ಲಿಮಿಟ್‌ ಮೀರದಿದ್ದರೂ ಫೋನ್‌ ಪೇಯಲ್ಲಿ ಹಣ ವರ್ಗಾವಣೆಯಾಗುತ್ತಿಲ್ವಾ: ಯಾಕೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತೆ ಗೊತ್ತಾ?

ಲಿಮಿಟ್‌ ಮೀರದಿದ್ದರೂ ಫೋನ್‌ ಪೇಯಲ್ಲಿ ಹಣ ವರ್ಗಾವಣೆಯಾಗುತ್ತಿಲ್ವಾ: ಯಾಕೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತೆ ಗೊತ್ತಾ?

ನ್ಯೂಸ್ ಆ್ಯರೋ: ಖಾತೆಯಲ್ಲಿ ಹಣವಿದ್ದು, ದಿನದ ಹಣ ವರ್ಗಾವಣೆಯ ಮಿತಿ ಮೀರದಿದ್ದರೂ ಕೆಲವೊಮ್ಮೆ ನಿಮ್ಮ ಫೋನ್‌ಪೇ ಮತ್ತು ಗೂಗಲ್‌ಪೇ ಆ್ಯಪ್‌ಗಳಲ್ಲಿ ಹಣ ಕಳುಹಿಸುವಾಗ ಡೈಲಿ ಲಿಮಿಟ್‌ ಮುಗಿದಿದೆ ಎಂದು ಬರುತ್ತದೆ. ಏಕೆಂದರೆ ಎನ್‌ಪಿಸಿಐ ಪ್ರಕಾರ ಒಂದು ದಿನಕ್ಕೆ ನೀವು ನಡೆಸಬಹುದಾದ ಒಟ್ಟು ಯುಪಿಐ ವಹಿವಾಟುಗಳ ಮೇಲೆ ಕೂಡ ಲಿಮಿಟ್‌ ವಿಧಿಸಲಾಗಿದೆ.

ದೈನಂದಿನ ಅಗತ್ಯಗಳಲ್ಲಿ ಯುಪಿಐ ಪಾವತಿ ಅಪ್ಲಿಕೇಶನ್‌ಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಬಳಕೆದಾರರ ಅನುಕೂಲಕ್ಕೆ ಆಗುವಂತಹ ಫೀಚರ್ಸ್‌ಗಳು ಬಂದಿದ್ದು, ದೈನಂದಿನ ವಹಿವಾಟಿನ ವಿಚಾರದಲ್ಲಿ ಸರ್ಕಾರ ನಿರ್ಬಂಧವನ್ನು ಕೂಡ ಹೇರಿದೆ. ಇಲ್ಲಿದೆ ಯುಪಿಐ ಮೂಲಕ ಒಂದು ದಿನದಲ್ಲಿ ನೀವು ಎಷ್ಟು ವಹಿವಾಟು ನಡೆಸಬಹುದಾದ ಮಾಹಿತಿ.

ಫೋನ್‌ಪೇ

ಫೋನ್‌ಪೇ, ಗೂಗಲ್‌ ಪೇ, ಪೇಟಿಎಂ ಸೇರಿದಂತೆ ಹಲವು ಯುಪಿಐ ಆ್ಯಪ್‌ಗಳ ಮೂಲಕ ಹಣ ವರ್ಗಾವಣೆ ಪ್ರಮಾಣ ಹೆಚ್ಚಾದಂತೆ ಸರ್ಕಾರ ಕೂಡ ಹೊಸ ನೀತಿ ನಿಯಮಗಳ್ನು ಜಾರಿಗೆ ಮಾಡಿದೆ. ಇದೀಗ ಎನ್‌ಪಿಸಿಐ ನಿಯಮಾವಳಿಗಳ ಪ್ರಕಾರ ಯುಪಿಐ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಒಬ್ಬ ವ್ಯಕ್ತಿ ದಿನಕ್ಕೆ ಗರಿಷ್ಠ ಒಂದು ಲಕ್ಷ ಹಣವನ್ನು ವರ್ಗಾವಣೆ ಮಾಡಬಹುದು. ಆದರೆ ಕೆನರಾ ಬ್ಯಾಂಕ್‌ ಅಕೌಂಟ್‌ ಹೊಂದಿರುವ ಬಳಕೆದಾರರು ದಿನಕ್ಕೆ 25,000ರೂ.ಗಳನ್ನು ಮಾತ್ರ ವರ್ಗಾವಣೆ ಮಾಡಲು ಅವಕಾಶ ನೀಡಿದೆ.

ಹಣ ವರ್ಗಾವಣೆ ಮಿತಿ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾವಣೆ: ಹಣ ವರ್ಗಾವಣೆ ಮಿತಿ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತದೆ. ಆದರೆ ಒಂದು ದಿನದ ಗರಿಷ್ಠ ವಹಿವಾಟು ಮಾತ್ರ ಒಂದು ಲಕ್ಷಕ್ಕೆ ಸೀಮಿತವಾಗಿದೆ. ಈ ವಿಷಯ ತಿಳಿಯದಿದ್ದರೆ ನಿಮ್ಮ ಖಾತೆಯಲ್ಲಿ ಹಣವಿದ್ದರೂ ಅಗತ್ಯದ ಸಂದರ್ಭದಲ್ಲಿ ವಹಿವಾಟು ನಡೆಸಲು ಸಾಧ್ಯವಾಗದಿರಬಹುದು. ಅಂದರೆ ಒಬ್ಬ ವ್ಯಕ್ತಿ ಯುಪಿಐ ಬಳಸಿಕೊಂಡು ಒಂದು ದಿನಕ್ಕೆ ಇಪ್ಪತ್ತು ವರ್ಗಾವಣೆಗಳನ್ನು ಮಾತ್ರ ಮಾಡಬಹುದಾಗಿದೆ. ಡೈಲಿ ಲಿಮಿಟ್‌, ಇಲ್ಲವೇ ದೈನಂದಿನ ಯುಪಿಐ ವಹಿವಾಟುಗಳ ಲಿಮಿಟ್‌ ಮುಗಿದ ನಂತರ ಮತ್ತೆ ಹಣ ಕಳುಹಿಸಬೇಕಾದರೆ ನೀವು 24 ಗಂಟೆಗಳ ಕಾಲ ಕಾಯಬೇಕು.

ಒಂದು ಲಕ್ಷದವರೆಗೆ ಗೂಗಲ್‌ ಪೇ ಟ್ರಾನ್ಸಕ್ಷನ್‌ ಲಿಮಿಟ್‌:

ಗೂಗಲ್‌ ಪೇನಲ್ಲಿ ಒಂದು ದಿನಕ್ಕೆ ನಡೆಸಬಹುದಾದ ವಹಿವಾಟಿನ ಒಟ್ಟು ಮೊತ್ತ ಒಂದು ಲಕ್ಷದಾಗಿದ್ದು, ಆದರೆ ಎಲ್ಲಾ ಯುಪಿಐ ಅಪ್ಲಿಕೇಶನ್‌ಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ದಿನಕ್ಕೆ ಒಟ್ಟು 10 ವಹಿವಾಟುಗಳನ್ನು ನಡೆಸಬಹುದು. ಒಂದು ವೇಳೆ ನೀವು ಮನಿ ರಿಕ್ವೆಸ್ಟ್‌ನಲ್ಲಿ 2,000ರೂ. ಕ್ಕಿಂತ ಹೆಚ್ಚಿನ ಹಣವನ್ನು ಕಳುಹಿಸಿದರೆ, ಗೂಗಲ್‌ಪೇ ತನ್ನ ದೈನಂದಿನ ವಹಿವಾಟಿನ ಮಿತಿಗಳನ್ನು ಅಮಾನತುಗೊಳಿಸುತ್ತದೆ.

ಫೋನ್‌ ಪೇ ಟ್ರಾನ್ಸಕ್ಷನ್‌ ಲಿಮಿಟ್‌: ಫೋನ್‌ ಪೇ ದೈನಂದಿನ ಯುಪಿಐ ವಹಿವಾಟಿನ ಮಿತಿಯನ್ನು 1,00,000ರೂ.ವರೆಗೂ ನೀಡಿದೆ. ಆದರೆ ಫೋನ್‌ಪೇ ಮೂಲಕ ಒಬ್ಬ ವ್ಯಕ್ತಿಯು ಪ್ರತಿದಿನ ಗರಿಷ್ಠ 10 ಅಥವಾ 20 ವಹಿವಾಟುಗಳನ್ನು ಮಾತ್ರ ನಡೆಸಬಹುದಾಗಿದೆ. ಫೋನ್‌ಪೇ ನಲ್ಲಿಯೂ ಕೂಡ ಎರಡು ಸಾವಿರ ರೂ.ವರೆಗೆ ಮನಿ ರಿಕ್ವೆಸ್ಟ್‌ ಕಳುಹಿಸಬಹುದಾಗಿದೆ.

ಪೇಟಿಎಂ ಯುಪಿಐ ವರ್ಗಾವಣೆ ಮಿತಿ:

ಪೇಟಿಎಂ ಯುಪಿಐ ಬಳಕೆದಾರರಿಗೆ 1 ಲಕ್ಷದವರೆಗೆ ಹಣ ವರ್ಗಾವಣೆಯನ್ನು ಮಾಡಬಹುದು. ಇದಲ್ಲದೆ, ಅಪ್ಲಿಕೇಶನ್ ದೈನಂದಿನ ಮತ್ತು ಗಂಟೆಗೊಮ್ಮೆ ಹಣ ವರ್ಗಾವಣೆಗೆ ನಿರ್ಬಂಧಗಳನ್ನು ವಿಧಿಸಿದೆ. ಪೇಟಿಎಂ ಗಂಟೆಯ ಹಣ ವರ್ಗಾವಣೆಯ ಮಿತಿ 20,000ರೂ ಆಗಿದೆ. ಅಂದರೆ ಪ್ರತಿ ಗಂಟೆಗೆ ಒಟ್ಟು 5 ವಹಿವಾಟುಗಳನ್ನು ಮಾತ್ರ ಬೆಂಬಲಿಸಲಿದೆ. ದಿನದಲ್ಲಿ 20 ವಹಿವಾಟು ನಡೆಸಬಹುದು.

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *