ದಿಲ್ಲಿಯಲ್ಲಿ ಎಳನೀರಿನ ಬೆಲೆಯಲ್ಲಿ ದಿಢೀರ್ ಏರಿಕೆ – ಒಂದು ಎಳನೀರು ಇಷ್ಟೊಂದು ದುಬಾರಿಯಾ?

ದಿಲ್ಲಿಯಲ್ಲಿ ಎಳನೀರಿನ ಬೆಲೆಯಲ್ಲಿ ದಿಢೀರ್ ಏರಿಕೆ – ಒಂದು ಎಳನೀರು ಇಷ್ಟೊಂದು ದುಬಾರಿಯಾ?

ನ್ಯೂಸ್ ಆ್ಯರೋ‌ : ಎಳನೀರು ಸೇವನೆ ಆರೋಗ್ಯಕ್ಕೆ ಉತ್ತಮ. ಅದರಲ್ಲೂ ಬೇಸಗೆಯಲ್ಲಿ ದಾಹ ನೀಗಿಸುವ ಜೊತೆಗೆ ದೇಹದ ಉಷ್ಣತೆಯನ್ನೂ ಕಡಿಮೆ ಮಾಡಲು ಇದು ನೆರವಾಗಿತ್ತದೆ. ಇದೀಗ ಎಳನೀರಿನ ಬೆಲೆ ಗಗನಮುಖಿಯಾಗುತ್ತಿದ್ದು, 50 ರೂ. ದಾಟಿದೆ. ದಿಲ್ಲಿಯಲ್ಲಿ ಕರ್ನಾಟಕದ ಎಳನೀರಿಗೆ ಬೇಡಿಕೆ ಹೆಚ್ಚಾಗಿರುವುದು ಮತ್ತು ಐಸ್ ಕ್ರೀಂ ತಯಾರಿಕೆಗೆ ಬಳಸುತ್ತಿರುವುದು ಇದಕ್ಕೆ ಮುಖ್ಯ ಕಾರಣ.

ದೇಶದಲ್ಲಿ 1.9 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಇದರಲ್ಲಿ ಕರ್ನಾಟಕದ ಪಾಲು 4.19 ಲಕ್ಷ ಹೆಕ್ಟೇರ್‌. ರಾಜ್ಯದಲ್ಲಿ ಅಂದಾಜು ಒಟ್ಟು 2,176 ಮಿಲಿಯನ್ ತೆಂಗಿನಕಾಯಿ ಬೆಳೆಯುತ್ತಿದ್ದು, ದೇಶದ ಒಟ್ಟು ಉತ್ಪಾದನೆಯ ಶೇ.13.83ರಷ್ಟಿದೆ. ರಾಜ್ಯದ 10 ಜಿಲ್ಲೆಗಳಲ್ಲಿ ತೆಂಗಿನಕಾಯಿ ಬೆಳೆಯಲಾಗುತ್ತಿದ್ದು, ತುಮಕೂರು ಅಗ್ರಸ್ಥಾನದಲ್ಲಿದೆ. ಮೈಸೂರು, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಉಳಿದ ಸ್ಥಾನಗಳಲ್ಲಿದೆ. ಹೀಗಿದ್ದರೂ ರಾಜ್ಯದಲ್ಲಿ ಎಳನೀರು ಕೊರತೆ ಕಾಣುತ್ತಿದ್ದು, ಬೇಡಿಕೆಯಷ್ಟು ಸಿಗುತ್ತಿಲ್ಲ.

ದಿಲ್ಲಿಯಲ್ಲಿ ಬೇಡಿಕೆ

ದಿಲ್ಲಿ ಸೇರಿದಂತೆ ನಾನಾ ಕಡೆಗಳಿಗೆ ಮೈಸೂರು, ತಮಿಳುನಾಡು, ಕೇರಳದಿಂದ ಎಳನೀರನ್ನು ಸರಬರಾಜು ಮಾಡಲಾಗುತ್ತಿದೆ. ದೇಶದಲ್ಲೇ ಅತೀ ಹೆಚ್ಚು ತಾಪಮಾನವಿರುವ ದಿಲ್ಲಿಯಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಿರುವ ಕಾರಣ ದರವೂ 100 ರೂ. ದಾಟಿದೆ. ಇದರಿಂದ ಮಧ್ಯವರ್ತಿಗಳು ದಿಲ್ಲಿ, ಪುಣೆ ಕಡೆಗೆ ಎಳನೀರು ಮಾರಾಟಕ್ಕೆ ಒಲವು ತೋರುತ್ತಿದ್ದಾರೆ. ಇದರಿಂದಲೂ ಇಲ್ಲಿಗೆ ಸಾಕಷ್ಟು ಪ್ರಮಾಣದಲ್ಲಿ ಎಳನೀರು ಸರಬರಾಜಾಗದೆ ಬೆಲೆ ಏರಿಕೆಯಾಗಿದೆ.

ಎಷ್ಟು ಹೆಚ್ಚಳ?

ಈವರೆಗೆ 35 ರೂ. ಇದ್ದ ಎಳನೀರು ದರ ವಾರದ ಆಸುಪಾಸಿನಲ್ಲಿ 45-50 ರೂ.ಗೆ ಜಿಗಿತವಾಗಿದೆ. ಕೆಂದಾಳೆ ದರ ಮತ್ತು ಕರಾವಳಿ ಎಳನೀರು ದರ 40ರಿಂದ 55 ರೂ.ಗೆ ಏರಿಕೆಯಾಗಿದೆ.

ತೆಂಗಿನಕಾಯಿ ದರ ಇಳಿಕೆ

ಅಚ್ಚರಿ ಎಂದರೆ ಎಳನೀರು ದರ ಒಂದೇ ಸಮನೆ ಏರಿಕೆಯಾಗುತ್ತಿದ್ದರೆ ತೆಂಗಿನಕಾಯಿ ದರ ಮಾತ್ರ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದೆ. 2 ವರ್ಷದ ಹಿಂದೆ 40-45ರ ಆಸುಪಾಸಿನಲ್ಲಿದ್ದ ತೆಂಗಿನಕಾಯಿ ದರ ಪ್ರಸ್ತುತ ಕೆಜಿಗೆ 25-26 ರೂ.ಗೆ ಇಳಿಕೆಯಾಗಿದೆ. ಇದರಿಂದ ತೆಂಗು ಬೆಳೆಗಾರರು ಕಂಗಾಲಾಗಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *