ಇನ್ನೋವಾ, ಫಾರ್ಚೂನರ್ ಸೆಡ್ಡು, ರಸ್ತೆಗೆ ಇಳಿಯಲಿದೆ ಹೊಸ ಮಹೀಂದ್ರ ಬೊಲೆರೋ – ಹೊಸ ಲುಕ್ ನಲ್ಲಿ ಈ ಗಾಡಿ ಹೇಗಿದೆ ಗೊತ್ತಾ?

ಇನ್ನೋವಾ, ಫಾರ್ಚೂನರ್ ಸೆಡ್ಡು, ರಸ್ತೆಗೆ ಇಳಿಯಲಿದೆ ಹೊಸ ಮಹೀಂದ್ರ ಬೊಲೆರೋ – ಹೊಸ ಲುಕ್ ನಲ್ಲಿ ಈ ಗಾಡಿ ಹೇಗಿದೆ ಗೊತ್ತಾ?

ನ್ಯೂಸ್ ಆ್ಯರೋ‌ : ಮಹೀಂದ್ರ ಬೊಲೆರೋ – ವಾಹನ ಪ್ರಿಯರಿಗೆ ಅಚ್ಚುಮೆಚ್ಚು. ಹೀಗಾಗಿ ಇದು ಹೆಚ್ಚು ಮಾರಾಟವಾಗುವ ಕಾರುಗಳ ಪೈಕಿ ಒಂದು ಎನಿಸಿಕೊಂಡಿದೆ. ಇದೀಗ ಮಹೀಂದ್ರ ಕಂಪೆನಿ ಈ ಮಾದರಿಗೆ ಹೊಸ ರೂಪ ಕೊಡಲು ನಿರ್ಧರಿಸಿದೆ. ಶೀಘ್ರದಲ್ಲಿ ಹೊಸ ಮಹೀಂದ್ರ ಬೋಲೆರೋ ರಸ್ತೆಗಿಳಿಯುವ ನಿರೀಕ್ಷೆ ಇದೆ.

ಇನ್ನೋವಾ, ಫಾರ್ಚೂನರ್ ಗೆ ಸ್ಪರ್ಧೆ

ಹೊಸ ಬೊಲೆರೋ ಇನ್ನೋವಾ, ಫಾರ್ಚೂನರ್ ಕಾರ್ ಗಳಿಗೆ ಪ್ರಬಲ ಪ್ರತಿಸ್ಫರ್ಧಿಯಾಗಲಿದೆ. ಅದರಲ್ಲೂ ಕಡಿಮೆ ಬೆಲೆಯಲ್ಲಿ ದೊರೆಯಲಿದ್ದು, ಸಾಕಷ್ಟು ಬೇಡಿಕೆ ಸೃಷ್ಟಿಯಾಗುವ ನಿರೀಕ್ಷೆ ಇದೆ. ಇದರ ಬೆಲೆ ಕೂಡ 10 ಲಕ್ಷ ರೂ. ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.

ಇದರಲ್ಲಿ ಏಳು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇರಲಿದೆ. ಕೀಲೆಸ್ ಆಗಿ ಆನ್ ಹಾಗೂ ಆಫ್ ಮಾಡುವ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡಲಾಗಿದ್ದು, ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಅಳವಡಿಸಲಾಗಿದೆ. EBD, ABS, Rear Parking ಸೆನ್ಸಾರ್ ಗಳು ಹೊಸ ಬೋಲೆರೋದಲ್ಲಿ ಇರಲಿದೆ ಎಂದು ವರದಿ ತಿಳಿಸಿದೆ.

ಎಂಜಿನ್ ಬಗ್ಗೆ ಮಾಹಿತಿ

1.5 ಡೀಸೆಲ್ ಎಂಜಿನ್ ಹೊಂದಿರಲಿದೆ. 100Ps ಪವರ್ 260Nm ಟಾರ್ಕ್ ಅನ್ನು ಇದು ಜನರೇಟ್ ಮಾಡುತ್ತದೆ ಹಾಗೂ ಇದರಲ್ಲಿ ಐದು ಟಾಪ್ ಸ್ಪೀಡ್ ಗೇರ್ ಗಳು ಕೂಡ ಇವೆ. ಬಿಡುಗಡೆ ದಿನಾಂಕವನ್ನು ಕಂಪೆನಿ ಇನ್ನಷ್ಟೇ ಘೋಷಿಸಬೇಕಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *