ಕಾರು ಉದ್ಯಮದ ಕಿಂಗ್ ಆನಂದ್ ಮಹೀಂದ್ರಾ ಬಳಿ ಎಷ್ಟು ಕಾರ್ ಗಳಿವೆ ಗೊತ್ತಾ…!? – ಅವರ ಬಳಿ ಇರೋ ಕಾರ್ ಗಳು ಯಾವುವು ನೋಡಿ…

ಕಾರು ಉದ್ಯಮದ ಕಿಂಗ್ ಆನಂದ್ ಮಹೀಂದ್ರಾ ಬಳಿ ಎಷ್ಟು ಕಾರ್ ಗಳಿವೆ ಗೊತ್ತಾ…!? – ಅವರ ಬಳಿ ಇರೋ ಕಾರ್ ಗಳು ಯಾವುವು ನೋಡಿ…

ನ್ಯೂಸ್ ಆ್ಯರೋ‌ : ಆನಂದ್‌ ಮಹೀಂದ್ರಾ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತರು ಅಷ್ಟು ಮಾತ್ರವಲ್ಲ, ವಾಹನೋದ್ಯಮ ಮತ್ತು ಕೈಗಾರಿಕೋದ್ಯಮ ಜಗತ್ತಿನಲ್ಲಿ ಆನಂದ್‌ ಮಹೀಂದ್ರಾ ಓರ್ವ ಜನಪ್ರಿಯ ವ್ಯಕ್ತಿ. ಮಹೀಂದ್ರಾ ದ ಮುಖ್ಯಸ್ಥರಾದ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸಕ್ರಿಯರಾಗಿರುತ್ತಾರೆ. ಅದರಲ್ಲೂ ಟ್ವಿಟರ್‌ನಲ್ಲಿ ವೈರಲ್‌ ವಿಡಿಯೋಗಳಿಗೆ, ಕೆಲವೊಂದು ಘಟನೆಗಳಿಗೆ ಬಹು ಬೇಗನೆ ಪ್ರತಿಕ್ರಿಯಿಸುತ್ತಾರೆ.

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಆನಂದ್‌ ಮಹೀಂದ್ರಾ ಅವರ ಕೋಟ್ಯಾಂತರ ರೂ. ಮೊತ್ತದ ಆಸ್ತಿಯ ಒಡೆಯನಾದರೂ, ಲಕ್ಷಗಟ್ಟಲೆ ಕೋಟಿಗಟ್ಟಲೆ ಕಾರುಗಳನ್ನು ಉತ್ಪಾದಿಸುವ ಮಾಲೀಕನಾದರೂ ಆನಂದ ಅವರ ಬಳಿ ಇರುವ ಕಾರುಗಳನ್ನು ನೀವು ಬೆರಗಾಗುವುದು ಗ್ಯಾರೆಂಟಿ.

ಹಾಗಾದರೆ ಕಾರುಗಳ ಬಗ್ಗೆ ಅಪಾರ ಕ್ರೇಜ್​ ಇರುವ ಆನಂದ್‌ ಮಹೀಂದ್ರಾ ಅವರ ಕಾರು ಕಲೆಕ್ಷನ್​ ಹೇಗಿದೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

​ಮಹೀಂದ್ರಾ ಬೊಲೆರೋ ಇನ್ವೇಡರ್‌

ಆನಂದ್‌ ಮಹೀಂದ್ರಾ ರ ಬಳಿ ಇರುವ ಈ ಎಸ್‌ಯುವಿಯು ಮಹೀಂದ್ರಾದ ಅತ್ಯಂತ ಜನಪ್ರಿಯ ಬೊಲೆರೋ ಎಸ್‌ಯುವಿಯಾಗಿದೆ. ಇದು ಅತ್ಯಂತ ಕಡಿಮೆ ಎತ್ತರವನ್ನು ಹೊಂದಿದ ವೀಲ್‌ಬೇಸ್‌ ನ್ನು ಹಾಗೂ ಕೇವಲ ಮೂರೇ ಬಾಗಿಲುಗಳನ್ನು ಹೊಂದಿರುವ ಎಸ್‌ಯುವಿಯಾಗಿದ್ದು, ಇದು ಎಂಯುವಿ ಯ ಸ್ಪೋರ್ಟೀ ರೂಪಾಂತರವನ್ನು ಪಡೆದುಕೊಂಡಿದೆ. ಆನಂದ್‌ ಮಹೀಂದ್ರಾ ಈ ಕಾರನ್ನು ತಮ್ಮ ಚಿಕ್ಕ ವಯಸ್ಸಿನಿಂದಲೇ ಹೊಂದಿದ್ದರು.

ಸಾಮಾನ್ಯವಾಗಿ ಬೊಲೆರೋ ಇನ್ವೇಡರ್‌ ಎಸ್‌ಯುವಿ ವಾಹನ ಪ್ರಿಯರನ್ನು ಬಹುಬೇಗ ಆಕರ್ಷಿಸುತ್ತದೆ. ಮಹೇಂದ್ರಾ ಬೊಲೆರೋ ಎಸ್‌ಯುವಿಯು 2.5 ಲೀಟರ್‌ ಡೀಸೆಲ್‌ ಎಂಜಿನ್‌ ನ್ನು ಒಳಗೊಂಡಿದ್ದು, ಈ ಎಂಜಿನ್‌ಗಳು 63 ಬಿಹೆಚ್‌ಪಿ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

​ಮಹೀಂದ್ರಾ ಟಿಯುವಿ300

ವಾಹನೋದ್ಯಮದ ಹೆಸರಾಂತ ವ್ಯಕ್ತಿ ಆನಂದ್‌ ಮಹೀಂದ್ರಾರವರು ತಮ್ಮ ವೈಯಕ್ತಿಕ ಬಳಕೆಗಾಗಿ 2015 ರಲ್ಲಿ ಕಸ್ಟಮೈಸ್‌ ಮಾಡಿದ ಟಿಯುವಿ300 ಎಸ್‌ಯುವಿಯನ್ನು ಖರೀದಿಸಿದರು. ಬಾಕ್ಸ್‌ ಆಕಾರದ ವಿನ್ಯಾಸವನ್ನು ಹೊಂದಿರುವ ಮಹೀಂದ್ರಾ ಟಿಯುವಿ300 ಎಸ್‌ಯುವಿಯು ಶಸ್ತ್ರಸಜ್ಜಿತ ಪರಿಕರಗಳನ್ನೇ ಒಳಗೊಂಡಿದೆ. ಆನಂದ್‌ ರ ಕಸ್ಟಮೈಸ್‌ ಟಿಯುವಿ300 ಎಸ್‌ಯುವಿಯು ದೊಡ್ಡ ಚಕ್ರದ ಕಮಾನುಗಳನ್ನು, ಆಕರ್ಷಕ ಬಾನೆಟ್‌, ಇಳಿಜಾರಿನ ಮೇಲ್ಚಾವಣಿ, ಸುತ್ತಲೂ ಪ್ಲಾಸ್ಟಿಕ್‌ ಕ್ಲಾಡಿಂಗ್‌ ಹಾಗು ಹಸಿರು ಬಣ್ಣದ ವಿನ್ಯಾಸವನ್ನು ಪಡೆದುಕೊಂಡಿದೆ.

​ಮಹೀಂದ್ರಾ ಟಿಯುವಿ300 ಪ್ಲಸ್‌

ಆನಂದ್‌ ಮಹೀಂದ್ರಾ ತನ್ನ ಮಹೀಂದ್ರಾ ವಾಹನ ಬ್ರ್ಯಾಂಡ್‌ ನ ಹೊಸ ಟಿಯುವಿ300 ಪ್ಲಸ್‌ ಎಸ್‌ಯುವಿಯನ್ನು ಖರೀದಿಸಿರುವ ಖುಷಿಯನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆನಂದ್‌ ಮಹೀಂದ್ರಾ ಪ್ರೀತಿಯಿಂದ ಈ ಎಸ್‌ಯುವಿಯನ್ನು “ಗ್ರೇ ಗೋಸ್ಟ್‌” ಎಂದು ಕರೆಯುತ್ತಾರೆ. ಟ್ವಿಟರ್‌ ನಲ್ಲಿ ಆನಂದ್‌ ಮಹೀಂದ್ರಾ ಹೇಳಿರುವ ಹಾಗೆ ಅವರು ಈ ಎಸ್‌ಯುವಿಗಾಗಿ ಬಹಳಷ್ಟು ದಿನಗಳಿಂದ ಕಾಯುತ್ತಿದ್ದರಂತೆ. ಯಾಕೆಂದರೆ ಈ ಎಸ್‌ಯುವಿಯ ಬಣ್ಣ ಅಷ್ಟೊಂದು ಆಕರ್ಷಣೀಯವಾಗಿತ್ತಂತೆ. ಆನಂದ್‌ ಮಹೀಂದ್ರಾರ ಈ ಎಸ್‌ಯುವಿಯು ವಿಶೇಷ ಸ್ಟೀಲ್‌ ಬೂದು ಬಣ್ಣವನ್ನು ಪಡೆದಿರುವ ಎಸ್‌ಯುವಿಯಾಗಿದೆ.

​ಮಹೀಂದ್ರಾ ಸ್ಕಾರ್ಪಿಯೋ

ಆನಂದ್‌ ಮಹೀಂದ್ರಾ ತುಂಬಾ ವರ್ಷಗಳಿಂದ ಉಪಯೋಗಿಸುತ್ತಿರುವ ಎಸ್‌ಯುವಿ ಇದಾಗಿದೆ. ಇದು ಹಳೆಯ ಮಾಡೆಲ್‌ ಸ್ಕಾರ್ಪಿಯೋ ಕಾರಾಗಿದೆ. ಮಹೀಂದ್ರಾ ಸ್ಕಾರ್ಪಿಯೋ ಕಾರು ಒರಟಾದ ರಸ್ತೆಗಳಲ್ಲೂ ಕೂಡ ಆರಾಮದಾಯಕ ಪ್ರಯಾಣದ ಸವಿಯನ್ನು ಒದಗಿಸುತ್ತದೆ. ಮೌಲ್ಯಕ್ಕೆ ತಕ್ಕಂತೆ ರೈಡರ್‌ಗಳಿಗೆ ಸೇವೆಯನ್ನು ಒದಗಿಸಬಲ್ಲ ಸಾಮರ್ಥ್ಯವನ್ನು ಈ ಎಸ್‌ಯುವಿಯು ಹೊಂದಿದೆ.

​ಮಹೀಂದ್ರಾ ಆಲ್ಟುರಾಸ್‌ ಜಿ4

ಮಹೀಂದ್ರಾ ಮತ್ತು ಮಹೀಂದ್ರಾ ದ ಅತ್ಯಂತ ದುಬಾರಿ ಕಾರೇ ಮಹೀಂದ್ರಾ ಆಲ್ಟುರಾಸ್‌ ಜಿ4 ಎಸ್‌ಯುವಿ. ಮಹೀಂದ್ರಾವು ತನ್ನ ಆಲ್ಟುರಾಸ್‌ ಜಿ4 ಎಸ್‌ಯವಿಯ ವಿತರಣೆಯನ್ನು ಆರಂಬಿಸಿದ ಬೆನ್ನಲ್ಲೇ ಆನಂದ್‌ ಮಹೀಂದ್ರಾ ತನ್ನ ಆಲ್ಟುರಾಸ್‌ ಎಸ್‌ಯುವಿಗೆ ಹೊಸ ಹೆಸರನ್ನು ಸೂಚಿಸುವಂತೆ ಟ್ವಿಟರ್‌ ಖಾತೆಯಲ್ಲಿ ಕೇಳಿಕೊಂಡಿದ್ದರು. ಇದರೊಂದಿಗೆ ಯಾರು ಉತ್ತಮ ಹೆಸರನ್ನು ಸೂಚಿಸುತ್ತಾರೋ ಅವರಿಗೆ ಆಕರ್ಷಕ ಬಹುಮಾನವನ್ನೂ ಕೂಡ ನೀಡಲಾಗುವುದೆಂದು ಘೋಷಿಸಿದ್ದರು. ತದನಂತರ ಆನಂದ್‌ ಮಹೀಂದ್ರಾ ಈ ಎಸ್‌ಯುವಿಗೆ ” ಬಾಝ್‌” ಎಂದು ಮರುನಾಮಕರಣವನ್ನು ಮಾಡಿದ್ದರು. ಆಂಗ್ಲ ಭಾಷೆಯಲ್ಲಿ ಇದರ ಅರ್ಥ “ಹಾಕ್‌” ಎಂದು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *