ಇಂದಿನಿಂದ “ಪೇಟಿಎಂ ಪೇಮೆಂಟ್ಸ್ ಬ್ಯಾಂಕ್” ಸೇವೆ ಬಂದ್ – ವ್ಯಾಲೆಟ್, ಫಾಸ್ಟ್ಯಾಗ್ ನಲ್ಲಿ ಹಣ ಹೊಂದಿರುವವರು ಗಮನಿಸಿ…

ಇಂದಿನಿಂದ “ಪೇಟಿಎಂ ಪೇಮೆಂಟ್ಸ್ ಬ್ಯಾಂಕ್” ಸೇವೆ ಬಂದ್ – ವ್ಯಾಲೆಟ್, ಫಾಸ್ಟ್ಯಾಗ್ ನಲ್ಲಿ ಹಣ ಹೊಂದಿರುವವರು ಗಮನಿಸಿ…

ನ್ಯೂಸ್ ಆ್ಯರೋ : ಡಿಜಿಟಲ್‌ ದಾಖಲಾತಿ ಕೆವೈಸಿ ವಿಚಾರದಲ್ಲಿ ಅಕ್ರಮ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್‌ಬಿಐ ನಿಷೇಧ ಹೇರಿದ್ದು, ಮಾರ್ಚ್ 15 ರಿಂದ ಅಂದರೆ ಇಂದಿನಿಂದ ಎಲ್ಲಾ ಸೇವೆಗಳ ಮೇಲಿನ ನಿರ್ಬಂಧ ಜಾರಿಗೆ ಬರಲಿದೆ.

ಆದರೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆ ಮತ್ತು ಫಾಸ್ಟ್ ಟ್ಯಾಗ್ ಸೇರಿದಂತೆ ವಿವಿಧ ವ್ಯಾಲೆಟ್ ಗಳಲ್ಲಿ ಹಣವಿದ್ದರೆ ಅದು ಖಾಲಿಯಾಗುವವರೆಗೆ ಬಳಸಬಹುದು. ಆದರೆ, ಅವುಗಳಿಗೆ ಮತ್ತೆ ರೀಚಾರ್ಜ್ ಮಾಡಲು ಅವಕಾಶ ಇರುವುದಿಲ್ಲ. ಫೆಬ್ರವರಿ 29ರಂದೇ ತನ್ನ ಎಲ್ಲಾ ಸೇವೆ ನಿಲ್ಲಿಸುವಂತೆ ಆರ್‌ಬಿಐ ಆದೇಶ ನೀಡಿ ನಂತರ ಮಾರ್ಚ್ 14ರವರೆಗೂ ವಿಸ್ತರಿಸಿತ್ತು.

ಪೇಟಿಎಂ ಬಳಕೆದಾರರು ಕಳುಹಿಸುವ ಹಣದ ವ್ಯವಹಾರ ಯೆಸ್ ಬ್ಯಾಂಕ್ ಮೂಲಕ ನಡೆಯುತ್ತದೆ. ಹೀಗಾಗಿ ಪೇಟಿಎಂ ಸೇವೆ ಮುಂದುವರೆಯುತ್ತದೆ. ಇದುವರೆಗೆ ಪೇಟಿಎಂ ಆಪ್ ಸೇವೆ ನಿರ್ಬಂಧಕ್ಕೆ ಒಳಗಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೂಲಕ ನಡೆಯುತ್ತಿತ್ತು. ಈಗ ಯೆಸ್ ಬ್ಯಾಂಕ್ ಮೂಲಕ ನಡೆಯಲಿದ್ದು, ಪೇಟಿಎಂ ಯುಪಿಐ ಸೇವೆ ಮುಂದುವರೆಯಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇತರ ಮೂರು ಬ್ಯಾಂಕ್ ಗಳ ಮೂಲಕ UPI ಅನ್ನು ಮುಂದುವರಿಸಲು Paytm ಅನುಮೋದನೆ ಪಡೆದಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ಗುರುವಾರ One97 ಕಮ್ಯುನಿಕೇಷನ್ಸ್(OCL) ಬ್ರ್ಯಾಂಡ್ Paytm ಅನ್ನು ನಿರ್ವಹಿಸುತ್ತದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ನಲ್ಲಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಪೂರೈಕೆದಾರರಾಗಿ (TPAP) ಕಾರ್ಯನಿರ್ವಹಿಸಲು ಅನುಮತಿ ನೀಡಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *