ಇಂದೋರ್‌ ರ‍್ಯಾಗಿಂಗ್ ಪ್ರಕರಣ: ವಿದ್ಯಾರ್ಥಿನಿಯಂತೆ ನಟಿಸಿ 3 ತಿಂಗಳು ಕಾಲೇಜು ಸೇರಿದ ಕಾನ್ಸ್‌ಸ್ಟೇಬಲ್‌

ಇಂದೋರ್‌ ರ‍್ಯಾಗಿಂಗ್ ಪ್ರಕರಣ: ವಿದ್ಯಾರ್ಥಿನಿಯಂತೆ ನಟಿಸಿ 3 ತಿಂಗಳು ಕಾಲೇಜು ಸೇರಿದ ಕಾನ್ಸ್‌ಸ್ಟೇಬಲ್‌

ನ್ಯೂಸ್ ಆ್ಯರೋ : ರ‍್ಯಾಗಿಂಗ್ ಪ್ರಕರಣವನ್ನು ಭೇದಿಸಲು ಪೊಲೀಸ್‌ ಕಾನ್ಸ್‌ಸ್ಟೇಬಲ್ ಒಬ್ಬರು ವಿದ್ಯಾರ್ಥಿನಿಯಾಗಿ 3 ತಿಂಗಳು ಕಾಲೇಜು ಸೇರಿಕೊಂಡಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ.

ಈ ಬಗ್ಗೆ ಮಾತನಾಡಿದ ಹಿರಿಯ ಇನ್ಸ್ ಪೆಕ್ಟರ್ ತೆಹಜೀಬ್ ಕಾಜಿ, ಇಂದೋರ್‌ನ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಕೆಲ ತಿಂಗಳು ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡುತ್ತಿದ್ದರು ಎಂದು ದೂರುಗಳು ಬಂದಿತ್ತು. ಮೊದಲ ವರ್ಷದ ವಿದ್ಯಾರ್ಥಿಗಳಿಂದ ಅಸಭ್ಯವಾಗಿ ವರ್ತಿಸಬೇಕು, ದಿಂಬಿನ ಜೊತೆ ಲೈಂಗಿಕವಾಗಿ ನಟಿಸಬೇಕು ಈ ರೀತಿಯ ವರ್ತನೆಯನ್ನು ಮಾಡಬೇಕೆಂದು ಕಿರುಕುಳ ನೀಡುತ್ತಿರುವ ಬಗ್ಗೆ ತಿಳಿದುಬಂದಿತ್ತು. ಈ ಬಗ್ಗೆ ವಿದ್ಯಾರ್ಥಿಗಳು ಪೊಲೀಸರೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದರು. ಪ್ರಕರಣವನ್ನು ಭೇದಿಸಲು ಈ ರೀತಿ ಕಾರ್ಯಚರಣೆ ಮಾಡಬೇಕಾಯಿತು ಎಂದರು.

ಶಾಲಿನಿ ಅವರ ನೇತೃತ್ವದಲ್ಲಿ ಕಾನ್ಸ್‌ ಸ್ಟೇಬಲ್‌ ಗಳು ಪೊಲೀಸ್‌ ಬಟ್ಟೆ ಬಿಟ್ಟು ಕಾಲೇಜಿನ ಯೂನಿಫಾರಂನ್ನು ಧರಿಸಿಕೊಂಡು ಹೋಗುತ್ತಿದ್ದರು. ಅಲ್ಲಿ ವಿದ್ಯಾರ್ಥಿಗಳೊಂದಿಗೆ ಸ್ನೇಹಮಯವಾಗಿದ್ದು, ನಿಧಾನವಾಗಿ ಆಗುತ್ತಿರುವ ಕಿರುಕುಳದ ಬಗ್ಗೆ ಶಾಲಿನಿ ಮಾಹಿತಿ ಕಲೆ ಹಾಕಲು ಶುರು ಮಾಡಿದ್ದಾರೆ. ಯಾರಿಗಾದರೂ ಶಾಲಿನಿ ಪೊಲೀಸ್‌ ಎಂದು ಸಂಶಯ ಬಂದರೆ ಆ ಕೂಡಲೇ ಅವರು ವಿಷಯವನ್ನು ಬದಲಾಯಿಸಿ ಬೇರೆ ವಿಷಯದ ಬಗ್ಗೆ ಮಾತಾನಾಡುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಲಿನಿ ಅವರು, ನಾನು ಪ್ರತಿದಿನ ಕಾಲೇಜಿಗೆ ಹೋಗುತ್ತಿದ್ದೆ. ಮುಕ್ತವಾಗಿ ಮಾತನಾಡುತ್ತಾ ರ‍್ಯಾಗಿಂಗ್ ಘಟನೆಗಳನ್ನು ಕೇಳುತ್ತಾ ಹೋದೆ. ನನ್ನ ಬಗ್ಗೆ ಸಂಶಯದ ಪ್ರಶ್ನೆ ಕೇಳುವಾಗ ನಾನು ಮಾತು ಬದಲಾಯಿಸುತ್ತಿದ್ದೆ. ನನ್ನ ಬಳಿ ಬ್ಯಾಗ್‌, ಯೂನಿಫಾರಂ, ಪುಸ್ತಕಗಳಿದ್ದವು. ವಿದ್ಯಾರ್ಥಿಯಂತೆಯೇ ಹೋಗುತ್ತಿದ್ದೆ ಎಂದರು.

ಇನ್ನೂ ಈ ಪ್ರಕರಣದಲ್ಲಿ ಶಾಲಿನಿ ಅವರು 11 ಮಂದಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿದ್ದು ಅವರನ್ನು ಕಾಲೇಜಿನಿಂದ ಹಾಗೂ ಹಾಸ್ಟೆಲ್‌ ನಿಂದ ಅಮಾನತು ಮಾಡಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *