ಬಿಸ್ಲೆರಿ ಕಂಪನಿಯನ್ನೇ ಖರೀದಿಸಿದ ಟಾಟಾ ಗ್ರೂಪ್ – ದಿನಬಳಕೆಯ ವಸ್ತುಗಳ ಮಾರಾಟ ವಲಯದಲ್ಲಿ ಟಾಟಾ ದಿಟ್ಟ ಹೆಜ್ಜೆ

ಬಿಸ್ಲೆರಿ ಕಂಪನಿಯನ್ನೇ ಖರೀದಿಸಿದ ಟಾಟಾ ಗ್ರೂಪ್ – ದಿನಬಳಕೆಯ ವಸ್ತುಗಳ ಮಾರಾಟ ವಲಯದಲ್ಲಿ ಟಾಟಾ ದಿಟ್ಟ ಹೆಜ್ಜೆ

ನ್ಯೂಸ್ ಆ್ಯರೋ : ದೇಶದ ಹೆಮ್ಮೆಯ ಟಾಟಾ ಗ್ರೂಪ್ ಆಫ್ ಕಂಪನಿಯು ಬಿಸ್ಲೇರಿ ಇಂಟರ್‌ನ್ಯಾಶನಲ್‌ ಕಂಪನಿಯನ್ನು ಖರೀದಿಸಿದ್ದು, ಒಟ್ಟು 7,000 ಕೋಟಿ ರೂ.ಗೆ ಈ ಡೀಲ್‌ ನಡೆದಿದೆ ಎನ್ನಲಾಗಿದೆ.

ಒಪ್ಪಂದದ ಭಾಗವಾಗಿ ಈಗಿನ ಆಡಳಿತ ಮಂಡಳಿಯು ಮುಂದಿನ ಎರಡು ವರ್ಷಗಳ ಕಾಲ ಮುಂದುವರಿಯಲಿದೆ. ಟಾಟಾ ಸಮೂಹವು ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌ (TCPL) ಕಂಪನಿಯ ಅಡಿಯಲ್ಲಿ ತನ್ನ ಪ್ಯಾಕೇಜ್ಡ್‌ ಮಿನರಲ್‌ ವಾಟರ್‌ ಮಾರಾಟವನ್ನು ನಡೆಸುತ್ತಿದೆ.

ಹಿಮಾಲಯನ್‌ ಮತ್ತು ಟಾಟಾ ಕಾಪ್ಪರ್‌ ಪ್ಲಸ್‌ ವಾಟರ್‌, ಟಾಟಾ ಗ್ಲೊಕೊ+ ಎಂಬ ಬ್ರಾಂಡ್‌ಗಳಲ್ಲಿ ಪ್ಯಾಕೇಜ್ಡ್‌ ಕುಡಿಯುವ ನೀರಿನ ಬಾಟಲಿಗಳ ಮಾರಾಟ ನಡೆಸುತ್ತಿದೆ. ಟಾಟಾ ಸಮೂಹವು ಬಿಸ್ಲೇರಿಯನ್ನು ಖರೀದಿಸುವುದರೊಂದಿಗೆ, ಅದಕ್ಕೆ ದಿನ ಬಳಕೆಯ ವಸ್ತುಗಳ ಮಾರಾಟ ವಲಯದಲ್ಲಿ ದೊಡ್ಡ ಮುನ್ನಡೆ ಲಭಿಸಿದೆ.

ಭಾರತದಲ್ಲಿ ಬಾಟಲಿಗಳಲ್ಲಿನ ಕುಡಿಯುವ ನೀರಿನ ಮಾರಾಟ ವಹಿವಾಟು ವಾರ್ಷಿಕ 19,315 ಕೋಟಿ ರೂ.ಗಳಾಗಿವೆ. ಸದ್ಯಕ್ಕೆ ಮಾರುಕಟ್ಟೆ ಪ್ರಾಬಲ್ಯವನ್ನು ಬಿಸ್ಲೇರಿ ಹೊಂದಿದೆ.
ಬಿಸ್ಲೇರಿ ಇಂಟರ್‌ನ್ಯಾಶನಲ್‌ ಭಾರತದ ಅತಿ ದೊಡ್ಡ ಬಾಟಲಿ ಕುಡಿಯುವ ನೀರಿನ ಉತ್ಪಾದಕ ಕಂಪನಿಯಾಗಿದ್ದು, 150 ಉತ್ಪಾದನಾ ಘಟಕಗಳನ್ನು ಹಾಗೂ 4,000 ವಿತರಕರು, 4,000 ಟ್ರಕ್‌ಗಳ ನೆಟ್‌ ವರ್ಕ್‌ ಅನ್ನು ಹೊಂದಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *