್ನು ಹೊಂದಿದೆ. ಅತ್ಯಾಧುನಿಕ ಅಲಂಕಾರ, ರುಚಿಯಾದ ಆಹಾರ ಪದ್ಧತಿಯಿಂದ ಇದು ಅತ್ಯಂತ ಪ್ರಸಿದ್ಧವಾಗಿದೆ.