ಕೊನೆಗೂ ಕಾಂತಾರ ತುಳು ಚಿತ್ರ ತೆರೆಗೆ ಬರಲು ಮುಹೂರ್ತ ಫಿಕ್ಸ್: ಟ್ರೇಲರ್ ಗೆ ಪ್ರಶಂಸೆಯ ಸುರಿಮಳೆ

ನ್ಯೂಸ್ ಆ್ಯರೋ: ಜಗತ್ತೇ ಮೆಚ್ಚಿದ ಕಾಂತಾರ ಸಿನಿಮಾ ಮತ್ತೊಮ್ಮೆ ಸದ್ದು ಮಾಡಲು ಸಜ್ಜಾಗಿದ್ದು, ಇದೀಗ ತುಳುವಿನಲ್ಲಿ ಟ್ರೇಲರ್ ರಿಲೀಸ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.



ಕಾಂತಾರದಲ್ಲಿ ತುಳುನಾಡಿನ ನೆಲದ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ತೋರಿಸಲಾಗಿದ್ದು, ಸಿನಿಮಾವನ್ನು ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಜನರ ಪ್ರತಿಕ್ರಿಯೆ ಹಾಗೂ ಪರಭಾಷಿಗರ ಕೋರಿಕೆ ಮೇರೆಗೆ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗೆ ಡಬ್ ಮಾಡಲಾಯಿತು. ಈ ವೇಳೆ ಕರಾವಳಿಗರು ಕೂಡ ತುಳು ಭಾಷೆಯಲ್ಲಿ ಡಬ್ ಮಾಡುವಂತೆ ಒತ್ತಾಯ ಮಾಡಿದ್ದರು. ಅದರ ಭಾಗವಾಗಿಯೇ ಈಗ ‘ಕಾಂತಾರ’ ತುಳು ಭಾಷೆಗೆ ಡಬ್ ಆಗಿ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮೊದಲು ‘ಕಾಂತಾರ’ ಸಿನಿಮಾದ ತುಳು ಭಾಷೆಯ ಟ್ರೇಲರನ್ನು ರಿಲೀಸ್ ಮಾಡಲಾಗಿದ್ದು, ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.



ಟ್ರೇಲರ್ ಬಿಡುಗಡೆ ಮಾಡಿರುವ ಹೊಂಬಾಳೆ ಸಂಸ್ಥೆಯವರು ಟ್ವೀಟ್ ಮಾಡಿ, ‘ತುಳುವನಾಡ ದಂತಕಥೆನ್ ತುಳು ಭಾಷೆಡೇ ತೂಪುನ ಪೊರ್ತು ಬೈದ್ಂಡ್. ಲೋಕೊರ್ಮೆ ಜನಕುಲೆನ ಉಡಲ್ ಗೆಂದಿನ ‘ಕಾಂತಾರ’ದ ತುಳು ಅವತರಣಿಕೆ ನಮ್ಮ ದೇಶೋಡು ಉಂದುವೇ ಬರ್ಪಿನ ಡಿಸೆಂಬರ್ 2, 2022ದಾನಿ ನಿಕ್ಲೆನ ಮುಟ್ಟದ ಚಿತ್ರಮಂದಿರಲೆಡ್ ಬುಡುಗಡೆ ಆವರೆ ಉಂಡು. ಪಿದಯಿ ದೇಶೊಡು ನವೆಂಬರ್ 25ತಾರೀಖ್‌ ದಾನಿ ಬುಡುಗಡೆ ಆವೆರೆ ಉಂಡು’ ಅಂತಾ ಬರೆದುಕೊಂಡಿದ್ದಾರೆ.



ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ `ಕಾಂತಾರ’ ತುಳು ಭಾಷೆಯಲ್ಲಿ ಡಿಸೆಂಬರ್ 2ರಂದು ಹಾಗೂ ವಿದೇಶದಲ್ಲಿ ಇದೇ ತಿಂಗಳ 25ರಂದು ಬಿಡುಗಡೆಯಾಗಲಿದೆ.



ಕಾಂತಾರ ಸಿನಿಮಾವನ್ನು ನಿರ್ದೇಶನ ಮಾಡಿ ರಿಷಬ್ ಶೆಟ್ಟಿ ನಾಯಕ ನಟನಾಗಿ ನಟಿಸಿದ್ದಾರೆ. ಇದು ತುಳುನಾಡಿನ ಪ್ರಕೃತಿ ಹಾಗೂ ನೆಲದ ಸಂಸ್ಕೃತಿ ನಡೆಯುವ ಸಿನಿಮಾವಾಗಿದೆ. ತುಳುವಿನಲ್ಲಿ ಕಾಂತಾರ ಸಿನಿಮಾ ಮತ್ತಷ್ಟು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶವಿಲ್ಲ ಎಂಬುದು ಟ್ರೇಲರ್‌ಗೆ ಸಿಕ್ಕ ಅದ್ಭುತ ಪ್ರಶಂಸೆ ಮೂಲಕ ತಿಳಿಯುತ್ತದೆ. ಟ್ರೇಲರ್‌ನಲ್ಲಿ ಎಲ್ಲೂ ಕೂಡ ದೋಷ ಬಾರದಂತೆ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಇನ್ನೂ ತುಳುವರು ಮತ್ತೊಮ್ಮೆ ತಮ್ಮ ಮಾತೃಭಾಷೆ ಮೂಲಕ ಸಿನಿಮಾ ನೋಡಲು ಕಾತುರರಾಗಿದ್ದಾರೆ.



ಕಾಂತಾರ ಈಗಾಗಲೇ 50 ದಿನ ಪೂರೈಸಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಒಟಿಟಿಯಲ್ಲೂ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *