ಫೋನ್ ಹಾಳಾಗಿದೆ ಅಂತ ಸರ್ವೀಸ್ ಸೆಂಟರ್ ಗೆ ಕೊಡೋ ಮುನ್ನ ಈ ವಿಷಯಗಳನ್ನು ಗಮನಿಸಿ – ಯಾಮಾರುವ ಮುನ್ನ ಎಚ್ಚರವಿರಲಿ..!!

ಫೋನ್ ಹಾಳಾಗಿದೆ ಅಂತ ಸರ್ವೀಸ್ ಸೆಂಟರ್ ಗೆ ಕೊಡೋ ಮುನ್ನ ಈ ವಿಷಯಗಳನ್ನು ಗಮನಿಸಿ – ಯಾಮಾರುವ ಮುನ್ನ ಎಚ್ಚರವಿರಲಿ..!!

ನ್ಯೂಸ್ ಆ್ಯರೋ : ಮೊಬೈಲ್ ಯಾವುದೇ ಕಂಪೆನಿಯದ್ದಾಗಿರಲಿ. ಆಗಾಗ ಹಾಳಾಗುತ್ತಲೇ ಇರುತ್ತದೆ‌. ಹಾಗಂತ ಮೊಬೈಲ್ ಬಳಸದೆ ಇರೋಕೆ ಆಗುತ್ತಾ…? ನಾವು ಸರ್ವೀಸ್ ಸೆಂಟರ್ ಗೆ ಕೊಡ್ತೇವೆ.ಇಂದಿನ ದಿನಗಳಲ್ಲಿ ಸ್ಮಾರ್ಟ್​ಫೋನ್ ಬಳಕೆ ಅನಿವಾರ್ಯವಾಗಿದೆ. ಇದು ನಮ್ಮ ಅಗತ್ಯ ವಸ್ತುವಾಗಿ ಮಾರ್ಪಟ್ಟಿದೆ. ಸ್ಮಾರ್ಟ್​ಫೋನ್ ಕೇವಲ ಕರೆಗಳನ್ನು ಮಾಡಲು ಬಳಸಲಾಗುವ ಗ್ಯಾಜೆಟ್ ಮಾತ್ರವಲ್ಲದೆ, ಬ್ಯಾಂಕಿಂಗ್‌ನಿಂದ ಪ್ರಾರಂಭಿಸಿ ಅನೇಕ ಕಾರ್ಯಗಳಿಗೆ ಬಳಸಲಾಗುತ್ತದೆ.

ವೈಯಕ್ತಿಕ ಫೋಟೋಗಳು, ಬ್ಯಾಂಕಿಂಗ್ ವಿವರಗಳು ಮತ್ತು ಇತರ ಹಲವು ವೈಯಕ್ತಿಕ ಡೇಟಾವು ಸ್ಮಾರ್ಟ್​ಫೋನ್‌ನಲ್ಲಿ ಇರುತ್ತದೆ. ಆದರೆ, ಈ ಫೋನ್ ಒಂದಲ್ಲ ಒಂದು ದಿನ ಹಾಳಾಗುವುದು ಖಂಡಿತ. ಆಗ ಫೋನ್ ಅನ್ನು ಸರ್ವಿಸ್ ಸೆಂಟರ್​ನಲ್ಲಿ ನೀಡಬೇಕಾಗುತ್ತದೆ. ಹೀಗೆ ಫೋನ್ ರಿಪೇರಿಗೆ ನೀಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಆದರೆ ಅದಕ್ಕೂ ಮುನ್ನ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

  1. ನಿಮ್ಮ ಮೊಬೈಲ್‌ನಲ್ಲಿ ಯಾವುದೇ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಹೊಂದಿದ್ದರೆ, ನೀವು ಮೊದಲು ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಬೇಕು. ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವ ಮೊದಲು ಪಾಸ್‌ವರ್ಡ್ ಮತ್ತು ಯೂಸರ್ ನೇಮ್ ಅನ್ನು ಬರೆದಿಟ್ಟುಕೊಳ್ಳುವುದು ಉತ್ತಮ.
  2. ಸ್ಮಾರ್ಟ್‌ಫೋನ್‌ನ ನೋಟ್ ಪ್ಯಾಡ್‌ನಲ್ಲಿ ಪಾಸ್‌ವರ್ಡ್ ಮತ್ತು ವೈಯಕ್ತಿಕ ವಿವರಗಳನ್ನು ಬರೆಯುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಫೋನ್ ಅನ್ನು ಯಾರಿಗಾದರೂ ನೀಡುವಾಗ ನೋಟ್ ಪ್ಯಾಡ್​ನಲ್ಲಿ ಇರುವುದನ್ನು ಅಳಿಸಲು ಮರೆಯಬೇಡಿ.
  3. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬಳಸದವರೇ ಇಲ್ಲ. ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ದುರುಪಯೋಗಪಡಿಸಿಕೊಳ್ಳದಿರಲು, ಎಲ್ಲಾ ಖಾತೆಗಳಿಂದ ಲಾಗ್ ಔಟ್ ಮಾಡಿದ ನಂತರವೇ ನೀವು ಫೋನ್ ಅನ್ನು ಸರ್ವಿಸ್​ಗೆ ನೀಡಬೇಕು.
  4. ಜಿಮೇಲ್ ಖಾತೆಯೂ ಲಾಗ್ ಔಟ್ ಆದ ನಂತರವೇ ಫೋನ್ ಸರ್ವಿಸ್​ ಕೇಂದ್ರಕ್ಕೆ ನೀಡಬೇಕು. ಜಿಮೇಲ್ ಖಾತೆಗೆ ಸಂಬಂಧಿಸಿದ ಎಲ್ಲಾ ವಿವರಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
  5. ಫೋನ್ ಗ್ಯಾಲರಿಯಲ್ಲಿ ಯಾವುದೇ ವೈಯಕ್ತಿಕ ಫೋಟೋಗಳಿದ್ದರೆ, ಅವುಗಳನ್ನು ಡಿಲೀಟ್ ಮಾಡಿ. ಫೋಟೋಗಳು ಬೇಕು ಎಂದಿದ್ದರೆ, ಅವುಗಳನ್ನು ಮೆಮೊರಿ ಕಾರ್ಡ್ ಅಥವಾ ಪೆನ್ ಡ್ರೈವ್‌ಗೆ ವರ್ಗಾಯಿಸಿ.

ಈ ಮೇಲಿನ ಅಂಶಗಳನ್ನು ನೀವು ಮಾಡಿದರೆ ಮೊಬೈಲ್ ಸರ್ವೀಸ್ ಗೆ ಕೊಟ್ಟರೂ ದತ್ತಾಂಶಗಳು ಸೇಫ್ ಆಗಿರುತ್ತದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *