ಪಾರ್ಸೆಲ್ ಸೇವೆಗಾಗಿ ಟ್ರಕ್ ಆರಂಭಿಸಲಿದೆಯಂತೆ ಕೆಎಸ್ಆರ್ಟಿಸಿ…! – ಇದೇನಿದು ಹೊಸ ಪ್ಲಾನ್..? ಯಾಕಾಗಿ ಅಂತೆ?

ಪಾರ್ಸೆಲ್ ಸೇವೆಗಾಗಿ ಟ್ರಕ್ ಆರಂಭಿಸಲಿದೆಯಂತೆ ಕೆಎಸ್ಆರ್ಟಿಸಿ…! – ಇದೇನಿದು ಹೊಸ ಪ್ಲಾನ್..? ಯಾಕಾಗಿ ಅಂತೆ?

ನ್ಯೂಸ್ ಆ್ಯರೋ : ರಾಜ್ಯದ ಮಹಿಳೆಯರು ಇದೀಗ ‘ ಶಕ್ತಿ ಯೋಜನೆ’ಯಡಿಯಲ್ಲಿ ಫ್ರೀಯಾಗಿ ಸಂಚರಿಸುತ್ತಿದ್ದಾರೆ. ಸರ್ಕಾರಿ ಬಸ್ ಗಳಲ್ಲಿ ಯಾವುದೇ ಕಿರಿಕಿರಿ ಇಲ್ಲದೆ ಈ ಯೋಜನೆಯನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.‌ ಇದೀಗ ಕೆಎಸ್ ಆರ್ ಟಿಸಿ ವತಿಯಿಂದ ಪಾರ್ಸೆಲ್ ಸೇವೆ ವಿಸ್ತರಿಸಲು ಯೋಜಿಸಲಾಗಿದೆ.

ರಾಜ್ಯದ ಮಹಿಳೆಯರಿಗೆ ‘ಶಕ್ತಿ’ ಉಚಿತ ಯೋಜನೆ ಜಾರಿಯಾದ ಬಳಿಕ ಕೆಎಸ್‌ಆರ್‌ಟಿಸಿ ಆದಾಯ ಸರಿದೂಗಿಸಲು ಇದೀಗ ಸಾರಿಗೆ ಇಲಾಖೆ ಪಾರ್ಸೆಲ್‌ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿಯು ತನ್ನದೇ ಆದ 20 ಪಾರ್ಸೆಲ್‌ ಟ್ರಕ್‌ಗಳನ್ನು ಹೊಂದಲು ನಿರ್ಧರಿಸಿದ್ದು, ಮುಂದಿನ ತಿಂಗಳಿನಿಂದ ಪಾರ್ಸೆಲ್‌ ಸೇವೆ ಆರಂಭಗೊಳ್ಳಲಿರುವುದಾಗಿ ‘ಪ್ರಜಾವಾಣಿ’ ವರದಿ ಮಾಡಿದೆ.

20 ಟ್ರಕ್‌ ಖರೀದಿ:

ಈಗಾಗಲೇ ರಾಜ್ಯಾದ್ಯಂತ ಓಡಾಟ ನಡೆಸುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪಾರ್ಸೆಲ್‌ ಸೇವೆ ನೀಡಲಾಗುತ್ತಿದೆ. ಆದರೆ, ಇದರಿಂದ ಹೆಚ್ಚಿನ ಪಾರ್ಸೆಲ್ ಕೊಂಡೊಯ್ಯುವುದು ಕಷ್ಟ ಸಾಧ್ಯ. ಆದ್ದರಿಂದ ಪಾರ್ಸೆಲ್‌ ಸೇವೆಗಾಗಿ ಟ್ರಕ್‌ ಹೊಂದಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.

ಈಗಾಗಲೇ ಟ್ರಕ್‌ಗಳ ಖರೀದಿಯ ಪ್ರಕ್ರಿಯೆಗಳು ನಡೆದಿದೆ. ಮುಂದಿನ ತಿಂಗಳು ಡಿಸೆಂಬರ್‌ 15ರ ಒಳಗೆ 20 ಟ್ರಕ್‌ಗಳು ಪಾರ್ಸೆಲ್‌ ಸೇವೆ ಒದಗಿಸುವ ಕುರಿತು ಕೆಎಸ್‌ಆರ್‌ಟಿಸಿ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಉತ್ತಮ ಸ್ಪಂದನೆ ನಿರೀಕ್ಷೆ:

ಈಗಾಗಲೇ ಬಸ್‌ಗಳಲ್ಲಿ ಸಾಗಾಟ ನಡೆಸುವ ಪಾರ್ಸೆಲ್‌ ಸೇವೆಯನ್ನು ಕೆಎಸ್‌ಆರ್‌ಟಿಸಿ ಮುಂದುವರೆಸಲಿದೆ. ಜೊತೆಗೆ ಟ್ರಕ್‌ ಮೂಲಕನೂ ಈ ಸೇವೆಯನ್ನು ಸಾರ್ವಜನಿಕರಿಗೆ ನೀಡಲಿದೆ. ಈಗಾಗಲೇ ಕೃಷಿ ಉಪಕರಣ, ಟೆಕ್ಸ್‌ಟೈಲ್ಸ್‌ ಹಾಗೂ ಆಟೋಮೊಬೈಲ್‌ ಕಂಪೆನಿಗಳಿಂದ ನೂತನ ಪಾರ್ಸೆಲ್‌ ಸೇವೆಗೆ ಉತ್ತಮವಾಗಿ ಸ್ಪಂದಿಸುವ ನಿರೀಕ್ಷೆಯನ್ನು ಕೆಎಸ್‌ಆರ್‌ಟಿಸಿ ಹೊಂದಿದೆ.

ಕೆಎಸ್ ಆರ್ ಟಿಸಿ ಈ ಯೋಚನೆಯನ್ನು ಯೋಜನಾತ್ಮಕವಾಗಿ ಅನುಷ್ಠಾನವಾದಾಗ ರಾಜ್ಯದಲ್ಲಿ ಇನ್ನು ಏನೆಲ್ಲಾ ಬದಲಾವಣೆ ಆಗುತ್ತದೆ ನೋಡಬೇಕಷ್ಟೆ..

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *