ಭಾರತದಲ್ಲಿ ಟೆಸ್ಲಾ ಕಂಪೆನಿ ಆರಂಭಕ್ಕೆ ಸಜ್ಜು – ಪುಣೆಯಲ್ಲಿ ಕಚೇರಿಗೆ ಸ್ಥಳ ನಿಗದಿ

ಭಾರತದಲ್ಲಿ ಟೆಸ್ಲಾ ಕಂಪೆನಿ ಆರಂಭಕ್ಕೆ ಸಜ್ಜು – ಪುಣೆಯಲ್ಲಿ ಕಚೇರಿಗೆ ಸ್ಥಳ ನಿಗದಿ

ನ್ಯೂಸ್ ಆ್ಯರೋ‌ : ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪೆನಿ ಟೆಸ್ಲಾ ಭಾರತದಲ್ಲಿ ಘಟಕ ಸ್ಥಾಪಿಸಲಿದೆ. ಪುಣೆಯ ಪಂಚಶೀಲ್ ಬ್ಯುಸಿನೆಸ್ ಪಾರ್ಕ್ ನಲ್ಲಿರುವ ಬಿ ವಿಂಗ್ ನ ಮೊದಲ ಮಹಡಿಯಲ್ಲಿ 5,850 ಚದರ ಅಡಿ ಕಚೇರಿ ಸ್ಥಳಕ್ಕಾಗಿ ಕಂಪೆನಿ 5 ವರ್ಷಗಳ ಗುತ್ತಿಗೆಗೆ ಸಹಿ ಮಾಡಿದೆ ಎಂದು ವರದಿ ತಿಳಿಸಿದೆ.

ಮೋದಿ ಭೇಟಿಯಾಗಿದ್ದರು

ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಮಸ್ಕ್ ಅವರನ್ನು ಭೇಟಿಯಾಗಿದ್ದರು. ಗಮನಾರ್ಹ ಸಂಗತಿ ಎಂದರೆ ಎಲೆಕ್ಟ್ರಿಕ್ ವಾಹನ (ಇವಿ) ಉತ್ಪಾದನಾ ಘಟಕವನ್ನು ಸ್ಥಾಪಿಸಲು ದೇಶದಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಚೀನಾದ ಬಿ.ವೈ.ಡಿ. ಕಂಪೆನಿಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿತ್ತು.

ಈ ಹಿಂದೆ ಚೀನಾದ ಗ್ರೇಟ್ ವಾಲ್ ಮೋಟಾರ್ಸ್ ಕಂಪೆನಿಯು ಭಾರತದಲ್ಲಿ ಇವಿ ಉತ್ಪಾದನೆಗೆ 1 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದೆ ಬಂದಿದ್ದರೂ ಅನುಮತಿ ನೀಡಿರಲಿಲ್ಲ.

ಇದೀಗ ಟೆಸ್ಲಾ ತನ್ನ ಜಾಗತಿಕ ಪ್ರತಿಸ್ಪರ್ಧಿಗಳಾದ ಗ್ರೇಟ್ ವಾಲ್ ಮೋಟಾರ್ಸ್ ಮತ್ತು ಬಿ.ವೈ.ಡಿ. ಕಂಪೆನಿಗಳಿಗೆ ಸೆಡ್ಡು ಹೊಡೆದು ಭಾರತದಲ್ಲಿ ಕಾರ್ಯಾಚರಣೆಗೆ ಸಜ್ಜಾಗಿದೆ.

ಸದ್ಯ ಟೆಸ್ಲಾ ಕಂಪೆನಿಗೆ ಮಾಸಿಕ ಬಾಡಿಗೆ 11.65 ಲಕ್ಷ ರೂ. ನಿಗದಿ ಪಡಿಸಲಾಗಿದ್ದು, 5 ವರ್ಷಗಳ ಗುತ್ತಿಗೆ ಅವಧಿಗೆ ಭದ್ರತಾ ಠೇವಣಿ 34.95 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *