ಹೊಸ ಆವೃತ್ತಿಯೊಂದಿಗೆ ಇನ್ನೋವಾ ಹೈಕ್ರಾಸ್ ಅನಾವರಣ: ಭಾರತದಲ್ಲಿ ಬುಕ್ಕಿಂಗ್ ಆರಂಭ, ಇಲ್ಲಿದೆ ಐಷರಾಮಿ ಕಾರಿನ ಸಂಪೂರ್ಣ ಮಾಹಿತಿ

ಹೊಸ ಆವೃತ್ತಿಯೊಂದಿಗೆ ಇನ್ನೋವಾ ಹೈಕ್ರಾಸ್ ಅನಾವರಣ: ಭಾರತದಲ್ಲಿ ಬುಕ್ಕಿಂಗ್ ಆರಂಭ, ಇಲ್ಲಿದೆ ಐಷರಾಮಿ ಕಾರಿನ ಸಂಪೂರ್ಣ ಮಾಹಿತಿ

ನ್ಯೂಸ್ ಆ್ಯರೋ: ಟೊಯೊಟಾ ಕಂಪೆನಿಯ ಇನ್ನೋವಾ ಹೈಕ್ರಾಸ್‌ ಹೊಸ ಆವೃತ್ತಿಯೊಂದಿಗೆ ಅನಾವರಣಗೊಂಡಿದ್ದು, ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ.
ಇನ್ನೂ ₹50 ಸಾವಿರ ಮೊತ್ತಕ್ಕೆ ಬುಕ್ಕಿಂಗ್ ಆರಂಭಗೊಂಡಿದ್ದು, ಜನವರಿ ತಿಂಗಳಿನಲ್ಲಿ ಆಟೋ ಎಕ್ಸ್‌ ಪೋದಲ್ಲಿ ಬೆಲೆಯನ್ನು ಘೋಷಿಸುವ ಸಾಧ್ಯತೆ ಇದೆ. ಅದೇ ತಿಂಗಳಿಂದ ವಿತರಣೆ ಕೂಡ ಪ್ರಾರಂಭವಾಗುತ್ತದೆ ಎಂದು ತಿಳಿದುಬಂದಿದೆ.

ಐದು ವೇರಿಯೆಂಟ್‌ಗಳಲ್ಲಿ ಇನ್ನೋವಾ ಹೈಕ್ರಾಸ್:

ಇನ್ನೋವಾ ಹೈಕ್ರಾಸ್ ಅನ್ನು ಐದು ವೇರಿಯೇಂಟ್‌ ಗಳಲ್ಲಿ ನೀಡಲಾಗುತ್ತಿದ್ದು, ಅವು G, GX, VX, ZX, ಮತ್ತು ZX(O)ಗಳಾಗಿವೆ. ಆದ್ರೆ ನೀವು ಪ್ರಬಲ-ಹೈಬ್ರಿಡ್ ಪವರ್‌ಟ್ರೇನ್ ಅನ್ನು ಟಾಪ್-ಸ್ಪೆಕ್ VX ಮತ್ತು ZX ಟ್ರಿಮ್‌ಗಳೊಂದಿಗೆ ಮಾತ್ರ ಆಯ್ಕೆ ಮಾಡಬಹುದಾಗಿದೆ.

ಇನ್ನಷ್ಟು ಸ್ಟೈಲಿಸ್ ಲುಕ್‌ನಲ್ಲಿ ಇನ್ನೋವಾ ಹೈಕ್ರಾಸ್‌:

ಇನ್ನೂ ಹೈಕ್ರಾಸ್‌ ಇನ್ನೋವಾದ ಹೊರಗಿನ ಲುಕ್‌ ಅನ್ನು ಸ್ವಲ್ಪ ಬದಲಾಯಿಸಿ ಇನ್ನಷ್ಟು ಸ್ಟೈಲಿಶ್‌ ಲುಕ್‌ ನೀಡಲಾಗಿದೆ. ಮುಂಭಾಗದ ಪ್ರೊಫೈಲ್ ಹೆಚ್ಚು ನೇರವಾಗಿದ್ದು, ಜೇನುಗೂಡು ಜಾಲರಿ ಗ್ರಿಲ್ ಮತ್ತು ಸ್ಲೀಕರ್ ಹೆಡ್‌ಲ್ಯಾಂಪ್‌ಗಳು ಇದರ ಜೊತೆಗೆ ದಪ್ಪನೆಯ ಬಂಪರ್‌ ಗಮನ ಸೆಳೆಯುತ್ತದೆ. ಅದಲ್ಲದೆ ಸೈಡ್ ಪ್ರೊಫೈಲ್ ಹೈಲೈಟಾಗಿದೆ.

ಕ್ರಿಸ್ಟಾಗಿಂತ ಸ್ವಲ್ಪ ಭಿನ್ನವಾಗಿದೆ ಹೈಕ್ರಾಸ್ ಇನ್ನೋವಾ:

ದೊಡ್ಡ 18-ಇಂಚಿನ ಮಿಶ್ರಲೋಹಗಳು, ತೆಳುವಾದ ಬಾಡಿ ಕ್ಲಾಡಿಂಗ್‌ನಿಂದಾಗಿ ಮತ್ತಷ್ಟು ಎದ್ದು ಕಾಣುತ್ತದೆ. ಅದಲ್ಲದೆ ಗಾತ್ರದಲ್ಲೂ ಕ್ರಿಸ್ಟಾಗಿಂತ ಸ್ವಲ್ಪ ದೊಡ್ಡದಾಗಿದೆ. ಇದರಲ್ಲಿ ಗಮನಾರ್ಹ ಬದಲಾವಣೆಯೆಂದರೆ 100 ಎಂಎಂ ಉದ್ದದ ವೀಲ್‌ಬೇಸ್. ಇನ್ನು ಹಿಂಭಾಗದಲ್ಲಿ ಪ್ರೊಫೈಲ್ ಕ್ರಿಸ್ಟಾದಕ್ಕಿಂತ ಸ್ವಲ್ಪ ಭಿನ್ನವಾಗಿದ್ದು ಹೊಸ ಸುತ್ತುವ ಎಲ್ಇಡಿ ಟೈಲ್ ಲೈಟ್‌ ಮತ್ತು ದಪ್ಪನೆಯ ಹಿಂಭಾಗದ ಬಂಪರ್ ಹೊಂದಿರುವುದು ವಿಶೇಷವಾಗಿದೆ.

ಒಳ ವಿನ್ಯಾಸದಲ್ಲಿ ಆಧುನಿಕ ಸ್ಪರ್ಶ:

ಹೈಕ್ರಾಸ್‌ ಇನೋವಾದ ಇಂಟೀರಿಯರ್‌ ಗೆ ಆಧುನಿಕ ಸ್ಪರ್ಶವನ್ನು ನೀಡಲಾಗಿದೆ. ಒಳಭಾಗದಲ್ಲಿ ಕಪ್ಪು ಮತ್ತು ಕಂದು ಬಣ್ಣದ ಡ್ಯುಯೆಟ್‌ ಟೋನ್‌ ಥೀಮ್‌ ಕಣ್ಣಿಗೆ ತಂಪು ನೀಡುತ್ತದೆ. ಅದಲ್ಲದೆ ಮೆತ್ತನೆಯ ಮೆಟೀರಿಯಲ್‌ಗಳು ಮನಸೆಳೆಯುತ್ತವೆ. ಗೇರ್ ಲಿವರ್ ಅನ್ನು ನೇರವಾಗಿ ಸೆಂಟರ್ ಕನ್ಸೋಲ್‌ನಲ್ಲಿ ಎಸಿ ವೆಂಟ್‌ಗಳ ಕೆಳಗೆ ಅಳವಡಿಸಲಾಗಿದೆ.

ಹೊಸ ಪ್ರೀಮಿಯಂ ವೈಶಿಷ್ಟ್ಯಗಳು

  1. ವಿಶಾಲವಾದ ಸನ್‌ರೂಫ್
  2. 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೆ
  3. 3.10-ಇಂಚಿನ ಟಚ್‌ಸ್ಕ್ರೀನ್
  1. ವಯರ್‌ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ
  2. ಜೆಬಿಎಲ್ ಸೌಂಡ್‌ ಸಿಸ್ಟಂ
  3. ಕನೆಕ್ಟೆಡ್‌ ಕಾರ್‌ ಟೆಕ್ನಾಲಜಿ
  4. ಮುಂದಿನ ಸೀಟ್‌ ಗಳು ಎಲೆಕ್ಟ್ರಿಕಲಿ ಸರಿಹೊಂದುವಂತಾಗಿದೆ.
  5. ಎರಡನೇ ಸಾಲಿನಲ್ಲಿ ಪವರ್ ಹೊಂದಾಣಿಕೆಯ ಕ್ಯಾಪ್ಟನ್ ಸೀಟುಗಳು
  6. ಡ್ಯುಯಲ್ 10-ಇಂಚಿನ ಹಿಂಭಾಗದ ಟಚ್‌ಸ್ಕ್ರೀನ್ ವ್ಯವಸ್ಥೆ
  7. ಪೂರ್ಣ ಎಲ್ಇಡಿ ಲೈಟಿಂಗ್

ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ:

ಹೊಸ ಆವೃತ್ತಿ ಹೈಕ್ರಾಸ್ ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅವು ಯಾವುದೆಂದರೆ

*360 ಡಿಗ್ರಿ ಕ್ಯಾಮೆರವನ್ನು ಅಳವಡಿಸಲಾಗಿದೆ

*ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್‌ ತುರ್ತು ಬ್ರೇಕಿಂಗ್, ಲೇನ್ ನಿರ್ಗಮನ ಎಚ್ಚರಿಕೆ, ಲೇನ್ ಕೀಪ್ ಅಸಿಸ್ಟ್, ಆಟೋ ಹೈ ಬೀಮ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆಯನ್ನು ನೀಡಲಾಗಿದೆ.

*ಬ್ಲೈಂಡ್ ಸ್ಪಾಟ್ ಮಾನಿಟರ್

*ಆರು ಏರ್‌ ಬ್ಯಾಗ್‌ ಗಳನ್ನು ಅಳವಡಿಸಲಾಗಿದೆ

*ಬೆಟ್ಟದ ಹಿಡಿತ/ಇಳಿತ ನಿಯಂತ್ರಣವನ್ನು ಒಳಗೊಂಡಿದೆ.

*ಇಎಸ್‌ಪಿ-ಎಲೆಕ್ಟ್ರಾನಿಕ್ ಸ್ಟಬಿಲಿಟಿ ಪ್ರೋಗ್ರಾಂ

*ಆಟೋ ಬ್ರೇಕ್ ಹಿಡಿತದೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

ಎಂಜಿನ್‌ಗಳನ್ನು ಪ್ರಬಲ ಹೈಬ್ರಿಡ್ ತಂತ್ರಜ್ಞಾನಗಳೊಂದಿಗೆ ತಯಾರಿಸಲಾಗಿದ್ದು, ಇನ್ನೋವಾದಲ್ಲಿ ಪೆಟ್ರೋಲ್ ಎಂಜಿನ್ 2.7-ಲೀಟರ್‌ಗಳಿದ್ದು ಅದನ್ನು ಹೈಕ್ರಾಸ್‌ ನಲ್ಲಿ 2-ಲೀಟರ್‌ಗೆ ಇಳಿಸಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *