Paytm ಗೆ ಆತಂಕ‌ ಸೃಷ್ಟಿಸಿದ ರಿಲಯನ್ಸ್ ಮಾಲೀಕ ಮುಕೇಶ್ ಅಂಬಾನಿ – ಜಿಯೋ ಸ್ಥಾಪಕನ ಹೊಸ ನಿರ್ಧಾರದ ಹಿಂದಿದೆ‌ ಬಿಗ್ ಪ್ಲ್ಯಾನ್…!!

ನ್ಯೂಸ್ ಆ್ಯರೋ : ಭಾರತದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ಇದೀಗ ‘ಜಿಯೋ ಫೈನಾನ್ಷಿಯಲ್ ಸರ್ವಿಸಸ್‌’ (ಜೆಎಫ್‌ಎಸ್‌) ಹೆಸರಿನಲ್ಲಿ ಹಣಕಾಸು ಸೇವಾ ವ್ಯವಹಾರಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಹಣಕಾಸು ಸೇವಾ ವ್ಯವಹಾರಕ್ಕೆ ಅಂಬಾನಿ ಒಡೆತನದ ಜೆಎಫ್‌ಎಸ್‌ ಪ್ರವೇಶದಿಂದ ಪೇಟಿಎಂಗೆ ಆತಂಕ ಎದುರಾಗಿದೆ ಎಂದು ಬ್ರೋಕರೇಜ್‌ ಸಂಸ್ಥೆ ಮಾಕ್ವಾರಿ ಹೇಳಿದ ಬಳಿಕ ಪೇಟಿಎಂನ ಮೂಲ ಸಂಸ್ಥೆ ಒನ್‌97 ಕಮ್ಯೂನಿಕೇಷನ್ಸ್‌ನ ಷೇರುಗಳು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿವೆ.

ಡಿಜಿಟಲ್ ಪಾವತಿ ದೈತ್ಯ ಪೇಟಿಎಂನ ಷೇರುಗಳು ಬಿಎಸ್‌ಇನಲ್ಲಿ ಬರೋಬ್ಬರಿ ಶೇ 11ರಷ್ಟು ಕುಸಿತ ಕಂಡಿವೆ. ಈ ಮೂಲಕ ಕಳೆದ ವರ್ಷದ ನವೆಂಬರ್‌ನಲ್ಲಿ ಷೇರು ಮಾರುಕಟ್ಟೆಗೆ ಪ್ರವೇಶ ಪಡೆದಿದ್ದ ಪೇಟಿಎಂ ಷೇರುಗಳು, ಮಂಗಳವಾರ ಸಾರ್ವಕಾಲಿಕ ಕುಸಿತ ಕಂಡಿವೆ.

ಪೇಟಿಎಂ ಮತ್ತು ಬಜಾಜ್ ಫೈನಾನ್ಸ್‌ನಂತಹ ಕಂಪನಿಗಳ ಬೆಳವಣಿಗೆ ಮತ್ತು ಮಾರುಕಟ್ಟೆ ಪಾಲಿಗೆ ‘ಜಿಯೋ ಫೈನಾನ್ಷಿಯಲ್ ಸರ್ವಿಸಸ್‌’ ಅಪಾಯ ಉಂಟು ಮಾಡಬಹುದು ಎಂದು ಸುರೇಶ್‌ ಗಣಪತಿ ನೇತೃತ್ವದ ಮಾಕ್ವಾರಿ ಗ್ರೂಪ್‌ನ ವಿಶ್ಲೇಷಕರ ತಂಡ ಭವಿಷ್ಯ ಹೇಳಿದೆ.

ಈಗಾಗಲೇ ಪೇಟಿಎಂನ ನಷ್ಟಗಳು ಹೆಚ್ಚಿದ ಕಾರಣ ಮತ್ತು ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪ್ ಕಂಪನಿಯಲ್ಲಿ ತನ್ನ ಪಾಲನ್ನು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಪೇಟಿಎಂ ಷೇರುಗಳು ಶೇ 75ರಷ್ಟು ಮೌಲ್ಯ ಕಳೆದುಕೊಂಡಿದ್ದು, ಕಳೆದ 7 ದಿನಗಳಲ್ಲಿ ಮತ್ತೆ ಶೇ 23ರಷ್ಟು ಕುಸಿತ ಗೊಂಡಿರುವುದು ಷೇರುದಾರರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.

ಇತ್ತೀಚೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ತನ್ನ ಹಣಕಾಸು ಸೇವಾ ವ್ಯವಹಾರಗಳನ್ನು ವಿಭಜಿಸಲು ಮತ್ತು ಅವನ್ನು ಜಿಯೋ ಫೈನಾನ್ಶಿಯಲ್‌ ಸರ್ವೀಸಸ್‌ (ಜೆಎಫ್‌ಎಸ್‌) ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದೆ.

ರಿಲಯನ್ಸ್‌ ಈಗಾಗಲೇ ಬ್ಯಾಂಕೇತರ ಹಣಕಾಸು ಸಂಸ್ಥೆಯ ಪರವಾನಗಿಯನ್ನು ಹೊಂದಿದ್ದು, ಇದು ದೊಡ್ಡ ರೀತಿಯಲ್ಲಿ ಗ್ರಾಹಕ ಮತ್ತು ವ್ಯಾಪಾರಿ ಸಾಲ ವ್ಯವಹಾರವನ್ನು ಆರಂಭಿಸಬಹುದು ಎಂದು ಮಾಕ್ವಾರಿ ಹೇಳಿದೆ. ವಿಶ್ಲೇಷಕರು ಅಂಡರ್‌ ಪರ್ಫಾರ್ಮಿಂಗ್‌ ರೇಟಿಂಗ್‌ನೊಂದಿಗೆ ಪೇಟಿಎಂಗೆ ₹ 450 ಟಾರ್ಗೆಟ್‌ ಗುರಿಯನ್ನು ನಿಗದಿಪಡಿಸಿದ್ದಾರೆ.

ತನ್ನ ಅಸ್ತಿತ್ವವನ್ನು ಹೆಚ್ಚಿಸಲು ಹಣಕಾಸು ಸೇವಾ ಘಟಕವನ್ನು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವುದಾಗಿ ರಿಲಯನ್ಸ್‌ ಹೇಳಿದೆ. ಇದರಿಂದ ಪೇಟಿಎಂಗೆ ಹೊಸ ತಲೆನೋವು ಎದುರಾಗಿದೆ.

ಹೂಡಿಕೆ ವಾಪಸ್‌:

ಪೇಟಿಎಂ ಷೇರುಗಳ ಐಪಿಒ ಪೂರ್ವ ಹೂಡಿಕೆದಾರರ ಲಾಕ್‌ಇನ್‌ ಅವಧಿ ನವೆಂಬರ್ ಆರಂಭದಲ್ಲಿ ಅಂತ್ಯಗೊಂಡಿದೆ. ಇದಾದ ಬೆನ್ನಲ್ಲೇ ದೊಡ್ಡ ದೊಡ್ಡ ಹೂಡಿಕೆದಾರರು ಷೇರುಗಳನ್ನು ಹಿಂತೆಗೆದುಕೊಳ್ಳಲಾರಂಭಿಸಿದ್ದಾರೆ. ಎನ್‌ಎಸ್‌ಇನಲ್ಲಿ ಲಭ್ಯವಿರುವ ಮಾಹಿತಿಗಳ ಪ್ರಕಾರ ಎಸ್‌ವಿಎಫ್ ಇಂಡಿಯಾ ಹೋಲ್ಡಿಂಗ್ಸ್ (ಕೇಮನ್) ಲಿ. ಸುಮಾರು 2,93,50,000 ಷೇರುಗಳನ್ನು ಮಾರಾಟ ಮಾಡಿದೆ. ಇದು ಸಂಸ್ಥೆಯ ಷೇರುಗಳ ಶೇ 4.5ರಷ್ಟಾಗುತ್ತದೆ.

ಎಸ್‌ವಿಎಫ್‌ ಇಂಡಿಯಾ ಸಾಫ್ಟ್‌ಬ್ಯಾಂಕ್‌ನ ಅಂಗಸಂಸ್ಥೆಯಾಗಿದೆ. ಪ್ರತಿ ಷೇರುಗಳನ್ನು ಸರಾಸರಿ ₹ 555.67 ದರದಲ್ಲಿ ನೀಡಲಾಗಿತ್ತು. ₹1,630.89 ಕೋಟಿಗೆ ಈ ಷೇರುಗಳನ್ನು ಖರೀದಿಸಲಾಗಿತ್ತು. ಕಂಪನಿಯಲ್ಲಿ ಸಾಫ್ಟ್‌ಬ್ಯಾಂಕ್‌ ಎರಡನೇ ಅತಿ ದೊಡ್ಡ ಷೇರುದಾರ ಕಂಪನಿಯಾಗಿದ್ದು ಶೇ. 17.45ರಷ್ಟು ಪಾಲನ್ನು ಹೊಂದಿತ್ತು. ಇದೀಗ ಷೇರು ಮಾರಾಟದಿಂದ ಸಾಫ್ಟ್‌ಬ್ಯಾಂಕ್‌ನ ಪಾಲು ಶೇ. 12.95ಕ್ಕೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *