ಮೊಬೈಲ್ ಇಂಟರ್ನೆಟ್ ಬೇಗ ಖಾಲಿ ಆಗ್ತಿದ್ಯಾ…? – ಈ ಟ್ರಿಕ್ಸ್ ಫಾಲೋ ಮಾಡಿ ನೋಡಿ….!!

ಮೊಬೈಲ್ ಇಂಟರ್ನೆಟ್ ಬೇಗ ಖಾಲಿ ಆಗ್ತಿದ್ಯಾ…? – ಈ ಟ್ರಿಕ್ಸ್ ಫಾಲೋ ಮಾಡಿ ನೋಡಿ….!!

ನ್ಯೂಸ್ ಆ್ಯರೋ : ಹೊಸ ಹೊಸ ಮೊಬೈಲ್ ಅಪ್ಲಿಕೇಶನ್ ಬಂದಂತೆ ನಾವು ಮೊಬೈಲ್ ಗೆ ಹೆಚ್ಚೆಚ್ಚು ಎಡಿಕ್ಟ್ ಆಗುತ್ತಿದ್ದೇವೆ. ಅದರ ಜೊತೆಗೆ ನೆಟ್ ಪ್ಯಾಕ್ ಕೂಡಾ ಇದೀಗ ದುಬಾರಿಯಾಗಿಬಿಟ್ಟಿದೆ. ಮೊಬೈಲ್​ನಲ್ಲಿ ಡೇಟಾ ಪ್ಯಾಕ್ ಹಾಕಿಸಿದ್ದರೂ, ಇಂಟರ್​ನೆಟ್ ಬೇಗ ಖಾಲಿ ಆಗ್ತಾ ಇದ್ಯಾ? ಅದಕ್ಕೆ ಕಾರಣವೇನು? ದಿನಕ್ಕೆ 2 ಜಿಬಿ ಡೇಟಾ ಇದ್ದರೂ ಸಾಕಾಗುತ್ತಿಲ್ಲವೇ? ರೀಲ್ಸ್ ನೋಡುತ್ತಲೇ ಡೇಟಾ ಖಾಲಿ ಆಗುತ್ತಿರುವ ಬಗ್ಗೆ ಮೆಸೇಜ್ ಬರುತ್ತಿದೆಯಾ? ಹಾಗಾದರೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ನೆಟ್​ ಬೇಗ ಖಾಲಿ ಆಗದಿರಲು ಏನು ಮಾಡಬೇಕು? ಡೇಟಾ ಪ್ಯಾಕ್ ಹೆಚ್ಚು ಇರುವಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ.

ಇವತ್ತು ಡೇಟಾ ಪ್ಯಾಕ್ ದುಬಾರಿಯಾಗುತ್ತಿದ್ದರೂ ಕೂಡಾ ಅದರ ಬಳಕೆ ತ್ವರಿತವಾಗಿ ಹೆಚ್ಚುತ್ತಲೇ ಇದೆ.

  1. ಸ್ಮಾರ್ಟ್ಫೋನ್ ಗಳಲ್ಲಿ ಕೆಲವು ಆ್ಯಪ್ ಗಳು ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತದೆ. ಆಗ ನೆಟ್ ಬೇಗ ಖಾಲಿಯಾಗುತ್ತದೆ. ಇದಕ್ಕಾಗಿ ನೀವು ಸೆಟ್ಟಿಂಗ್ ಗೆ ಹೋಗಿ ಆಟೋಮ್ಯಾಟಿಕ್ ಡೌನ್ ಲೋಡ್ ಆಪ್ಶನ್ ನ್ನು ಆಫ್ ಮಾಡಬೇಕು. ವೈಫೈ ಬಳಸುವಾಗ ಮಾತ್ರ ಅಪ್ಲಿಕೇಶನ್ ಗಳನ್ನು ಅಪ್ಡೇಟ್ ಮಾಡೋದು ಒಳಿತು.
  2. ಆಂಡ್ರಾಯ್ಡ್ ಫೋನ್ ಗಳು ಡೇಟಾ ಉಳಿತಾಯ ಮೋಡ್ ಎಂಬ ಆಯ್ಕೆಯನ್ನು ಹೊಂದಿದೆ. ಈ ಆಯ್ಕೆ ನಿಮ್ಮ ಮೊಬೈಲ್ ನಲ್ಲಿದ್ದು ಅದನ್ನು ಸಕ್ರಿಯಗೊಳಿಸಿದ್ರೆ ಡೇಟಾ ಉಳಿಸಬಹುದು. ಡೇಟಾ ಸೇವಿಂಗ್ ಮೋಡ್ ನಿಮ್ಮ ಫೋನ್ ನಲ್ಲಿ ಅನಗತ್ಯ ಡೇಟಾ ಪೋಲು ಆಗುವುದನ್ನು ತಡೆಯುತ್ತದೆ. ಇದರಿಂದ ನಿಮಗೆ ಬಳಕೆಗೆ ಡೇಟಾ ಹೆಚ್ಚು ಲಭ್ಯ ಆಗುತ್ತದೆ.
  3. ಇತ್ತೀಚಿನ ದಿನಗಳಲ್ಲಿ ಗೂಗಲ್ ಮ್ಯಾಪ್ ಆ್ಯಪ್ ಬಳಸೋದು ಹೆಚ್ಚಾಗಿದೆ. ಇದು ಅತ್ಯಂತ ಹೆಚ್ಚು ಡೇಟಾವನ್ನು ಬಳಸಿಕೊಳ್ಳುತ್ತೆ‌. ಹಾಗಿರುವಾಗ ಇಂತಹ ಆ್ಯಪ್ ಗಳನ್ನು ಆಫ್ ಲೈನ್ ನಲ್ಲಿ ಉಪಯೋಗಿಸಬೇಕೇ ಹೊರತು ಆನ್ಲೈನ್ ನಲ್ಲಲ್ಲ. ಈ ಆ್ಯಪ್ ನ ಅಪ್ಡೇಟ್ ನ್ನು ಕೂಡಾ ವೈಫೈನಲ್ಲೇ ಮಾಡೋದು ಉತ್ತಮ.‌
  4. ನಾವು ಎಲ್ಲಿಯಾದರೂ ಸಂಚರಿಸುತ್ತಿದ್ದರೆ ಯೂಟ್ಯೂಬ್ ವೀಡಿಯೋಗಳನ್ನು ಅಥವಾ ಇನ್ನಾವುದೋ ಆ್ಯಪ್ ಬಳಸೋದು ಹೆಚ್ಚು. ಸಂಚಾರದ ಸಂದರ್ಭದಲ್ಲಿ ವೈಫೈ ಅನುಕೂಲತೆ ಇದ್ದರೆ ವೀಡಿಯೋ ಆಗಲೇ ಡೌನ್ಲೋಡ್ ಮಾಡಿಡುವುದು ಉತ್ತಮ. ನಂತರ ಆಫ್ಲೈನಲ್ಲೇ ಅದನ್ನು ವೀಕ್ಷಿಸಬಹುದು.
  5. ವೀಡಿಯೋ ಮತ್ತು ಫೋಟೋಗಳನ್ನು ಆಟೋಮ್ಯಾಟಿಕ್ ಡೌನ್ ಲೋಡ್ ಆಪ್ಶನ್ ನಿಂದ ತೆಗೆಯಿರಿ. ಆಗ ಡೇಟಾ ಉಳಿತಾಯವಾಗುತ್ತದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *